ಬಳ್ಳಾರಿ: ಪಿಂಚಣಿದಾರರ ಮನೆಬಾಗಿಲಲ್ಲಿ ಜೀವನ್ ಪ್ರಮಾಣ ಪತ್ರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ (DoPPW) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಸಮನ್ವಯದೊಂದಿಗೆ ಎಲ್ಲಾ ಕೇಂದ್ರ, ರಾಜ್ಯ ಮತ್ತು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (EPFO) ಪಿಂಚಣಿದಾರರಿಗೆ ಜೀವನ್ ಪ್ರಮಾಣಪತ್ರವನ್ನು ನೀಡಲು ಸುಲಭವಾಗುವಂತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವೆಯನ್ನು ಪರಿಚಯಿಸಿದೆ.
ಅಂಚೆಪೇದೆ ಮತ್ತು ಗ್ರಾಮೀಣ ಅಂಚೆ ಸೇವಕರಿಂದ ಪಿಂಚಣಿದಾರರಿಗೆ ಅನುಕೂಲಕ್ಕಾಗಿ ಅವರ ಮನೆಬಾಗಿಲಲ್ಲೇ ಆಧಾರ್ ಮತ್ತು ಪಿಂಚಣಿ ವಿವರಗಳನ್ನು ಬಳಸಿಕೊಂಡು ಡಿಜಿಟಲ್ ಜೀವನ್ ಪ್ರಮಾಣ ವಿತರಿಸುವ ವಿಶೇಷ ಅಭಿಯಾನವನ್ನು ನವೆಂಬರ್ 1 ರಿಂದ ನವಂಬರ್ 30, 2024ರ ವರೆಗೆ ಹಮ್ಮಿಕೊಂಡಿದ್ದು . ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿನೀಡಿ ಅಥವಾ ತಮ್ಮ ಭಾಗದ ಅಂಚೆ ಬಟವಾಡೆಗೆ ಬರುವ ಅಂಚೆ ಸಿಬ್ಬಂದಿಯನ್ನು ಸಂಪರ್ಕಿಸಿ ಮನೆಯಲ್ಲಿಯೇ ಕುಳಿತು ಬೆರಳಚ್ಚು ಅಥವಾ ಮುಖಚಹರೆಯನ್ನು ನೀಡಿ ತಮ್ಮ ಜೀವನ ಪ್ರಮಾಣ ಪತ್ರವನ್ನು ಪಡೆಯಬಹುದು.
ಈ ಸೇವೆಗಾಗಿ ಪಿಂಚಣಿದಾರರು 70/- ರೂಪಾಯಿ ಶುಲ್ಕ ಪಾವತಿಸಿ ತಮ್ಮಆಧಾರ್ ಪ್ರತಿ ಮತ್ತು ಪಿಂಚಣಿ ಬಗೆಗಿನ ವಿವರ ನೀಡಬೇಕು. ಈ DLC ಪ್ರಕ್ರಿಯೆಯು, ಪಿಂಚಣಿದಾರರಿಗೆ ಸಾಂಪ್ರದಾಯಿಕ ಕಾಗದ ಆಧಾರಿತ ಪ್ರಮಾಣಪತ್ರಗಳನ್ನು ಸಲ್ಲಿಸುವ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಸುಲಭವಾದ ಪ್ರಕ್ರಿಯೆಯನ್ನುಒದಗಿಸುತ್ತದೆ.
ಈ ಪ್ರಮಾಣ ಪತ್ರವಿತರಿಸುವ ಪ್ರಕ್ರಿಯೆಯು ಪೂರ್ಣ ಗೊಂಡ ನಂತರ ಪಿಂಚಣಿದಾರರು ತಮ್ಮ ಮೊಬೈಲ್ ನಲ್ಲಿ ದೃಡೀಕರಣ ಸಂದೇಶ ಪಡೆಯುತ್ತಾರೆ ಹಾಗು ಎರಡುದಿನಗಳ ನಂತರ ಜೀವನ್ ಪ್ರಮಾಣ ಪತ್ರವನ್ನು https://jeevanpramaan.gov.in/ppouser/login ವೆಬ್ಸೈಟ್ ನ ಮೂಲಕ ಆನ್ಲೈನ್ ನಲ್ಲಿ ವೀಕ್ಷಿಸಬಹುದು. ಈ ಅಭಿಯಾನದ ಭಾಗವಾಗಿ ಬಳ್ಳಾರಿ ಅಂಚೆ ವಿಭಾಗದಲ್ಲಿ ಈ ಕೆಳಕಂಡ ದಿನಾಂಕದಂದು ವಿಶೇಷ DLC ನೋಂದಣಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ .
೧. ಬಳ್ಳಾರಿ ಪ್ರಧಾನ ಅಂಚೆಕಚೇರಿ – 04.11.2024
೨. ಹೊಸಪೇಟೆ ಪ್ರಧಾನ ಅಂಚೆಕಚೇರಿ –08.11.2024
೩. ಕೂಡ್ಲಿಗಿ ಅಂಚೆ ಕಚೇರಿ –16.11.2024
4. ಸಿರುಗುಪ್ಪ ಅಂಚೆ ಕಚೇರಿ- 25.11.2024
5. ಹರಪನಹಳ್ಳಿ ಅಂಚೆ ಕಚೇರಿ -23.11.2024
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ