ನಮ್ಮ ಹಾಗೂ ಮುಳಿಯದ ನಡುವಿನ ಬಾಂಧವ್ಯ ನಾಲ್ಕು ದಶಕಗಳಷ್ಟು ಹಳೆಯದು: ಉಮಾ ವಿ. ಎಸ್. ಕೆದಿಲಾಯ
ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಮುಳಿಯ ಚಿನ್ನೋತ್ಸವ ಕಾರ್ಯಕ್ರಮ. ಆಯೋಜಿಸಲಾಗಿದ್ದು ಅ.4ರಂದು ಇದಕ್ಕೆ ಚಾಲನೆ ನೀಡಲಾಯಿತು.
ವಿಟ್ಲದ ನಿವೃತ್ತ ಶಿಕ್ಷಕಿ ಉಮಾ ವಿ ಎಸ್ ಕೆದಿಲಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. "ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ನಡುವಿನ ಒಡನಾಟ ಉತ್ತಮವಾಗಿರುವುದರಿಂದ ಮುಳಿಯದ ಬೆಳವಣಿಗೆ ಸಾಧ್ಯವಾಗಿದೆ. ಇಲ್ಲಿನ ಸಂಗ್ರಹ ಹಾಗೂ ಸೇವೆ ಅತ್ಯುತ್ತಮವಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾದ ಆಭರಣವನ್ನು ತಯಾರಿಸಿ ನೀಡುತ್ತಿರುವುದು ಖುಷಿ ತಂದಿದೆ ನಮ್ಮ ಹಾಗೂ ಮುಳಿಯದ ನಡುವಿನ ಬಾಂಧವ್ಯ ನಾಲ್ಕು ದಶಕಗಳಷ್ಟು ಹಳೆಯದು" ಎಂದು ಹೇಳಿದರು.
ಚಿನ್ನ ಹಾಗೂ ಭೂಮಿಯ ಉಪಯೋಗ ಮಾಡಿದಂತೆ ಮೌಲ್ಯ ಹೆಚ್ಚಾಗುತ್ತದೆ. ಚಿನ್ನಕ್ಕೆ ಜಗತ್ತಿನ ಯಾವ ಭಾಗಕ್ಕೆ ಹೋದರೂ ಮೌಲ್ಯವಿದೆ. ಚಿನ್ನ ಶುಭ ಸೂಚಕವಾಗಿದ್ದು, ಸಂಭ್ರಮಾಚರಣೆಯ ಸಂದರ್ಭ ಶುಭವನ್ನು ಮನೆಗೆ ತೆಗೆದುಕೊಂಡು ಹೋಗುವುದು ವಾಡಿಕೆಯಾಗಿದೆ. ಪ್ರತಿಯೊಬ್ಬರಿಗೂ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ವರ್ಷಕ್ಕೆ ಎರಡು ಬಾರಿ ಚಿನ್ನೋತ್ಸವ ನಡೆಸಲಾಗುತ್ತಿದೆ. ಲೈಟ್ ವೈಟ್ ನೆಕ್ಲೇಸ್, ಟರ್ಕಿ ರೂಬಿ ಡಿಸೈನ್ ಸೇರಿ ವಿವಿರ ವಿನ್ಯಾಸಗಳಿದೆ. 1200ಕ್ಕೂ ಅಧಿಕ ವಿನ್ಯಾಸದ ವಜ್ರದ ಆಭರಣಗಳ ಸಂಗ್ರಹವಿದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಮುಳಿಯ ಜ್ಯುವೆಲ್ಸ್ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ತಿಳಿಸಿದರು.
ಉದ್ಯಮಿ ಸುಹಾಸ್ ಮರಿಕೆ ಮಾತನಾಡಿ 'ಮುಳಿಯದಲ್ಲಿ ಸಿಗುವ ಸೇವೆ ನಿಷ್ಕಲ್ಮಶವಾಗಿದ್ದು ಎಲ್ಲರೂ ಮಿತ್ರರು ಎನ್ನುವ ರೀತಿಯಲ್ಲಿ ವ್ಯವಹರಿಸುತ್ತಿದ್ದಾರೆ. ಪುತ್ತೂರಿನ ಜನರಿಗೆ ಹೊಸ ವಿಚಾರಗಳನ್ನು ನೀಡುವ ವಿಚಾರದಲ್ಲಿ ಮುಳಿಯ ಮುಂದೆ ಇರುತ್ತದೆ. ವಿವಿಧ ವಿಚಾರದಲ್ಲಿ ಮುನ್ನಡೆಯುವವರಿಗೆ ಪ್ರೋತ್ಸಾಹ ನೀಡುವಲ್ಲಿಯೂ ಮುಳಿಯ ಮುಂಚೂಣಿಯಲ್ಲಿದೆ" ಎಂದು ತಿಳಿಸಿದರು.
ಚಿನ್ನೋತ್ಸವದ ಮೊದಲ ಚಿನ್ನ ಖರೀದಿದಾರ ಉದ್ಯಮಿ ಗಣೇಶ್ ಭಟ್ ಮಾತನಾಡಿ' ವ್ಯವಹಾರಗಳಲ್ಲಿ ನಂಬಿಕೆ ಮುಖ್ಯವಾಗಿದ್ದು ಅದನ್ನು ಉಳಿಸಿಕೊಂಡು ಮುಂದೆ ಹೋಗುವುದು ಸವಾಲಿನ ವಿಚಾರ. ಮುಳಿಯ ದಶಕಗಳಿಂದ ನೈಪುಣ್ಯತೆಯಿಂದ ಕೆಲಸವನ್ನು ನಿರ್ವಹಿಸುತ್ತಿರುವುದರಿಂದ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ ಎಂದು ತಿಳಿಸಿದರು.
ಮುಳಿಯ ಗ್ರಾಹಕರ ಮಕ್ಕಳಿಗೆ ಚಿನ್ನೋತ್ಸವದ ಅಂಗವಾಗಿ ಚಿತ್ರ ಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಉದ್ಯಮಿ ಲಲಿತಾ ಭಟ್, ಮುಳಿಯ ಜ್ಯುವೆಲ್ಸ್ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. ಹರಿಣಾಕ್ಷಿ ಪ್ರಾರ್ಥಿಸಿದರು, ಕಿಶೋರ್ ಸ್ವಾಗತಿಸಿದರು. ಆನಂದ ಕುಲಾಲ್ ವಂದಿಸಿದರು. ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

