ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಜಾಗೃತಿ ಅರಿವು ಸಪ್ತಾಹ

Upayuktha
0




ಬಳ್ಳಾರಿ: 
ಕರ್ನಾಟಕ ದ ಹೆಮ್ಮೆಯ  ಪ್ರತಿಷ್ಠಿತ  ಬ್ಯಾಂಕ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿಯ ಗಾಂಧಿನಗರದ  ತಮ್ಮ ಪ್ರಧಾನ ಕಚೇರಿಯಿಂದ  ಬ್ಯಾಂಕಿನ ಮಹಾ ಪ್ರಬಂಧಕರು, ಪ್ರಾದೇಶಿಕ ಪ್ರಬಂಧಕರು, ಹಿರಿಯ ಪ್ರಬಂಧಕರು ಹಾಗೂ ಎಲ್ಲಾ ಸಿಬ್ಬಂದಿ ಮಿತ್ರರ ನೇತೃತ್ವದಲ್ಲಿ ಸರಿಸುಮಾರು 150 ಜನ ಸಿಬ್ಬಂದಿಯೊಂದಿಗೆ  ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ "ವಿಜಿಲೆನ್ಸ್ ಅವೇರ್ನೆಸ್ ವೀಕ್ 2024" (ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ತಿಳುವಳಿಕೆ-2024) ಅಭಿಯಾನಕ್ಕೆ ಚಾಲನೆ ನೀಡಿದರು.


ನಗರದ ಪ್ರತಿಷ್ಠಿತ ಬಡಾವಣೆ  ಗಾಂಧಿನಗರದ ತಮ್ಮ ಪ್ರಧಾನ ಕಚೇರಿಯಿಂದ ಬಿಳಿ ಹಾಗು ತಿಳಿನೀಲಿ ಬಣ್ಣದ ಟೀ ಶರ್ಟ್ ಸಮವಸ್ತ್ರ ಧರಿಸಿದ್ದ ಬ್ಯಾಂಕ್ ಸಿಬ್ಬಂದಿ  ಬ್ಯಾಂಕಿನ ವಿವಿಧ ಯೋಜನೆ  ಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುತ್ತ ನಡೆದ ನೋಟವೆ ಕಣ್ಣಿಗೆ ಹಬ್ಬದ ಖುಷಿ  ನೀಡುತ್ತಿತ್ತು. "ಸತ್ಯನಿಷ್ಠೆಯ ಸಂಸ್ಕೃತಿಯಿಂದ ರಾಷ್ಟ್ರದ ಸಮೃದ್ಧಿ"ಎಚ್ಛೆತ್ತ ಭಾರತ ಸಮೃದ್ಧ ಭಾರತ "ಸತ್ಯ ನಿಷ್ಠೆಯ ಸಂಸ್ಕೃತಿ ರಾಷ್ಟ್ರದ ಸಮೃದ್ಧಿ "ತೊಲಗಲಿ.. ತೊಲಗಲಿ.. ಭ್ರಷ್ಟಾಚಾರ ತೊಲಗಲಿ "ಸೇ ನೋ ಟು ಕರಪ್ಷನ್ , ಫ್ರೀ ದಿ ಸೊಸೈಟಿ ಫ್ರಮ್ ಕರಪ್ಷನ್" ನಮ್ಮ ಹೆಮ್ಮೆಯ ಬ್ಯಾಂಕ್ ಕರ್ನಾಟಕ ಗ್ರಾಮೀಣ ಬ್ಯಾಂಕ್ " ಘೋಷಣೆಗಳೊಂದಿಗೆ  ಗಾಂಧಿ ನಗರದ ಮೇಲ್ ಸೇತುವೆ, ಸತ್ಯನಾರಾಯಣ ಪೇಟೆ ಸರ್ಕಲ್, ಕಮ್ಮ ಭವನ, ಹಳೇಕೋರ್ಟ್ ಭಾಗದಲ್ಲಿ ಬ್ಯಾಂಕಿನ ಸಿಬ್ಬಂದಿ ಹಾಗೆ ಮುಂದೆ ಸಾಗುತ್ತಾ  ರಾಯಲ್ ಸರ್ಕಲ್  ದುರ್ಗಮ್ಮ ಗುಡಿಯ ಮೂಲಕ ಮತ್ತೆ ಪ್ರದಾನ ಕಛೇರಿ ತಲುಪಿದ ಪಥ ಸಂಚಲನದ ಮುಕ್ತಾಯವಾಯ್ತು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಪ್ರಧಾನ ಪ್ರಬಂಧಕರು, ಪ್ರಾದೇಶಿಕ ಪ್ರಬಂಧಕರು, ನಗರ ಶಾಖೆಯ ಮ್ಯಾನೇಜರ್, ಪ್ರಧಾನ ಕಛೇರಿ ಯ, ಪ್ರಾದೇಶಿಕ ಕಛೇರಿ ಯ  ಎಲ್ಲಾ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top