ರಕ್ತರಹಿತ ಪರಿವರ್ತನಾಶೀಲ ಚಳವಳಿಗಾರ ಬ್ರಹ್ಮಶ್ರೀ ನಾರಾಯಣಗುರು: ಮುದ್ದು ಮೂಡುಬೆಳ್ಳೆ

Chandrashekhara Kulamarva
0


ಮಂಗಳೂರು: ಸಮಾಜದಲ್ಲಿ ಶೋಷಿತರ ಪರ ನಿಂತುರಕ್ತರಹಿತ ಪರಿವರ್ತನಾಶೀಲ ಚಳವಳಿಯನ್ನು ಪೂರ್ಣತೆಗೆತೆಗೆದುಕೊಂಡು ಹೋದ ಸಾಮಾಜಿಕ ನೇತಾರ ಬ್ರಹ್ಮಶ್ರೀ ನಾರಾಯಣಗುರು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸ್ಥಾಪಕ ನಿರ್ದೇಶಕ ಮುದ್ದು ಮೂಡುಬೆಳ್ಳೆ ಅಭಿಪ್ರಾಯಪಟ್ಟರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಳ್ಳಲಾದ ಗುರುಚಿಂತನ ಯುವ ಮಂಥನ ಆನ್ಲೈನ್ ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದ ಮೊದಲ ಸಂಚಿಕೆ ಉದ್ಘಾಟಿಸಿ ಮಾತನಾಡಿದರು.


ʼನಾರಾಯಣಗುರು ಸುಧಾರಣಾ ಚಳವಳಿ ಮತ್ತು ಅನುಯಾಯಿಗಳುʼ ವಿಷಯದ ಕುರಿತು ವಿಶೇಷ ಉಪನ್ಯಾಸಮಾಲಿಕೆಯಲ್ಲಿ, ಬ್ರಹ್ಮಶ್ರೀ ಅವರು ತಮ್ಮ ಸೈದ್ಧಾಂತಿಕ ಚಿಂತನೆಯ ಮೂಲಕ ಇಡೀ ಸಮಾಜದಲ್ಲಿ ಒಂದಷ್ಟು ಬದಲಾವಣೆ ತರುವ ನಿಟ್ಟಿನಲ್ಲಿ ತಮ್ಮ ಬದುಕನ್ನು ಸವೆಸಿದರು. ಮತ ಯಾವುದಾದರೇನು ಮನುಷ್ಯ ಜಾತಿ ಒಂದೇ ಎಂಬ ಸಂದೇಶವನ್ನು ಶಿಷ್ಯರ ಜೊತೆಗೂಡಿ ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡಿದರು. ಒಂದೇ ಜಾತಿ ಒಂದೇ ಮತ ಎಂಬ ಸರಳ ಮಾತಿನ ಮೂಲಕ ನೈತಿಕತೆಯನ್ನು ಸಮಾಜದಲ್ಲಿ ಪಸರಿಸಿದರು ಎಂದರು.


ಜೀವನೋಪಾಯಕ್ಕೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಲ್ಲದೇ, ಧಾರ್ಮಿಕ ಕೇಂದ್ರಗಳು ನೈತಿಕತೆಯನ್ನು ಹರಡುವ ಕೇಂದ್ರಗಳಾಗಿಯೂ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. ಸಮಾಜದಲ್ಲಿ ಮಹಿಳೆಯರಿಗೆ ಸಹಕಾರ ಸಂಘಗಳನ್ನು ಸ್ಥಾಪಿಸುವ ಮೂಲಕ ಅವರ ಸ್ವಾವಂಬನೆಗೆ ಶ್ರಮಿಸಿದರು. ಆಡಂಬರದಜೀವನಕ್ಕೆ ಮಹತ್ವ ನೀಡದೇ ಸರಳವಾಗಿ ಬದುಕನ್ನು ನಡೆಸಿ ಮಾದರಿ ಎನಿಸಿಕೊಂಡ ಸಂತ ಎಂದು ಶ್ಲಾಘಿಸಿದರು. 


ಸಾಮಾಜಿಕವಾಗಿ ದೇವರಿಗೆ ಸಮಾನವಾದ ಚಿಂತನೆಗಳನ್ನು ಬೆಳೆಸಿಕೊಂಡು ಉತ್ತಮ ಜೀವನ ರೂಪಿಸಿಕೊಂಡರೆ ಆ ವ್ಯಕ್ತಿ ದೇವರಿಗೆ ಸಮನಾಗುತ್ತಾನೆ ಎಂಬ ತತ್ತ್ವದಡಿ ಧಾರ್ಮಿಕ ಚಿಂತನೆಗಳನ್ನು ಸರಳೀಕರಣಗೊಳಿಸಿದರು ಎಂದು ವಿವರಿಸಿದರು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್. ಧರ್ಮ, ಶೈಕ್ಷಣಿಕ ವಲಯದಲ್ಲಿಅಂಬೇಡ್ಕರ್, ಗಾಂಧೀಜಿ ಹಾಗೂ ನಾರಾಯಣ ಗುರುಗಳಂತಹವರ ಚಿಂತನೆಗಳನ್ನು ಯುವಜನರಿಗೆತಲುಪಿಸುವ ಕೆಲಸ ಮಾಡಬೇಕಿದೆ. ಸಮಾಜದಲ್ಲಿ ಜಾತಿ ಪ್ರಾಬಲ್ಯತೆ ಉತ್ತುಂಗದಲ್ಲಿದ್ದ ವೇಳೆಯಲ್ಲಿ ಹಿಂದುಳಿದ ವರ್ಗದ ಪರ ನಿಲ್ಲುವ ಮೂಲಕ ಇಂದಿಗೂ ಮಾದರಿಯಾಗಿದ್ದಾರೆ. ಅಂದಿನ ಯುವ ಪೀಳಿಗೆಗೆ ದೇಶದ ವಾಸ್ತವ ಪರಿಸ್ಥಿತಿಯನ್ನು ಪರಿಚಯ ಮಾಡಿಕೊಟ್ಟ ಮಹನೀಯ ನಾರಾಯಣಗುರುಎಂದು ತಿಳಿಸಿದರು.


ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿಗೌಡ, ಬ್ರಹ್ಮಶ್ರೀ ನಾರಾಯಣಗುರು ಪೀಠದ ನಿರ್ದೇಶಕ ಡಾ. ಜಯರಾಜ್‌ಎನ್., ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಪಿಲಾರ್ ಹಾಗೂ ಇತರೆ ವಿಭಾಗದಉಪನ್ಯಾಸಕರು ಉಪಸ್ಥಿತರಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top