38ನೇ ಅಖಿಲ ಭಾರತ ಅಂಚೆ ಬ್ಯಾಡ್ಮಿಂಟನ್ ಪಂದ್ಯಾವಳಿ ಮುಕ್ತಾಯ

Upayuktha
0


ಮೈಸೂರು: ದೇಶದಲ್ಲಿ ಕ್ರೀಡೆಗೆ ಹಾಗೂ ಕ್ರೀಡಾಪಟುಗಳಿಗೆ ಹೆಚ್ಚು ಅವಕಾಶ ಸಿಗಬೇಕು. ಕ್ರೀಡಾ ಪಟುಗಳಿಗೆ ಅಂಚೆ ಇಲಾಖೆಯಲ್ಲಿ ಹೆಚ್ಚು ಮೀಸಲಾತಿ ನೀಡಿ ಅವರಿಗೆ ಪ್ರೋತಾಹ ನೀಡಬೇಕು ಎಂದು ಅಂತರಾಷ್ಟ್ರೀಯ ಕ್ರೀಡಾಪಟು, ಧ್ಯಾನ್‌ ಚಂದ್‌ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಕ್ಕುಂಜಿ ಹೇಳಿದರು.


ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 38ನೇ ಅಖಿಲ ಭಾರತ ಅಂಚೆ ಬ್ಯಾಂಡ್ಮಿಂಟನ್‌ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಅಕ್ಕುಂಜೆ, ಬಿಡುವಿದ್ದಾಗಲೆಲ್ಲಾ ಎಲ್ಲರೂ ಯಾವುದಾದರೂ ಕ್ರೀಡಾ ತರಬೇತಿಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಎಂದು ಹೇಳಿದರು.


ಬ್ಯಾಡ್ಮಿಂಟನ್‌ ಎಲ್ಲರೂ ಆಡುವಂತಹ ಆಟವಾಗಿದ್ದು, ಪ್ರತಿಯೊಬ್ಬರ ದೈಹಿಕ ಮತ್ತು ಮಾನಸಿಕ ಸ್ವಾಸ್ಥ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಈ ಆಟದ ನಿಯಮಗಳನ್ನು ಎಲ್ಲರೂ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಸರ್ಕಲ್‌ನ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್.ಎಸ್. ರಾಜೇಂದ್ರ ಕುಮಾರ್ ಹೇಳಿದರು. ಸ್ಥಳೀಯ ಆಟಗಳಾಗಿರುವ ಬ್ಯಾಡ್ಮಿಂಟನ್‌ ಮತ್ತು ಬಾಲ್‌ ಬ್ಯಾಡ್ಮಿಂಟನ್‌ ಆಟಗಳು ಹೆಚ್ಚು ಮನ್ನಣೆಗೆ ಬರಬೇಕು ಎಂದು ಆಶಿಸಿದರು.


ಈ ಪಂದ್ಯಾವಳಿಯು ಕ್ರೀಡಾ ಮನೋಭಾವ ಮತ್ತು ಕ್ರೀಡಾ ಸ್ಪೂರ್ತಿಯಿಂದ ಯಶಸ್ವಿಯಾಗಿ ನಡೆದಿದ್ದು ಅತ್ಯಂತ ಸಂತಸದ ವಿಷಯವಾಗಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮತ್ತು ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೆ ಧನ್ಯವಾದ ತಿಳಿಸಿದರು. ಕೇಂದ್ರ ಅಂಚೆ ಇಲಾಖೆಯ ಅಂಚೆ ಸೇವಾ ಮಂಡಳಿಯ ಸದಸ್ಯರಾದ ಆಶಿಶ್‌ ಕುಮಾರ್‌ ಮಾತನಾಡಿ, ಕ್ರೀಡಾಪಟುಗಳ ಉತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ಅಂಚೆ ಇಲಾಖೆಯು ಯಶಸ್ವಿಯಾಗಿ ಆಯೋಜನೆ ಮಾಡಿದ್ದಾರೆ ಎಂದು ಹೇಳಿದರು.


ವಿವಿಧ ವಿಭಾಗದ ಪ್ರಶಸ್ತಿ ವಿಜೇತರಿಗೆ ಗಣ್ಯರು ಪ್ರಶಸ್ತಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷವಾಗಿ, ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣವು 25 ವರ್ಷಗಳನ್ನು ಪೂರೈಸಿರುವ ವಿಶೇಷ ಸಂದರ್ಭದಲ್ಲಿ, ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಅಂಚೆ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಸುಶೀಲ್‌ ಕುಮಾರ್‌, ಬೆಂಗಳೂರು ಹೆಚ್‌ ಕ್ಯೂ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಲ್‌ ಕೆ ದಾಶ್‌, ದಕ್ಷಿಣ ಕರ್ನಾಟಕ ಅಂಚೆ ವಲಯದ ಪೋಸ್ಟ್‌ ಮಾಸ್ಟರ್‌ ಜನರಲ್‌ ಡಾ. ಚಂದ್ರಶೇಖರ್‌ ಕಾಕುಮನು, ದಕ್ಷಿಣ ಕರ್ನಾಟಕ ಅಂಚೆ ವಲಯದ ನಿರ್ದೇಶಕರಾದ ಸಂದೇಶ್‌ ಮಹದೇವಪ್ಪ, ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹ ನಿರ್ದೇಶಕ ಭಾಸ್ಕರ ನಾಯ್ಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.


38ನೇ ಅಖಿಲ ಭಾರತ ಅಂಚೆ ಇಲಾಖೆಯ 5 ದಿನಗಳ ಬ್ಯಾಂಡ್ಮಿಂಟನ್‌ ಪಂದ್ಯಾವಳಿಯಲ್ಲಿ ದೇಶದ 20 ಪೋಸ್ಟಲ್ ಸರ್ಕಲ್‌ಗಳ 194 ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ವಿವಿಧ ಏಳು ವಿಭಾಗದಲ್ಲಿ ಪಂದ್ಯಗಳು ನಡೆದವು.


ಪಂದ್ಯಾವಳಿಯ ವಿವಿಧ ವಿಭಾಗಗಳ ಫಲಿತಾಂಶಗಳು 


ಪುರುಷರ ಸಿಂಗಲ್ಸ್:

ವಿಜೇತ: ಹಿಮಾಚಲ ಪ್ರದೇಶದ ಅಜಯ್‌ ಕೈತ್

ದ್ವಿತೀಯ:‌ ಉತ್ತರ ಪ್ರದೇಶದ ಅಮಿತ್‌ ಶರ್ಮ


ಮಹಿಳೆಯರ ಸಿಂಗಲ್ಸ್: 

ವಿಜೇತ: ವೆಸ್ಟ್‌ ಬೆಂಗಾಲದ ಅನುರಿಯಾ ದಾಸ್

ದ್ವಿತೀಯ: ಗುಜರಾತ್‌ ನ ವೈಶಾಲಿ ಎಫ್‌ ಬರಿಯಾ


ಪುರುಷರ ಡಬಲ್ಸ್:  

ವಿಜೇತ:‌ ಶುಭಂ ಯಾದವ್‌ ಮತ್ತು ಸ್ವಾದಿನ್‌ ಗೌಡ

ದ್ವಿತೀಯ: ಈ. ಯುವರಾಜ್‌ ಮತ್ತು ಎಸ್‌. ಸುಬ್ರಮಣ್ಯಂ


ಮಹಿಳೆಯರ ಡಬಲ್ಸ್: 

ವಿಜೇತ: ಮಯೂರಿ ಯಾದವ್ ಮತ್ತು ಆರ್‌. ಲೀಲಾ ಲಕ್ಷ್ಮಿ

ದ್ವಿತೀಯ:  ಅನುರಿಯಾ ದಾಸ್‌ ಮತ್ತು ಛಾವಿ ಠಾಕೂರ್


ಮಿಶ್ರ ಡಬಲ್ಸ್:

ವಿಜೇತ:‌ ಶುಭಂ ಯಾದವ್‌ ಮತ್ತು ಮಯೂರಿ ಯಾದವ್

ದ್ವಿತೀಯ: ಪರಮೇಶ್‌ ಪಟಿದಾರ್‌ ಮತ್ತು ಆರ್‌. ಲೀಲಾ ಲಕ್ಷ್ಮಿ


45 ವರ್ಷ ಮೇಲ್ಪಟ್ಟವರ ಸಿಂಗಲ್ಸ್‌:

ವಿಜೇತ: ಕುನಾಲ್‌ ಮಕ್ವಾನ

ದ್ವಿತೀಯ: ವಿಕಾಸ್‌ ಸೂದ್


45 ವರ್ಷ ಮೇಲ್ಪಟ್ಟವರ ಡಬಲ್ಸ್‌:

ವಿಜೇತ:‌ ಪರಾಗ್‌ ಏಕಂಡೆ ಮತ್ತು ವಿಕಾಸ್‌ ಸೂದ್

ದ್ವಿತೀಯ: ಹಿಮಾಂಶು ಭೂಷಣ್ ಪರಿದಾ ಮತ್ತು ಜೋಮನ್‌ ಜಾರ್ಜ್.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top