ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಸಾಂಸ್ಕೃತಿಕ ಸಂಭ್ರಮ-2024

Upayuktha
0

ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು, ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ: ಅಲ್ಲಂ ಪ್ರಶಾಂತ್



ಬಳ್ಳಾರಿ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊಂಗಿರಣ ಭವನದಲ್ಲಿ “ಸಾಂಸ್ಕೃತಿಕ ಸಂಭ್ರಮ-2024” ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ (ರಿ) ವತಿಯಿಂದ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅಲ್ಲಂ ಪ್ರಶಾಂತ ಉದ್ಘಾಟಿಸಿ, “ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಸಮಾಜದ ಶ್ರೇಷ್ಠ ಪರಂಪರೆಯನ್ನು ಮುಂದುವರಿಸಲು ಮುಖ್ಯವಾದ ಪಾತ್ರ ವಹಿಸುತ್ತವೆ. ಶಾಸ್ತ್ರೀಯ ನೃತ್ಯಗಳಂತಹ ಕಲೆಗಳು ನಾವೀನ್ಯತೆಯನ್ನು ಕಾಪಾಡಿಕೊಂಡು ನಮ್ಮ ಸಂಸ್ಕೃತಿಯ ಮೂಲತತ್ವಗಳನ್ನು ಬೆಳೆಸುತ್ತವೆ. ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು, ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ” ಎಂದು ತಿಳಿಸಿದರು.


ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು “ನಮ್ಮ ಮಕ್ಕಳು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ, ಅವರು ತಮ್ಮ ಪ್ರತಿಭೆಯನ್ನು ಪರಿಚಯಿಸುತ್ತಾರೆ, ಹಾಗೂ ಇದು ಅವರ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗುತ್ತದೆ. ಕಲೆಗೆ ಪ್ರೋತ್ಸಾಹ ನೀಡುವ ಈ ರೀತಿಯ ಕಾರ್ಯಕ್ರಮಗಳು ಅಗತ್ಯ. ಅದನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡರೆ, ಸಮಾಜ ಇನ್ನಷ್ಟು ಬಲಶಾಲಿಯಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ತಾವೂ ಕೂಡ ಪ್ರೋತ್ಸಾಹಿಸುವುದಾಗಿ” ತಿಳಿಸಿದರು.


ಕಾರ್ಯಕ್ರದಲ್ಲಿ ಅಲ್ಲಂ ಪ್ರಶಾಂತ್, ಮುಲ್ಲಂಗಿ ನಂದೀಶ್, ಟಿ ನಾಗಭೂಷಣ, ವಿ. ರಾಮಚಂದ್ರ, ಇತರರಿಗೆ ಸನ್ಮಾನಿಸಲಾಯಿತು.


ತುಂಗಾಗoಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ನೃತ್ಯ ಪ್ರದರ್ಶನ, ರಂಗಾರೆಡ್ಡಿ ತಂಡದಿಂದ ಸುಗಮ ಸಂಗೀತ ಮತ್ತು ವಿ ರಾಮಚಂದ್ರ ತಂಡದಿಂದ ಯಾರಿಗೆ ಬೇಕು ನನ್ನ ಕವಿತೆ ಹಾಸ್ಯ ನಾಟಕ ಪ್ರದರ್ಶನಗೊಂಡವು. ಕಲಾವಿದರಿಗೆ ಪ್ರಶಂಸೆ ಪತ್ರ ನೀಡಿ ಗೌರವಿಸಲಾಯಿತು.


ಅಸೋಸಿಯೇಷನ್ ಅಧ್ಯಕ್ಷರಾದ ಶೀಲಾ ಬ್ರಹ್ಮಯ್ಯ ಸ್ವಾಗತಿಸಿದರು, ಎಂ.ಟಿ. ಮಲ್ಲೇಶಪ್ಪ ವಂದಿಸಿದರು, ನಾಗಿರೆಡ್ಡಿ ಯಶವಂತರಾಜ್, ಪ್ರಧಾನ ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸದಸ್ಯರು, ವಿಶೇಷ ಆಹ್ವಾನಿತರು ಹಾಗೂ ಗೌರವ ಸದಸ್ಯರು ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top