ಸಿ.ಎ. ಇಂಟರ್ ಮೀಡಿಯೆಟ್ ಫಲಿತಾಂಶ: ಸುಶಾಂತ್ ರಾಷ್ಟ್ರೀಯ ಮಟ್ಟದಲ್ಲಿ 36ನೇ ರ‍್ಯಾಂಕ್

Chandrashekhara Kulamarva
0

ಮೂಡುಬಿದಿರೆ: 2024 ಸೆಪ್ಟೆಂಬರ್‌ನಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಯಾದ ಸುಶಾಂತ್ 380 ಅಂಕಗಳೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ 36ನೇ ರ‍್ಯಾಂಕ್ ಗಳಿಸಿರುತ್ತಾರೆ. ಇವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ರಿತ್ವಿಕ್ ಜೆ ಶೆಟ್ಟಿ (327), ಸ್ಮಿತಾ ಎಸ್ ಹೆಗ್ಡೆ (301) ಮತ್ತು ಜ್ಯೋತಿ (300) ಇವರು ಗ್ರೂಪ್ -01 ಮತ್ತು ಗ್ರೂಪ್ -02 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಇಂಟರ್‌ಮೀಡಿಯಟ್ ಗ್ರೂಪ್ -01 ವಿಭಾಗದಲ್ಲಿ ಕಿರಣ್ (167), ಶ್ರೀರಕ್ಷಾ (165) ಮತ್ತು ಪ್ರೀತಮ್ ವಿ ನಾಯ್ಕ್ (150) ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಇಂಟರ್ ಮೀಡಿಯಟ್ ಗ್ರೂಪ್ -02 ವಿಭಾಗದಲ್ಲಿ ಮಯೂರಿ (173), ಕಲ್ಪನಾ ಗಜಾನನ ಹೆಗ್ಡೆ (170), ಸಿ ಶ್ರೇಯಾಂಕ್ ನಾಯಕ್ (164), ಪಲ್ಲವಿ ಆರ್ (160), ವಿಕ್ರಾಂದ್ ಪುಂಡಲೀಕ್ (159), ಪಾಯಲ್ ಜೆ ಬಂಗೇರಾ (155), ಅನನ್ಯ ಕೆ (151), ಸ್ಪರ್ಶ ಹೆಗ್ಡೆ (150) ಮತ್ತು ಸಿದ್ದಾರ್ಥ್ ಪಿ (110) ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮತ್ತು ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಸಿ.ಎ. ಸಂಯೋಜಕರು ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top