ಸಾಗರದಲ್ಲಿ ಇ-ಆಸ್ತಿ ನೋಂದಣಿ ಕುರಿತ ಉಚಿತ ಮಾಹಿತಿ ಕೇಂದ್ರ

Upayuktha
0


ಸಾಗರ: 'ಆನಂದ ಸಾಗರ' ಟ್ರಸ್ಟ್‌, 'ನೆರವಿನ ಕೈಗಳು' ಟ್ರಸ್ಟ್‌ ಹಾಗೂ ಹಿರಿಯ ನಾಗರಿಕರಿಗಾಗಿ' ವೇದಿಕೆ ಜತೆಗೂಡಿ ಇ-ಆಸ್ತಿ ನೋಂದಣಿ ಜಾಗೃತಿ ಅಭಿಯಾನವನ್ನು ನಡೆಸುತ್ತಿದ್ದು, ಸಾಗರದ ಎಲ್ಲ ನಾಗರಿಕರಿಗೆ ಉಚಿತ ಮಾಹಿತಿ ನೀಡುತ್ತಿವೆ.


ಪ್ರತೀ ಸೋಮವಾರ ಮತ್ತು ಶುಕ್ರವಾರದಂದು ಸಾಗರ ನಗರಸಭೆಯ ಎದುರಿನ ರವಿ ಬುಕ್ ಹೌಸ್ ಆವರಣದಲ್ಲಿ ಬೆಳಗ್ಗೆ 10:30ರಿಂದ 12:30ರ ವರೆಗೆ ಈ ಮಾಹಿತಿ ಹಂಚಿಕೆ ಮಾಡಲಾಗುತ್ತಿದೆ.


ಸಾಗರ ನಗರಸಭೆ ವ್ಯಾಪ್ತಿಯಲ್ಲಿರುವ ಸೈಟು, ಮನೆ, ಕಟ್ಟಡಗಳ ಇ-ಖಾತೆಯನ್ನು ಮಾಡಿಸುವುದು ಈಗ ಕಡ್ಡಾಯವಾಗಿದ್ದು ಇದಕ್ಕೆ ಪೂರಕವಾದ ದಾಖಲೆಗಳು ಯಾವುವು? ಅವುಗಳನ್ನು ನಗರಸಭೆ ಕಚೇರಿಗೆ ಹೇಗೆ ಸಲ್ಲಿಸಬೇಕು? ಇತ್ಯಾದಿ ವಿಷಯಗಳ ಸಂಪೂರ್ಣ ಮಾಹಿತಿಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ.


ಇ-ಖಾತಾ ಸಂಯೋಜನೆಯಿಂದ ಸಾರ್ವಜನಿಕರಿಗೆ ಈ ಕೆಳಗಿನ ಉಪಯೋಗಗಳಿವೆ:

* ಇ-ಆಸ್ತಿ ತಂತ್ರಾಂಶದಿಂದಾಗಿ ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯುವುದು.

* ಇ- ಖಾತಾದಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರನ್ನು ಗುರುತಿಸಲು ಸಾಧ್ಯ.

* ನೈಜ ಮಾಲೀಕರಿಗೆ ವಂಚಿಸಿ ಬೇರೆಯವರಿಂದ ಸ್ವತ್ತುಗಳ ನೋಂದಣಿಯನ್ನು ತಪ್ಪಿಸುವುದು.

* ಸ್ವತ್ತುಗಳ ಖರೀದಿದಾರರಿಗೆ ಸ್ವತ್ತಿನ ನೈಜ ಮಾಲೀಕರನ್ನು ಗುರುತಿಸುವುದು.

* ಭವಿಷ್ಯದಲ್ಲಿ ಉಂಟಾಗಬಹುದಾದ ಸ್ವತ್ತಿನ ವ್ಯಾಜ್ಯಗಳ, ಕಾನೂನು ತೊಂದರೆಗಳನ್ನು ತಪ್ಪಿಸುವುದು.


ವಿವಾದಿತ ಕಟ್ಟಡ, ನಿವೇಶನಗಳಿಗೆ ತಮ್ಮಿಂದ ಪರಿಹಾರ ಸೂಚಿಸಲು ಸಾಧ್ಯವಿಲ್ಲ ಎಂದು ಈ ಅಭಿಯಾನದ ಆಯೋಜಕರು ಸ್ಪಷ್ಟಪಡಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top