ಗೋವಾ ಕನ್ನಡ ಸಮಾಜದಿಂದ ರಾಜ್ಯೋತ್ಸವ ಆಚರಣೆ

Chandrashekhara Kulamarva
0


ಪಣಜಿ: ನಮ್ಮ ಕನ್ನಡ ನಾಡಿನ ಹೆಮ್ಮೆಯ ಭಾಷೆ, ಸಂಸ್ಕೃತಿ, ಪರಂಪರೆ ಬೆಳೆಸುವುದರ ಸಲುವಾಗಿ ನಾವು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಬೇಕು ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ನುಡಿದರು.


ಪ್ರತಿ ವರ್ಷದಂತೆಯೇ ನವೆಂಬರ್ 1 ರಂದು ಗೋವಾ ಕನ್ನಡ ಸಮಾಜ ಪಣಜಿ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಾಂಕೇತಿಕವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಅರುಣಕುಮಾರ್ ಮಾತನಾಡಿದರು. ಹೊರನಾಡ ಗೋವೆಯಲ್ಲಿ ಗೋವಾ ಕನ್ನಡ ಸಮಾಜವು ಕನ್ನಡ, ಭಾಷೆ, ಸಂಸ್ಕೃತಿ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಮುಂಬರುವ ದಿನಗಳಲ್ಲಿಯೂ ಇದೇ ರೀತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಎಲ್ಲರ ಸಹಕಾರ ಅಗತ್ಯ ಎಂದು ಅರುಣಕುಮಾರ ನುಡಿದರು.


ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಉಪಾಧ್ಯಕ್ಷ ಶ್ರೀನಿವಾಸ್ ಪೈ, ಸಹಕಾರ್ಯದರ್ಶಿ ಗಣೇಶ ಹೆಗಡೆ, ಪ್ರಹ್ಲಾದ್ ಗುಡಿ, ಸದಸ್ಯರಾದ ಸಿ.ಜಿ.ಕಣ್ಣೂರ್, ಸಂಜೀವ ಕುಲಕರ್ಣಿ, ಶಂಸುದ್ದೀನ್  ಸೊಲ್ಲಾಪುರಿ, ಸುನೀಲ್ ಕುಮಟಳ್ಳಿ, ನೀರಜ್ ದಿವಾಕರ್, ಮಂಜುನಾಥ ದೊಡ್ಮನಿ, ಮತ್ತಿತರರು ಉಪಸ್ಥಿತರಿದ್ದರು. ಪ್ರಸಕ್ತ ನವೆಂಬರ್ ತಿಂಗಳಲ್ಲಿಯೇ ಗೋವಾ ಕನ್ನಡ ಸಮಾಜದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಯೋಜನೆ ಮಾಡುವ ಕುರಿತಂತೆಯೂ ಉಪಸ್ಥಿತರಿದ್ದ ಎಲ್ಲ ಪದಾಧಿಕಾರಿಗಳು ಸಮ್ಮತಿ ಸೂಚಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top