ಉಡುಪಿ: ಸ್ಯಾಮ್‌ಸಂಗ್ ಆರ್ ಡಿ ಇನ್ಸ್ಟಿಟ್ಯೂಟ್ ಇಂಡಿಯಾ ಮತ್ತು ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾಲಯ 'ಸ್ಯಾಮ್‌ಸಂಗ್ ಸ್ಟುಡೆಂಟ್ ಇಕೋಸಿಸ್ಟಮ್ ಫಾರ್ ಇಂಜಿನಿಯರ್ ಡೇ ಡೇಟಾ' ಲ್ಯಾಬ್‌ನ್ನು ಸ್ಥಾಪಿಸಿದ್ದು, ಈ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಎಐ /ಎಂಎಲ್ ಹಾಗೂ ಡೇಟಾ ಇಂಜಿನಿಯರಿಂಗ್ ಕುರಿತು ಅಧ್ಯಯನ ಮಾಡಲು ಒದಗಿಸುತ್ತಿದೆ. ಲ್ಯಾಬ್‌ನಲ್ಲಿ ಜಿಸಿಯುನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಎಸ್‌ಆರ್‌ಐ-ಬಿಯ ಹಿರಿಯ ಇಂಜಿನಿಯರ್‌ಗಳ ಜೊತೆಗೆ ನೈಸರ್ಗಿಕ ಭಾಷಾ ತಿಳುವಳಿಕೆ ಮಾತು ಮತ್ತು ಪಠ್ಯ ಗುರುತಿಸುವಿಕೆ ಮತ್ತು ಯಂತ್ರ ಕಲಿಕೆಯಂತಹ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳ ಮೂಲಕ ವಿಶೇಷ ಕಲಿಕೆಯ ಅನುಭವವನ್ನು ಪಡೆಯಲಿದ್ದಾರೆ.
ಸ್ಯಾಮ್‌ಸಂಗ್ ಈಗಾಗಲೇ ಕರ್ನಾಟಕದಲ್ಲಿ ಎರಡು ಮತ್ತು ತಮಿಳುನಾಡಿನಲ್ಲಿ ತಲಾ ಎರಡು ಲ್ಯಾಬ್ ಗಳು ಸೇರಿದಂತೆ ಒಟ್ಟು ನಾಲ್ಕು ಎಸ್ಇಇಡಿ ಲ್ಯಾಬ್‌ಗಳನ್ನು ಪ್ರಾರಂಭಿಸಿದೆ. ಈ ಮೂಲಕ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಐ ಮತ್ತು ಡೇಟಾ-ಸಂಬಂಧಿತ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದು ಎಸ್‌ಆರ್‌ಐ ಬಿನ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೋಹನ್ ರಾವ್ ಗೋಲಿ ಮತ್ತು ಕುಲಪತಿ ಡಾ. ಜೋಸೆಫ್ ವಿ.ಜಿ ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ