ಕವನ: ಬಂತು ದೀಪಾವಳಿ

Upayuktha
0


ಬಂತು ಬಂತು ದೀಪಾವಳಿ 

ತರುತಿದೆ ಸಂತೋಷದ ಓಕುಳಿ 

ಎಲ್ಲೆಲ್ಲೂ ದೀಪಗಳ ಸರಮಾಲೆ 

ನೋಡು ಅಲ್ಲಿ ಪಟಾಕಿಗಳ ಸಾಲೇ 


ಕತ್ತಲ ಓಡಿಸುವ ಬೆಳಕಿನ ಹಬ್ಬ 

ಸುತ್ತಲೂ ಬೆಳಕು ಚೆಲ್ಲುವ ಹಬ್ಬ 

ಹಿರಿಯರ ಕಿರಿಯರ ಇಷ್ಟದ ಹಬ್ಬ 

ಯುವ ಜನರಿಗೂ ಸಂತಸದ ಹಬ್ಬ 


ಹಿರಿಯರು ಕಿರಿಯರಿಗೆ ಮಾಡಿ ಆರತಿ 

ಹರಸುವರು ಬೆಳೆಯಲಿ ನಿಮ್ಮ ಕೀರುತಿ 

ಸಿಹಿತಿಂಡಿಗಳ ಹುರುಪಲಿ ಮೆಲ್ಲುತ

ಸಿಹಿ ಹಬ್ಬದೂಟ ಮಾಡಿ ನಲಿಯುತ 


ಪಗಡೆ ಆಟವನಾಡಿ ಮನೆಯಲ್ಲಿ ಎಲ್ಲರೂ 

ಪಟಾಕಿ ಸಿಡಿಸುತ ಕಿರಿಯರೆಲ್ಲರೂ 

ಲಕ್ಷ್ಮೀ ಪೂಜೆ ಮಾಡುತ ಹರುಷದಿ 

ಅವಳ ಕರುಣೆ ಬೇಡುತ ಸಡಗರದಿ 


ದೀಪಾವಳಿ ಬಂತು ಹರುಷ ತಂತು 

ಆಚರಿಸೋಣ ಎಲ್ಲರೂ ಬೆರೆತು 

ಒಗ್ಗಟ್ಟು ಇರಲಿ  ಹಬ್ಬದಿ ಎಲ್ಲೆಡೆ

ಈ ನಾಡ ಕೀರ್ತಿ ಹಬ್ಬಲಿ ನೋಡೇ 


- ರೇಖಾ ಮುತಾಲಿಕ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top