ಶೃಂಗೇರಿ ಶಾರದಾಂಬೆಯ ಪ್ರತಿಷ್ಠಾಪಕರು ಆದಿ ಶಂಕರಾಚಾರ್ಯರು. ಶೃಂಗೇರಿಯು ವಿಭಾಂಡಕ ಋಷಿಗಳ ಮಗ ಋಷ್ಯಶೃಂಗರ ತಪೋಭೂಮಿ. ದೇವಿಯನ್ನು ಅವರೇ ಇಲ್ಲಿಗೆ ಕರೆತಂದರು ಎಂಬ ಕತೆಯೂ ಇದೆ. ಆದರೆ ಆದಿ ಶಂಕರರು ಸನಾತನ ಧರ್ಮದ ಉಳಿವಿಗಾಗಿ ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದರು ಶಂಕರರು ಸ್ಥಾಪಿಸಿದ 4 ಪೀಠಗಳಲ್ಲಿ ಶೃಂಗೇರಿಯ ಶಾರದಾ ಪೀಠವೂ ಕೂಡ ಒಂದು ಮತ್ತು ಆದಿ ಶಂಕರರು ಇಲ್ಲಿ ತಮ್ಮ ಮೊದಲ ಪೀಠವನ್ನು ಸ್ಥಾಪಿಸಲು ಪ್ರಮುಖ ಕಾರಣ ಈ ಸ್ಥಳದ ಪಾವಿತ್ರ್ಯತೆ ಶೃಂಗೇರಿಯಲ್ಲಿ ಆದಿ ಶಂಕರರು ತುಂಗಾನದೀ ತೀರದಲ್ಲಿ ಕಂಡ ದೃಶ್ಯದಿಂದ ಅವರು ಇಲ್ಲಿಯೇ ತಮ್ಮ ಪೀಠವನ್ನು ಸ್ಥಾಪಿಸಬೇಕೆಂದು ನಿಶ್ಚಯ ಮಾಡಲು ಕಾರಣವಾಇತು. ನಾಗರ ಹಾವೊಂದು ತುಂಬು ಗರ್ಭಿಣಿಯಾದ ಕಪ್ಪೆಗೆ ಪ್ರಸವದ ಸಮಯದಲ್ಲಿ ಬಿಸಿಲಿನ ತಾಪದಿಂದ ಆಶ್ರಯ ನೀಡಿ ಕಪ್ಪೆಯ ಪ್ರಸವಕ್ಕೆ ಸಹಾಯ ಮಾಡುತ್ತಿತ್ತು. ಇಂತಹ ಶತ್ರು ಪ್ರಾಣಿಗಳಲ್ಲಿ ಪ್ರೀತಿಯನ್ನೇ ಬಿತ್ತುವ ಸ್ಥಾನದಲ್ಲಿ ದೇವಿಯನ್ನು ಸ್ಥಾಪಿಸಿ ಪೀಠವನ್ನು ಆರಂಭಿಸಬೇಕೆಂದು ಆದಿ ಶಂಕರರು ಶಾರದಾ ಪೀಠವನ್ನು ಇಲ್ಲಿಯೇ ಸ್ಥಾಪಿಸಿದರು.
8ನೇ ಶತಮಾನದಲ್ಲಿ ಆದಿ ಶಂಕರರು ವಿದ್ಯಾಶಂಕರ ದೇವರನ್ನು ಮತ್ತು ಶಾರದಾದೇವಿಯನ್ನು ಪ್ರತಿಷ್ಠಾಪಿಸಿದ್ದಾರೆ. ಅವರು ಶ್ರೀಗಂಧದ ನಿಂತಿರುವ ದೇವಿಯನ್ನು ಪ್ರತಿಷ್ಠಾಪನೆಯನ್ನು ಮಾಡಿದ್ದರು. 12ನೇ ಶತಮಾನದಲ್ಲಿ ಶ್ರೀ ವಿದ್ಯಾರಣ್ಯರು ಚಿನ್ನದ ಕುಳಿತಿರುವ ದೇವಿಯನ್ನು ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಇಲ್ಲಿ ದೇವಿಯು ಶ್ರೀಚಕ್ರದ ಮೇಲೆ ಕುಳಿದ್ದಾಳೆ. ಅವಳ ಕೈಯ ಮೇಲ್ಭಾಗದಲ್ಲಿ ಗಿಳಿಯು ಜಪಮಾಲೆಯನ್ನು ಹಿಡಿದಿರುವಂತೆ ಕಾಣುತ್ತದೆ. ಇಲ್ಲಿ ದೇವಾಲಯವು ಶಾರದಾಂಬಿಕೆಯದ್ದಾಗಿದ್ದು ಇವಳು ಸರಸ್ವತಿ ದೇವಿಯ ರೂಪವಾಗಿದ್ದು, ದೇವಿಯನ್ನು ಉಭಯ ಭಾರತಿ ಎಂದು ಕೂಡ ಕರೆಯಲಾಗುತ್ತದೆ. ಉಭಯ ಭಾರತಿದೇವಿಯನ್ನು ಪೂಜಿಸಿ ಬ್ರಹ್ಮ ವಿಷ್ಣು ಮಹೇಶ್ವರ ಮೂವರ ಕೃಪೆಗೆ ಪಾತ್ರರಾಗಬಹುದೆಂಬ ನಂಬಿಕೆ ಇದೆ.
ಶೃಂಗೇರಿ ಶಾರದಾ ದೇವಿಯು ವಿದ್ಯೆಗೆ ಅಧಿದೇವತೆಯೆಂದು ಮಕ್ಕಳಿಗೆ ಶಾರದಾ ಸನ್ನಿಧಾನದಲ್ಲಿ ಅಕ್ಷರಾಭ್ಯಾಸ ಆರಂಭಿಸಿದರೆ ಮಕ್ಕಳು ವಿಶೇಷ ಬುದ್ಧಿವಂತರಾಗುತ್ತಾರೆಂಬ ನಂಬಿಕೆ ಇದೆ. ಶೃಂಗೇರಿಯಲ್ಲಿ ಶಾರದಾ ಪೀಠದಲ್ಲಿ ವಿದ್ಯೆಗೆ ಆಧ್ಯಾತ್ಮ ವಿದ್ಯೆಗೆ ವೇದಗಳಿಗೆ ಬಹಳ ಮಹತ್ವವಿದ್ದು ವಿದ್ಯಾರ್ಥಿಗಳು ವೇದಾಧ್ಯಯನವನ್ನು ಮಾಡುತ್ತಾರೆ.
ಶೃಂಗೇರಿಯಲ್ಲಿ ಶರನ್ನವರಾತ್ರಿ ಉತ್ಸವವು ವಿಶೇಷವಾಗಿದೆ 11 ದಿನಗಳ ಕಾಲ ವಿಶೇಷ ಉತ್ಸವ ನೆರವೇರುತ್ತದೆ. ಆಗ ಗುರುಗಳ ದರಬಾರ್ ನಡೆಯುತ್ತದೆ. ದೇವಿಗೆ ವಿಶೇಷ ಆಭರಣಗಳು ಮತ್ತು ಅಲಂಕಾರಗಳಿಂದ ಅಲಂಕರಿಸುತ್ತಾರೆ. ಆಷಾಢ ಅಮಾವಾಸ್ಯೆಯಂದು ದೇವಿಯ ವಿಶೇಷ ಅಭಿಷೇಕದೊಂದಿಗೆ ಉತ್ಸವವನ್ನು ಆರಂಭಿಸುತ್ತಾರೆ ಫಲ ಪಂಚಾಮೃತ ಅಭಿಷೇಕ. ರುದ್ರಾಭೀಷೇಕ ಮತ್ತು ಶ್ರೀ ಸೂಕ್ತಗಳೊಂದಿಗೆ ಅಭಿಷೇಕವನ್ನು ಮಾಡುತ್ತಾರೆ. ಜಗತ್ಪಸೂತಿಕಾ ಅಲಂಕಾರ, ಹಂಸವಾಹನ ಅಲಂಕಾರದಲ್ಲಿ ಬ್ರಾಹ್ಮಿ, ವೃಷಭವಾಹನ ಅಲಂಕಾರದಲ್ಲಿ ಮಹೇಶ್ವರಿ, ಮಯೂರ ವಾಹನ ಅಲಂಕಾರದಲ್ಲಿ ಕೌಮಾರಿ, ಗರುಡ ವಾಹನ ಅಲಂಕಾರದಲ್ಲಿ ವೈಷ್ಣವಿ, ಇಂದ್ರಾಣಿ ಅಲಂಕಾರ, ವೀಣಾಶಾರದಾ ಅಲಂಕಾರ ಮೋಹಿನಿ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನ ಅಲಂಕಾರದಲ್ಲಿ ಚಾಮುಂಡಿ, ಗಜಲಕ್ಷ್ಮೀ ಅಲಂಕಾರ ಹೀಗೆ ಅನೇಕ ಬಗೆಯ ಅಲಂಕಾರಗಳನ್ನು 11 ದಿನದ ಉತ್ಸವದಲ್ಲಿ ಮಾಡುತ್ತಾರೆ. ನವರಾತ್ರಿಯ ಸಮಯದಲ್ಲಿ ದೇವಿಯ ಅನೇಕ ಸ್ತೋತ್ರಗಳ ಪಾರಾಯಣಗಳು ಪೂಜೆಗಳು ದುರ್ಗಾಸಪ್ತಶತಿ, ಶ್ರೀಚಕ್ರ ಪೂಜೆ ದೇವಿ ಭಾಗವತ ಪಾರಾಯಣ ಮೊದಲಾದವುಗಳನ್ನು ಮಾಡಲಾಗುತ್ತದೆ ದಿನ ನಿತ್ಯವೂ ದೇವಿಗೆ ರಥೋತ್ಸವವನ್ನು ಕೂಡ ಮಾಡುತ್ತಾರೆ.
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

