ವಿಡಂಬನೆ: ಸರ್ಕಾರದ ನಡವಳಿಗಳು- ಓದಲಾಗಿದೆ: ಸರಕಾರಿ ಆದೇಶ ಸಂಖ್ಯೆ 420

Upayuktha
0


ಮೇಲಿನ ನಡಾವಳಿಯನ್ನು ಆಕರ ಪ್ರತಿಯಾಗಿರಿಸಿಕೊಂಡು, ರೈತರಿಗೆ ಅನುಕೂಲವಾಗುವಂತೆ ಹೀಗೊಂದು ನಡಾವಳಿ ಬರೆಸಿದರೆ ಹೇಗೆ?

(ಲಘು ವಿಡಂಬನಾತ್ಮಕ ನಡಾವಳಿ!!)



............ ಸರ್ಕಾರದ ನಡವಳಿಗಳು


ವಿಷಯ: ರೈತರ ಆಸ್ತಿಗಳ ಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡುವ ಬಗ್ಗೆ.


ಓದಲಾಗಿದೆ: ಸರಕಾರಿ ಆದೇಶ ಸಂಖ್ಯೆ 420


ಪ್ರಸ್ತಾವನೆ:

ಮೇಲೆ ಓದಲಾದ ಸರ್ಕಾರಿ ಆದೇಶದಲ್ಲಿ ............ ರಾಜ್ಯದ ರೈತರ ಆಸ್ತಿಗಳಾದ ಭಾಗಾಯ್ತು, ತರಿ, ಕುಷ್ಕಿ ಇತ್ಯಾದಿ ಜಾಗಗಳನ್ನು ಅಕ್ರಮ ಒತ್ತುವರಿ, ಅನಧಿಕೃತ ಸ್ವಾಧೀನ ಮತ್ತು ವಿವಾದಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ತಡೆಯಲು ಆಸ್ತಿಗಳ ಸುತ್ತ ಬೇಲಿ, ಗೋಡೆಯನ್ನು ಹಾಕುವುದು ಅವಶ್ಯಕವಾಗಿರುವುದರಿಂದ, ಅದನ್ನು ಸಂರಕ್ಷಣೆ ಮಾಡುವ ಯೋಜನೆಯಡಿ ಕೆಲವು ನಿಬಂಧನೆಗಳನ್ನು ರೂಪಿಸಿ ಆದೇಶ ಹೊರಡಿಸಲಾಗಿರುತ್ತದೆ.


ರಾಜ್ಯದ ವಿವಿಧ ರೈತರ ಆಸ್ತಿಗಳ ಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿರುತ್ತವೆ.


ಸದರಿ ಪ್ರಸ್ತಾವನೆಗಳನ್ನು ಪರಿಶೀಲಿಸಿ. ಕೆಳಕಂಡಂತೆ ಆದೇಶಿಸಿದೆ.


ಸರ್ಕಾರದ ಆದೇಶ ಸಂಖ್ಯೆ: 420

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಈ ಆದೇಶದ ಅನುಬಂಧದಲ್ಲಿ ನಮೂದಿಸಿರುವಂತೆ ರಾಜ್ಯದ ಎಲ್ಲಾ ರೈತರ ಕೃಷಿ ಆಸ್ತಿಗಳ ಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಒಟ್ಟು ರೂ. (ರೂಪಾಯಿ.......

.......ಮಾತ್ರ) ಅನುದಾನವನ್ನು ಈ ಕೆಳಕಂಡ ಷರತ್ತಿಗೊಳಪಟ್ಟು ಮಂಜೂರು ಮಾಡಿ ಅದೇಶಿಸಿದೆ.


ಷರತ್ತುಗಳು:

1. ಸದರಿ ವೆಚ್ಚವನ್ನು ............ ನೇ ಸಾಲಿನ ...............ರಾಜ್ಯ  ಕೃಷಿ ಬಜೆಟ್‌ನಲ್ಲಿ ಮಾಡಿರುವ ಅನುದಾನದಲ್ಲಿ ಪ್ರಸಕ್ತ ಸಾಲಿಗೆ ಶೇ.50 ರಷ್ಟನ್ನು ಬಿಡುಗಡೆ ಮಾಡತಕ್ಕದ್ದು.

2. ................. ರಾಜ್ಯ ಕೃಷಿ  ಮಂಡಳಿಯಲ್ಲಿರುವ ಸೂಚನೆಗಳನ್ನು ಕೃಷಿ ಸಂಸ್ಥೆಗಳಿಗೆ, ರೈತರಿಗೆ ಹಣ ಬಿಡುಗಡೆಗೊಳಿಸುವ ಮುನ್ನ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

(ಇದು ಕೇವಲ ಡ್ರಾಫ್ಟ್ ಕಾಪಿ.  ಪೂರ್ಣ ಮಾಹಿತಗಳನ್ನು ತುಂಬಿಸಿಕೊಂಡು ಸರಕಾರ ಅಧಿಕೃತಗೊಳಿಸಿಕೊಳ್ಳಬಹುದು!!)

**

- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top