ಬೆಂಗಳೂರು: ಬೆಂಗಳೂರಿನ ಜೈನ್ (ಡೀಮ್ಡ್ -ಟು- ಬಿ ಯೂನಿವರ್ಸಿಟಿ)ಯ 14ನೆಯ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರದಾನ ಸಮಾರಂಭ ಕೋಣನಕುಂಟೆಯ ಪ್ರೆಸ್ಟೀಜ್ ಶ್ರೀ ಹರಿ ಕೊಡೇಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಕನ್ವೆನ್ಶನ್ ಹಾಲ್ ನಲ್ಲಿ ಜರುಗಿತು. ನಾಲ್ಕು ದಿನಗಳ ವರೆಗೆ ನಡೆಯುವ ಈ ಸಮಾರಂಭದಲ್ಲಿ ದೇಶದ, ವಿದೇಶದ 17687 ಅಭ್ಯರ್ಥಿಗಳು ಪದವಿಯನ್ನು ಸ್ವೀಕರಿಸಲಿದ್ದಾರೆ.
ಮಹತ್ವದ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ಖ್ಯಾತಿಯ ಎಚ್.ಈ. ಡಾ. ಮಾಜಿನ್ ಅಲ್ ಮಸೂದಿ ಇಂಚಾರ್ಜ್ ಆಫ್ ಲೀಗ್ ಆಫ್ ಅರಬ್ ಸ್ಟೇಟ್ಸ್ ಮಿಶನ್ & ಮಿನಿಸ್ಟರ್ ಪ್ಲೇನಿಪೊಟೆನ್ಸರಿ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
“ಪ್ರಪಂಚದಲ್ಲಿ ಬದಲಾವಣೆ ನಿರಂತರವಾಗಿ ನಡೆಯುತ್ತಿರುತ್ತದೆ. ಆಧುನಿಕ ತಂತ್ರಜ್ಞಾನವು ವ್ಯವಹಾರ ಜಗತ್ತಿಗೆ ಮತ್ತು ಜಾಗತಿಕ ಸವಾಲುಗಳನ್ನು ಪರಿಹರಿಸಿ ವ್ಯವಹಾರವನ್ನು ಸುಸೂತ್ರವಾಗಿ ಸಾಗಲು ಬಹಳ ಸಹಾಯಕಾರಿಯಾಗಿದೆ. ಇದು ವಾಣಿಜ್ಯ ಕ್ಷೇತ್ರದಲ್ಲಿ ಸತ್ಯವೆಂದು ಸಾಬೀತಾಗಿದೆ. ಇಂದು ತಂತ್ರಜ್ಞಾನವನ್ನು ಹೊರತು ಪಡಿಸಿ ವ್ಯವಹಾರ ನಿರ್ವಹಿಸುವುದು ಅಸಾಧ್ಯ. ಜಗತ್ತಿನ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಣಕಾಸಿನ, ವ್ಯವಹಾರದ ಮತ್ತು ವ್ಯವಸ್ಥಾಪನೆಯ ಸನ್ನಿವೇಶಗಳು ಮನುಷ್ಯನ ಅರಿವಿನ ವಿಸ್ತಾರವನ್ನು ಹೆಚ್ಚಿಸಿವೆ. ವಿದ್ಯಾರ್ಥಿಗಳೇ, ಪದವಿ ಪಡೆದ ನಂತರ ಕಲಿಕೆ ಮುಗಿಯಿತು ಎಂದು ಅಂದು ಕೊಳ್ಳುವುದು ಸರಿಯಾದುದಲ್ಲ. ಜೀವನ ಪರ್ಯಂತ ಹಲವು ಕ್ಷೇತ್ರಗಳಿಂದ ಹಲುವು ಬಗೆಯ ಜ್ಞಾನ ನಿರಂತರವಾಗಿ ಪಡೆಯುದು ಅನಿವಾರ್ಯ ವೆನಿಸುತ್ತದೆ. ಇದು ವ್ಯಕ್ತಿಯ ವೈಯಕ್ತಿಕ ಬದುಕಿಗೂ ಹಾಗೂ ವೃತ್ತಿ ಬದುಕಿಗೂ ಅತ್ಯವಶ್ಯಕ” ಎಂದರು.
ಇನ್ನೋರ್ವ ಅತಿಥಿಗಳಾದ ಡಾ. ಪ್ರಜೇರ್ ಸ್ಕಾಟ್ ಜೇಮ್ಸ್ ಅಡ್ವೈಜರ್ ಟು ದ್ ಮಿನಿಸ್ಟರ್ ಅಫ್ ಎಜುಕೇಶನ್ ಯುನೈಟೆಡ್ ಅರಬ್ ಎಮಿರೇಟ್ಸ್ ಇವರು ಮಾತನಾಡುತ್ತಾ “ವ್ಯಕ್ತಿಯೋರ್ವನು ಬದುಕಿನಲ್ಲಿ ಯಾವತ್ತೂ ಧನಾತ್ಮಕವಾಗಿ ಯೋಚಿಸಬೇಕು.ಜೀವನದಲ್ಲಿ ನಾವು ಧನಾತ್ಮಕವಾಗಿದ್ದಲ್ಲಿ ಎದುರಿಗಿರುವ ಸರಿದೂಗಿಸಬಹುದು ಹಾಗೂ ವ್ಯಕ್ತಿಯ ಮೇಲೆ ಪ್ರಭಾವ ಬೀರಬಹುದು. ಇದರಿಂದ ವ್ಯಕ್ತಿಗೆ ಗೌರವ ಆದರಗಳು ಹರಿದು ಬರುತ್ತವೆ. ನೆನಪು ಒಂದು ಸಂಪನ್ಮೂಲ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ನೆನಪುಗಳನ್ನು ಕಟ್ಟಿ ಕೊಳ್ಳಬೇಕು. ಸರಳತೆ ಬಹಳ ಮುಖ್ಯ. ಸರಳತೆಯಿಂದ ನಡೆದುಕೊಂಡಲ್ಲಿ ನಮ್ಮ ವ್ಯಕ್ತಿತ್ವದ ಪ್ರತಿಬಿಂಬ ನಾವು ಬದುಕುವ ಸಾಮಾಜಿಕರ ಮೇಲೆ ಬೀರುತ್ತದೆ. ಇದರಿಂದ ವ್ಯಕ್ತಿತ್ವಕ್ಕೂ ಘನತೆ ಬರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸರಳತೆ ಬೆಳೆಸಿ ಕೊಳ್ಳುವುದು ಜ್ಞಾನದಷ್ಟೇ ಮುಖ್ಯ” ವೆಂದರು.
ಸಮಾರಂಭದಲ್ಲಿ ಪಾಲ್ಗೊಂಡ ಜೈನ್ ಸಂಸ್ಥೆಯ ಸಂಸ್ಥಾಪಕ ಮತ್ತು ಜೈನ್ (ಡೀಮ್ಡ್-ಟು -ಬಿ ಯೂನಿವರ್ಸಿಟಿ)ಯ ಚಾ ನ್ಸಲರ್ ಡಾ.ಚೆನ್ ರಾಜ್ ರಾಯ್ ಚೆಂದ್ ಮಾತಾಡುತ್ತಾ “ಪ್ರೀತಿಯ ಅಭ್ಯರ್ಥಿಗಳೇ ನಿಮಗೆಲ್ಲ ಉದಾತ್ತ ಭವಿಷ್ಯವಿದೆ. ದಯವಿಟ್ಟು ತಾವು ಪಡೆದ ಪದವಿಯ ಜ್ಞಾನವನ್ನು ಮುಂದಿಟ್ಟುಕೊಂಡು ಸುಂದರ ಜೀವನ ರೂಪಿಸಿಕೊಂಡು ಸಮಾಜದ ಜನರಿಗೆ ಮಾದರಿಯಾಗಬೇಕು. ಈ ಹಿಂದೆ ಪದವಿ ಪಡೆದ ಅಸಂಖ್ಯಾತ ಅಭ್ಯರ್ಥಿಗಳು ತಾವು ಪಡೆದ ಜ್ಞಾನದಿಂದ ಉತ್ತಮ ಭವಿಷ್ಯ ಕಂಡುಕೊಂಡು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಜೊತೆಗೆ ಎಷ್ಟೋ ಕುಟುಂಬಗಳಿಗೆ ದುಡಿಮೆ, ಆರ್ಥಿಕ ಸಹಾಯವನ್ನು ಮಾಡುತ್ತಾ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಇಂದು ಸಮಾಜದ ಮತ್ತು ದೇಶದ ಕುರಿತು ಅಂತಃಕರಣ ಬೆಳೆಸಿ ಕೊಂಡು ಉತ್ತಮ ನಾಗರಿಕರಾಗುವುದು ಮುಖ್ಯ” ಎಂದರು.
ವೈಸ್ ಚಾನ್ಸಲರ್ ಡಾ.ರಾಜ್ ಸಿಂಗ್ ಎಲ್ಲರನ್ನೂ ಸ್ವಾಗತಿಸುತ್ತಾ ಜೈನ್ (ಡೀಮ್ಡ್ -ಟು-ಬಿ ಯೂನಿವರ್ಸಿಟಿ) ಯ ಹುಟ್ಟು, ಬೆಳವಣಿಗೆ ಮತ್ತು ಅದರ ವಿಕಾಸ, ಜಾಗತಿಕ ಮಟ್ಟದಲ್ಲಿ ಜೈನ್ ವಿಶ್ವ ವಿದ್ಯಾಲಯದ ಪ್ರತಿಭೆಗಳ ಪ್ರಭಾವವನ್ನು ಮತ್ತು ಸಾಧನೆಯನ್ನು ವೇದಿಕೆಯ ಸಮ್ಮುಖದಲ್ಲಿ ಪ್ರಸ್ತಾಪಿಸುತ್ತ ಅಭಿನಂದಿಸಿದರು.ಮಹತ್ವದ ಈ ಸಮಾರಂಭದಲ್ಲಿ ಕುಲಸಚಿವ ಡಾ. ಜಿತೇಂದ್ರಕುಮಾರ್ ಮಿಶ್ರಾ, ಮೌಲ್ಯಮಾಪನ ವಿಭಾಗದ ನಿಯಂತ್ರಣಾಧಿಕಾರಿ ಪ್ರೊ ಎನ್ ಎಸ್ ಮಂಜುನಾಥ ಹಾಗೂ ಪ್ರೊ ವೈಸ್ ಚಾನ್ಸಲರ್ ಡಾ. ದಿನೇಶ್ ನೀಲಕಂಠ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಶ್ರೀಕಂಠ ಸ್ವಾಮಿ ಪ್ರೊ ಶ್ರೀಧರ್ ಮೂರ್ತಿ, ಡಾ ಎನ್ ವಿ ಎಚ್ ಕೃಷ್ಣನ್ ಹಾಗೂ ವಿಶ್ವ ವಿದ್ಯಾಲಯದ ವಿವಿಧ ವಿಭಾಗದ ಪದಾಧಿಕಾರಿಗಳು, ಪ್ರಾಧ್ಯಾಪಕರು ಪದವಿ ಪಡೆದ ಅಭ್ಯರ್ಥಿಗಳು ಮೊದಲಾದವರು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ