ನ.10: ಕಾಸರಗೋಡು ಕನ್ನಡ ಗ್ರಾಮಕ್ಕೆ ಸಾಂಸ್ಕೃತಿಕ ಮೆರವಣಿಗೆ, ಕನ್ನಡ ಯಾತ್ರೆ

Upayuktha
0


ಕಾಸರಗೋಡು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ,ಕಾಸರಗೋಡು ಇದರ ಆಶ್ರಯದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ,ಕನ್ನಡ ಗ್ರಾಮ ಕಾಸರಗೋಡು ಇದರ ಸಹಯೋಗ ಪ್ರಾಯೋಜಕತ್ವದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನವೆಂಬರ್ 10 ಭಾನುವಾರ ಬೆಳಿಗ್ಗೆ ಗಂಟೆ 9.00ರಿಂದ ರಾತ್ರಿ 9.00ರ ವರೆಗೆ ಒಂದು ದಿನದ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನ 2024 ಇದರ ಪೂರ್ವಭಾವಿ ಸಿದ್ಧತೆಗಳು ಭರದಿಂದ ನಡೆಯುತ್ತಿದೆ.


ಈ ಐತಿಹಾಸಿಕ ಮಕ್ಕಳ ಸಮ್ಮೇಳನವನ್ನು ಕೇರಳ ಕರ್ನಾಟಕ "ಮಕ್ಕಳ ಉತ್ಸವ"ವನ್ನಾಗಿ ಸಂಭ್ರಮಿಸಲಾಗುವುದು.


ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಮುಂಚಿತವಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳ ಸಮ್ಮುಖದಲ್ಲಿ, ಕೇರಳ -ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ನೂರಾರು ವಿದ್ಯಾರ್ಥಿಗಳು, ಹೆತ್ತವರು ಪೋಷಕರು ಅಧ್ಯಾಪಕರು, ಜನ ಪ್ರತಿನಿಧಿಗಳು ಮತ್ತು ಕನ್ನಡಾಭಿಮಾನಿಗಳ ಜೊತೆಗೂಡಿ ಕಾಸರಗೋಡು ಮಧೂರು ರಸ್ತೆಯ ಮೀಪುಗುರಿ ಎಲ್.ಪಿ.ಶಾಲೆಯ ಪರಿಸರದ ಜಂಕ್ಷನ್‌ನಿಂದ ಕನ್ನಡ ಗ್ರಾಮಕ್ಕೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ಕನ್ನಡ ಯಾತ್ರೆಯನ್ನು ನವಂಬರ್ 10 ಭಾನುವಾರ ಬೆಳಿಗ್ಗೆ ಗಂಟೆ 9:00 ರಿಂದ ಪ್ರಾರಂಭಿಸಲಾಗುವುದು.


ಕರ್ನಾಟಕ -ಕೇರಳ ರಾಜ್ಯದ ಸಚಿವರು ಲೋಕಸಭಾ ಸದಸ್ಯರು ಶಾಸಕರು ಜನ ಪ್ರತಿನಿಧಿಗಳು ಹಾಗೂ ವಿವಿಧ ಮಠಗಳ ಸ್ವಾಮೀಜಿಯವರು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.


ಕಾಸರಗೋಡು ಪ್ರದೇಶದ ಎಲ್ಲಾ ಸಂಘ ಸಂಸ್ಥೆಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅಧ್ಯಾಪಕರು, ಹೆತ್ತವರು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.


ವಿವಿಧ ಸಂಘ ಸಂಸ್ಥೆಗಳು ಸ್ವಸಹಾಯ ಸಂಘಗಳು ಸ್ತ್ರಿ ಶಕ್ತಿ ಗುಂಪುಗಳ ಸಹಕಾರವನ್ನು ಪಡೆಯಲಾಗುವುದು. ಈ ಸಾಂಸ್ಕೃತಿಕ ಮೆರವಣಿಗೆಯಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾಧ್ಯಕ್ಷ ಸಂಜೀವ ದುಮಕನಾಳ ಅವರು ಹುಬ್ಬಳ್ಳಿ ಧಾರವಾಡದಿಂದ ಸಮ್ಮೇಳನಕ್ಕೆ ಪ್ರಚಾರ ನೀಡಲು 400  ಕೊರಳಿಗೆ ಹಾಕುವ ಕನ್ನಡ ಬಾವುಟ ಮತ್ತು 2 ಕಿ.ಲೋ ಮೀಟರ್ ಉದ್ದದ ಕನ್ನಡ ಬಾವುಟವನ್ನು ಉದಾರವಾಗಿ ನೀಡಲು ಮುಂದೆ ಬಂದಿದ್ದಾರೆ.


ಕಾಸರಗೋಡು ಕನ್ನಡ ಗ್ರಾಮದ ಪರಿಸರದ  ನಿವೇಶನದಲ್ಲಿ ಸುಮಾರು 100 ವಾಹನಗಳಿಗೆ ನಿಲುಗಡೆಗಾಗಿ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದ್ದು ಸಮತಟ್ಟು ಕಾಮಗಾರಿಕೆಯನ್ನು ಪೂರೈಸಲಾಗಿದೆ.


ಕನ್ನಡ ಗ್ರಾಮದ ಪ್ರಧಾನ ವೇದಿಕೆಯ ಮುಂಭಾಗದಲ್ಲಿ ಸುಮಾರು 1000 ಮಂದಿ ಜನರು ಕುಳಿತುಕೊಂಡು ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲ ವಾಗುವಂತೆ ನಿವೇಶನವನ್ನು ಸಮತಟ್ಟು ಮಾಡಲಾಗಿದೆ. ಕನ್ನಡ ಗ್ರಾಮದ ಪರಿಸರದ ಎರಡು ಸಂಪರ್ಕ ರಸ್ತೆಯ ಶುಚೀಕರಣ ಮತ್ತು ತುರ್ತು ರಸ್ತೆ ಕಾಮಗಾರಿಗಾಗಿ ಕಾಸರಗೋಡು ನಗರಸಭೆ ಮತ್ತು ಮಧೂರು ಗ್ರಾಮ ಪಂಚಾಯತು ಅಧ್ಯಕ್ಷರು, ಕೌನ್ಸಿಲರ್  ಸದಸ್ಯರು ಹಾಗೂ ಸಂಬಂಧ ಪಟ್ಟವರಿಗೆ ಸೂಚನೆ ನೀಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top