ದೇಶಕ್ಕೆ ಸಂವಿಧಾನ ಮಾತ್ರ ಇರಬೇಕು, ಷರಿಯಾ ಕಾಯ್ದೆ ಅಲ್ಲ: ಸಿ.ಟಿ. ರವಿ

Upayuktha
0


ಬಳ್ಳಾರಿ: 
ವಕ್ಫ್‌  ಕಾನೂನು ಬಳಸಿಕೊಂಡು ಸಚಿವ ಜಮೀರ್ ಅಹಮ್ಮದ್ ಲ್ಯಾಂಡ್  ಜಿಹಾದ್ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ನಾನು ಈ ವಿಷಯದಲ್ಲಿ ಮುಸ್ಲಿಮರ ಬಗ್ಗೆ ಆರೋಪ ಮಾಡಲ್ಲ ಇದಕ್ಕೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ವಕ್ಫ್‌ಗೆ  ಇಲ್ಲದ ಅಧಿಕಾರ ನೀಡಿದರು. ಮನ್‌ಮೋಹನ್ ಸಿಂಗ್ ಅವರು, ಜಮೀನು ಸ್ವಾಧೀನ ಪಡೆಯುವ ಅಧಿಕಾರ ನೀಡಿದರು. 


ಮುಸಲ್ಮಾನರಿಂದ ಕೂಡಿದ ವಕ್ಫ್‌ ಮಂಡಳಿಯಿಂದ ಜನತೆಗೆ ಹೇಗೆ ನ್ಯಾಯ ಸಿಗುತ್ತದೆ ಎಂದು ಬಿಜೆಪಿ ಪಕ್ಷದ ರಾಜ್ಯ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಅವರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ದೇಶಕ್ಕೆ ಸಂವಿಧಾನ ಮಾತ್ರ ಇರಬೇಕು, ಷರಿಯಾ ಕಾಯ್ದೆ ಅಲ್ಲಎಂದ ಅವರು, ಕಾಂಗ್ರೆಸ್ ಸರ್ಕಾರ ಒಂದು ಕಡೆ ದೇವಾಲಯಗಳನ್ನು ಸರ್ಕಾರದ ವಶಕ್ಜೆ ಒಡೆದು, ಮತ್ತೊಂದು ಕಡೆ ವಕ್ಫ ಮಂಡಳಿಗೆ ಲ್ಯಾಂಡ್ ಜಿಹಾದ್ನ ಡೆಸಲು ಅಧಿಕಾರ ಕೊಟ್ಟಿದ್ದೀರಿ ಇದು ಸಂವಿಧಾನ ವಿರೋಧಿಯಲ್ಲವೇ ಎಂದು ಪ್ರಶ್ನಿಸಿದರು. 


ಇಸ್ಲಾಮಿಕ್ ರಾಷ್ಟ್ರಗಳಲ್ಲೂ ಇಂತಹ ವಕ್ಫ್‌ ಕಾಯ್ದೆ ಇಲ್ಲ. ನಮ್ಮ ಜಾತ್ಯತೀತ ರಾಷ್ಟ್ರದಲ್ಲಿ ಇಂತಹ ಕಾಯ್ದೆ ರೂಪಿಸಿರುವುದು ಕಾಂಗ್ರೆಸ್. ರಾಜಕೀಯ ಕೊನೆಗಾಲದಲ್ಲಾದರೂ ನ್ಯಾಯದ ಪರ ಧ್ವನಿ ಎತ್ತಿ ಸಿದ್ದರಾಮಯ್ಯ ಎಂದರು. ಇಂತಹ ಕರಾಳ ಕಾಯ್ದೆ ತೆಗೆಯಲು ಕರಡು ಸಿದ್ದಗೊಂಡಿದೆ. ಜನಾಭಿಪ್ರಾಯ ಪಡೆಯುತ್ತಿದೆ ಎಂದರು. ಮೂರು ಕ್ಷೇತ್ರದಲ್ಲಿ ಎನ್ ಡಿ ಎ ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ.


ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ಜನವಿರೋಧಿನೀತಿಯನ್ನು ಜನರ ಮುಂದೆ ಇಡುತ್ತಿದೆ. ಭ್ರಷ್ಟಾಚಾರದಲ್ಲಿ ವರ್ಲ್ಡ್ ಕಪ್ ಇಟ್ಟರೆ ಅದು ಕಾಂಗ್ರೆಸ್  ಪಾಲಾಗುತ್ತದೆ. ಸಿದ್ದರಾಮಯ್ಯ ಈಗ ಮಿಸ್ಟರ್ ಕ್ಲೀನ್ ಅಲ್ಲ ಮಿಸ್ಟರ್ ಕರಪ್ಟ್  ಆಗಿದ್ದಾರೆ.ಸ್ವ ಯಂ ಉದ್ಯೋಗಕ್ಜೆ ಬಳಕೆಯಾಗಬೇಕಾದ ವಾಲ್ಮೀಕಿ ಹಣ ಚುನಾವಣೆಗೆ, ಕೆಲವರ ಆಸ್ತಿ ಖರೀದಿಗೆ ಬಳಕೆಯಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಸದಾ ಹೇಳುತ್ತಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರೇ ಹೀಗ ಹೇಳಿ 25360 ಕೋಟಿ ಎಸ್ಟಿಪಿ ಎಸ್ಸಿಪಿ ಹಣ ದುರ್ಬಳಕೆಯಾಗಿದೆ ಹಾಗಾದರೆ ಇದನ್ನು ಮಾಡಿದವರಿಗೆ ಮುಡಾ ಹಗರಣದಲ್ಲಿ ಪಾಲ್ಗೊಂಡವರಿಗೆ ಶಿಕ್ಷೆ ಆಗಬೇಕಲ್ವೇ ಎಂದರು.


ವಾಹನ ನೋಂದಣಿ, ಸ್ಟ್ಯಾಂಪ್  ಡ್ಯೂಟಿ ಶುಲ್ಕ ಹೆಚ್ಚಳ ತೈಲಕ್ಕೆ ಹೆಚ್ಚುವರಿ ಸೆಸ್, ವಿದ್ಯುತ್ ಧರ ಹೆಚ್ಚಳ, ಹಾಲಿನಿಂದ ಹಾಲ್ಕೋ ಹಾಲ್ ವರೆಗೆ ಬೆಲೆ ಹೆಚ್ಚಳ ಮಾಡಿದ್ದಾರೆ.ಈ ಸರ್ಕಾರ ಬಂದ ಮೇಲೆ ಎರೆಡು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನವಿರೋಧಿಯಾಗಿರುವ ಈ ಸರ್ಕಾರ ಯಾಕೆ ಬೇಕು. ಎಂದ ಅವರು ಭ್ರಷ್ಟಾಚಾರದ ಕಳಂಕ ಸಿದ್ದರಾಮಯ್ಯ ಮೇಲಿದೆ. 


ಇದರ ಸಂದರ್ಭದ ದುರುಪಯೋಗಪಡಿಸಿಕೊಂಡು ಬೆಂಗಳೂರಿನಲ್ಲಿ ಪ್ಲಾನ್ ಮಂಜೂರಾತಿಗೆ ಪ್ರತಿ ತಿಂಗಳು ಏಳರಿಂದ ಎಂಟು ನೂರು ಕೋಟಿ ರೂ ವಸೂಲಿ ಮಾಡುತ್ತಿದೆಂದರು. ಪಂಚ ಗ್ಯಾರೆಂಟಿ ಪಂಚರ್ ಆಗಿದೆ. ಪ್ರತಿ ತಿಂಗಳು ಗ್ಯಾರೆಂಟಿ ಹಣ ಬರುತ್ತಿಲ್ಲ ಎಂದು ಆರೋಪಿಸಿದರು.


ಗ್ಯಾರೆಂಟಿ ನೆಪದಲ್ಲಿ ಅಭಿವೃದ್ಧಿ ನಿಂತಿದೆ. ಉದ್ಯೋಗ ಸ್ಪಷ್ಟಿಯೂ ಇಲ್ಲ. ಜನ ಆಕ್ರೋಶದ ಜೊತೆ ಕಾಂಗ್ರೆಸ್ ಶಾಸಕರ ಆಕ್ರೋಶವೂ ಇದೆಂದರು. ಪಕ್ಷದ ಜಿಲ್ಲಾ ಅಧ್ಯಕ್ಷ ಅನಿಲ್ ನಾಯ್ಡು, ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ. ನಮೋಷಿ, ವೈ.ಎಂ.ಸತೀಶ್, ಮುಖಂಡರುಗಳಾದ ಕೆ.ಎ.ರಾಮಲಿಂಗಪ್ಪ, ಎಸ್ ಗುರುಲಿಂಗನ ಗೌಡ, ಗುತ್ತಿಗನೂರು ವಿರೂಪಾಕ್ಷ ಗೌಡ, ಹೆಚ್. ಹನುಂಮತಪ್ಪ, ಗೋನಾಳ್ ಮುರಹರ ಗೌಡ, ಡಾ.ಬಿ.ಕೆ. ಸುಂದರ್, ಎಸ್. ಮಲ್ಲನ ಗೌಡ, ಸುಮಾರೆಡ್ಡಿ, ಗಾಳಿ ಶಂಕ್ರಪ್ಪ. ರಾಮಕೃಷ್ಣ, ಗಣಪಾಲ್‌ ಐನಾಥ ರೆಡ್ಡಿ ಮೊದಲಾದವರು ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Advt Slider:
To Top