ಕೆನರಾ ಕಾಲೇಜಿನಲ್ಲಿ ರಕ್ತದಾನ ಶಿಬಿರ

Chandrashekhara Kulamarva
0


ಮಂಗಳೂರು: ಕೆನರಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಇವುಗಳು ಲಯನ್ಸ್ ಕ್ಲಬ್- ಕದ್ರಿ ಹಿಲ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ  ಕಾಲೇಜು ಆವರಣದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಸಿಎ ಶಾಂತಾರಾಮ ಶೆಟ್ಟಿಯವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡಲು ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದರಿಂದ ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಕದ್ರಿಹಿಲ್ಸ್‌ನ ಅಧ್ಯಕ್ಷ ಲಯನ್ ಪ್ರಕಾಶ್ ಅವರು ರಕ್ತದಾನದ ಬಗ್ಗೆ ಎಲ್ಲಾ ತಪ್ಪು ಕಲ್ಪನೆಗಳನ್ನು ನಿವಾರಿಸಿದರು. ಮುಖ್ಯ ಜಿಲ್ಲಾ ಮಾರುಕಟ್ಟೆ ಅಧ್ಯಕ್ಷರಾದ ಲಯನ್ ಪ್ರಶಾಂತ್ ಜಿ.ಪೈ, ಎಂ.ಜೆ.ಎಫ್ ಮತ್ತೋರ್ವ ಮುಖ್ಯ ಅತಿಥಿಯಾಗಿದ್ದರು. ರಕ್ತದಾನದ ಪ್ರಾಮುಖ್ಯತೆಯನ್ನು ತಿಳಿಸಿದ ಅವರು ಮಾನವ ರಕ್ತ ಮತ್ತು ನೀರು ವಿಜ್ಞಾನಿಗಳು ಮರುಸೃಷ್ಟಿಸಲು ಸಾಧ್ಯವಾಗದ ಎರಡು ಪದಾರ್ಥಗಳಾಗಿವೆ ಎಂದು ತಿಳಿಸಿ, ಮಾನವೀಯತೆಗೆ ಸೇವೆ ಸಲ್ಲಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ ಎಂದರು.


ಕಾರ್ಯಕ್ರಮದ ಗೌರವ ಅತಿಥಿಯಾಗಿ ಹೆಚ್.ಡಿ.ಎಫ್.ಸಿ ಮಂಗಳೂರು ಶಾಖೆಯ ಕಿರಿಯ ಅಧಿಕಾರಿ ಶ್ರೀ ಲಕ್ಷ್ಮೀನಾರಾಯಣ ಶಾನಭಾಗ್ ಆಗಮಿಸಿದ್ದರು. ಕೆನರಾ ಕಾಲೇಜಿನ ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯವಾಗಿದ್ದು, ಪ್ರತಿಯೊಬ್ಬರೂ ಈ ಮಹತ್ವದ ಕಾರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು.


ಈ ಸಂದರ್ಭದಲ್ಲಿ ಒಟ್ಟು 164 ಯೂನಿಟ್ ರಕ್ತವನ್ನು ಯಶಸ್ವಿಯಾಗಿ ಸಂಗ್ರಹಿಸಿ ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆಗೆ ದಾನ ಮಾಡಲಾಯಿತು.


Post a Comment

0 Comments
Post a Comment (0)
To Top