ಸಾಂದರ್ಭಿಕ ಚಿತ್ರ
ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಗಳ ಎಲ್ಲ ಶಾಲೆಗಳಲ್ಲಿನ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ 'ಪ್ರತಿಭಾ ಕಾರಂಜಿ' ಕಾರ್ಯಕ್ರಮಗಳಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ.
ಶಾಲೆಗಳ ಗುರುಗಳು, ವರ್ಕಿಂಗ್ ಸ್ಟಾಫ್, ಪೋಷಕರು, ವಿದ್ಯಾರ್ಥಿಗಳು, ಊರಿನ ಸಂಘಟನೆಗಳು, SDMC ಕಮಿಟಿಗಳು, ಶಿಕ್ಷಣ ಇಲಾಖೆಯ ಸೂಚನೆಯಲ್ಲಿ ಸ್ಥಾಪನೆಯಾದ ಹಳೇ ವಿದ್ಯಾರ್ಥಿಗಳ ಸಂಘಗಳು... ಎಲ್ಲ ಸಂಭ್ರಮದಿಂದ ಯಶಸ್ವಿ ಪ್ರತಿಭಾ ಕಾರಂಜಿಗೆ ಶ್ರಮವಹಿಸುತ್ತಿದ್ದಾರೆ.
ಕಾರ್ಯಕ್ರಮಗಳು ಯಶಸ್ವಿಯಾಗಲಿ. ಶುಭಾಶಯಗಳು.
ಈ ಹಿನ್ನಲೆಯಲ್ಲಿ, ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿಗಳು, ತಾಲೂಕು ಶಿಕ್ಷಣಾಧಿಕಾರಿಗಳು, ಸಮಸ್ತ ಗುರುವೃಂದದವರಿಗೆ ಕಾರ್ಯಕ್ರಮದಲ್ಲಿ ಎಲ್ಲೂ ಪ್ಲಾಸ್ಟಿಕ್ ಅಥವಾ ಪೇಪರ್ ಲೋಟ-ಪ್ಲೇಟ್-ಚಮಚ, ಪ್ಲಾಸ್ಟಿಕ್ ಬಾಟಲ್‌ನ ನೀರು, ಅತಿಥಿಗಳಿಗೆ ಪ್ಲಾಸ್ಟಿಕ್ ರ್ಯಾಪರ್ನಲ್ಲಿ ಸುತ್ತಿದ ಹೂಗುಚ್ಚ, ಪ್ಲಾಸ್ಟಿಕ್ ರ್ಯಾಪರ್ನಲ್ಲಿ ಸುತ್ತಿದ ಹಣ್ಣಿನ ಬುಟ್ಟಿ, ಏಕ ಬಳಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಮೊಮೆಂಟೋ, ಥರ್ಮಾಕೋಲ್.... ಇತ್ಯಾದಿಗಳನ್ನು ಬಳಸದಂತೆ ಮಾಡಿ, ಕಾರ್ಯಕ್ರಮ ಮಾಡಲಿ ಎಂದು ಈ ಮೂಲಕ ಒಂದು ವಿನಂತಿ.
ಹಾಗೆ ಪ್ಲಾಸ್ಟಿಕ್ ತ್ಯಜಿಸಿ ಕಾರ್ಯಕ್ರಮ ಮಾಡುವುದರೊಂದಿಗೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ. ಜೊತೆಗೆ ಆ ಮೂಲಕ ಪರಿಸರಕ್ಕೂ, ಸಕಲ ಜೀವಿಗಳಿಗೂ, ಮುಂದಿನ ತಲೆಮಾರಿಗೂ ನಮ್ಮ ನಡೆಗಳಿಂದ ಒಂದು ಶುಭಾಶಯ ಕೋರಿದಂತಾಗುತ್ತದೆ ಎಂಬುದು ಈ ವಿನಂತಿಯ ಉದ್ದೇಶ.
ನಮ್ಮ ಭೂಮಿ ಪ್ಲಾಸ್ಟಿಕ್ ಡಂಪಿಂಗ್ ಯಾರ್ಡ್ ಆಗುತ್ತಿದ್ದು, ಇಡೀ ಪರಿಸರವೇ ಹಾಳಾಗುತ್ತಿದೆ. ಮಣ್ಣು, ನೀರು, ಗಾಳಿಗಳಲ್ಲಿ ಪ್ಲಾಸ್ಟಿಕ್ ಮೈಕ್ರೋ ಕಣಗಳು ಸೇರಿ ಜೀವ ವೈವಿದ್ಯಗಳ ಆರೋಗ್ಯವೇ ಹಾಳಾಗುತ್ತಿದೆ. ಈ ಹಿನ್ನಲೆಯಲ್ಲಿ ಮಕ್ಕಳಲ್ಲಿ ಪ್ಲಾಸ್ಟಿಕ್ ಜಾಗೃತಿ ಮೂಡಿಸಲೂ ಪ್ಲಾಸ್ಟಿಕ್ ರಹಿತ, ಅದರಲ್ಲೂ ಮೇಲೆ ಹೇಳಿದಂತಹ ಪ್ಲಾಸ್ಟಿಕ್‌ಗಳನ್ನು ಬಿಟ್ಟು ಕಾರ್ಯಕ್ರಮಗಳು ಆಗಲಿ ಎಂದು ಪ್ರೀತಿಯಿಂದ ಆತ್ಮೀಯವಾಗಿ ಈ ಮೂಲಕ ಒತ್ತಾಯ.
ಪ್ರತೀ ಜಿಲ್ಲಾ ಶಿಕ್ಷಣ ಅಧಿಕಾರಿಗಳು, ತಾಲೂಕು ಶಿಕ್ಷಣ ಅಧಿಕಾರಿಗಳು ಇದನ್ನು ತಮ್ಮ ವ್ಯಾಪ್ತಿಯ ಜಿಲ್ಲಾ/ತಾಲೂಕಿನ ಎಲ್ಲ ಶಾಲೆಗಳಿಗೆ ಸೂಚನಾ ಮೆಮೋ ಮಾಹಿತಿಯಾಗಿ ಹಂಚಿಕೊಂಡು ಅನುಷ್ಠಾನಕ್ಕೆ ಪ್ರೇರೇಪಣೆ ಮಾಡಲಿ.
ಎಲ್ಲಾ ಶಾಲಾ ಗುರು ವೃಂದದವರೂ ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ರಹಿತ ಪ್ರತಿಭಾ ಕಾರಂಜಿ ನೆಡೆಸಲು ಮುಂದಾಗಲಿ.
ಮತ್ತೊಮ್ಮೆ ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ಹೇಳೋಣ.
ಕಾರ್ಯಕ್ರಮ ಚಂದ ಆಗಲಿ"
- ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ