ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

Upayuktha
0


ವೆಂಬರ್ ತಿಂಗಳೆಂದರೆ ನಮಗೆ ನೆನಪಾಗುವುದು ನಮ್ಮ ಕನ್ನಡ ರಾಜ್ಯೋತ್ಸವ. ಎಷ್ಟೋ ಸಂಘಟನೆಗಳು ಇಡೀ ತಿಂಗಳಿನಲ್ಲಿ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳುತ್ತವೆ. ಆದರೆ ನಮ್ಮ ಕನ್ನಡ ಅಭಿಮಾನ ಕೇವಲ ರಾಜ್ಯೋತ್ಸವಕ್ಕಷ್ಟೇ ಸೀಮಿತವಾಗಬಾರದು.


ಕನ್ನಡ ಭಾಷೆ. ನಮ್ಮ ಆಡು ಭಾಷೆಯಷ್ಟೇ ಅಲ್ಲ,ಅದು ನಮ್ಮ ಹೃದಯದ ಭಾಷೆಯೂ ಹೌದು. ಕನ್ನಡ ಭಾಷೆಯು ತನ್ನದೇ ಆದ ಪರಂಪರೆಯನ್ನು ಹೊಂದಿದೆ. ಹಲ್ಮಿಡಿ ಶಾಸನದಿಂದ ಈಗಿನ ಸಾಫ್ಟ್‌ವೇರ್ ಟೆಕ್ಕಿಗಳ ತನಕ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ.

ತುರ್ತು ಪರಿಸ್ಥಿತಿಯ ಕಾಲದಲ್ಲಿ ಆಚಾರ್ಯ ವಿನೋಬಾ ಭಾವೆಯವರು ಬೆಂಗಳೂರು ಜೈಲಿನಲ್ಲಿದ್ದಾಗ ನಮ್ಮ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ  ಕೈಯಲ್ಲಿ ಕನ್ನಡವನ್ನು ಕಲಿತು ಕನ್ನಡವನ್ನು "ಲಿಪಿಗಳ ರಾಣಿ" ಎಂದು ಕನ್ನಡವನ್ನು ಬಣ್ಣಿಸಿದ್ದಾರೆ. 

ಸುಮಾರು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಭಾಷೆ ಮತ್ತು ಕರ್ನಾಟಕವು ನಮ್ಮ ದೇಶಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಅತಿ ಹೆಚ್ಚು GST ಸಲ್ಲಿಸಿ ದೇಶದ ಆರ್ಥಿಕ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದೆ.


ನಮ್ಮ ಕನ್ನಡ ಭಾಷೆಯು  ಇತರ ಭಾಷಿಕರ  ಕೈಯಲ್ಲಿ ಸಿಕ್ಕು ನರಳುತ್ತಿದೆ ಎಂದು ಕೆಲವರು ಹುಯಿಲು ಎಬ್ಬಿಸಿದರೂ ಅದು ತನ್ನದೇ ಆದ ವಿಶಿಷ್ಟ ಆಕರ್ಷಣೆಯನ್ನು ಹೊಂದಿದೆ. ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಜನರು  ಕನ್ನಡವನ್ನು ಬಳಸುವುದನ್ನು ನಾವು ಕಾಣಬಹುದು.

ಪ್ರತಿಲಿಪಿ, ಕ್ವೋರಾ, ಕಥಾಗುಚ್ಚ, ಮುಂತಾದ ಜಾಲತಾಣಗಳು ಯುವ ಲೇಖಕರನ್ನು ಆಕರ್ಷಿಸುತ್ತಿವೆ.


ಕನ್ನಡ  ಪ್ರೇಮವೆಂಬುದು ಈಗ ಕೇವಲ ಅಭಿಮಾನಕ್ಕೆ ಸೀಮಿತವಾಗಿರದೆ ಅದು ಜನರನ್ನು ತಟ್ಟುತ್ತಿದೆ. ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ  ಅತಿ ಹೆಚ್ಚು ಆಟಗಾರರು ಕರ್ನಾಟಕವನ್ನು ಪ್ರತಿನಿಧಿಸು ತ್ತಿದ್ದ ಕಾಲವನ್ನು ಕಂಡ ನಾವು ಈಗ ವಿರಾಟ್ ಕೊಹ್ಲಿ ಟ್ವಿಟರ್ ನಲ್ಲಿ ಕನ್ನಡದಲ್ಲಿ ಟ್ವೀಟ್  ಮಾಡಿದಾಗ ಸಂತೋಷ ಪಡುತ್ತೇವೆ.


ನಮ್ಮ ಗುಲ್ಬರ್ಗಾದ ನೀರಜ್ ಪಾಟೀಲ್ ಲಂಡನ್ ಮೇಯರ್ ಆಗಿ ಬಸವೇಶ್ವರ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಕಾರ್ಲ್ ಮಾರ್ಕ್ಸ್‌ಗಿಂತ ಮೊದಲೇ ಬಸವೇಶ್ವರರು ವರ್ಗ ಸಂಘರ್ಷವನ್ನು ತೊಡೆದು ಹಾಕಲು ಯತ್ನಿಸಿದರು. ಬ್ರಿಟಿಷರ ಕಾಲದಲ್ಲಿ ಮೈಸೂರು ಸಂಸ್ಥಾನ ಶ್ರೀಮಂತ ರಾಜ್ಯವೆಂದು ಹೆಸರು ಪಡೆದಿತ್ತು.


ಚಿನ್ನದ ನಾಡು, ಶ್ರೀಗಂಧದ ಬೀಡು ಆಗಿರುವ  ಕರ್ನಾಟಕ ತನ್ನದೇ ಆದ ಆಕರ್ಷಣೆಯಿಂದ ಪರ ಭಾಷಿಕರನ್ನು ಕರೆಯುತ್ತಿದೆ. ಸಿಲಿಕಾನ್ ವ್ಯಾಲಿ ಎಂಬ ಹೆಸರಿನಿಂದ ಖ್ಯಾತವಾದ ಬೆಂಗಳೂರು ಸಾಫ್ಟವೇರ್ ಉದ್ದಿಮೆದಾರರ ಆಕರ್ಷಣೆಯ ಕೇಂದ್ರವಾಗಿದೆ.


ಈಗಲೂ ಕನ್ನಡ ಸಂಸ್ಕೃತಿಯು ವಿದೇಶಿಗರನ್ನು ಆಕರ್ಷಿಸಿದ್ದು ಮೈಸೂರು ಮಲ್ಲಿಗೆ, ಮೈಸೂರು ಪಾಕ, ಬರಾಕ್ ಒಬಾಮರ ಮೆಚ್ಚುಗೆಗೆ ಪಾತ್ರವಾದ ಚನ್ನಪಟ್ಟಣದ ಬೊಂಬೆಗಳು, ನಮ್ಮ ಹೆಮ್ಮೆಯ ಪ್ರತೀಕ.

ಮತ್ತೊಮ್ಮೆ ಕನ್ನಡದ ಸವಿ ನೆನಪುಗಳನ್ನು ಮೆಲುಕು ಹಾಕೋಣ.



- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top