ಬೆಳಕಿನ ಹಬ್ಬ ದೀಪಾವಳಿಯ ಮೂರು ದಿನಗಳ ಕಾಲ ಪ್ರತಿ ದಿನ ಕೇವಲ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದ್ದು, ಇದಕ್ಕೆ ರಾತ್ರಿ 8ರಿಂದ 10 ಗಂಟೆಯವರೆಗೆ ಸಮಯ ನಿಗದಿ ಮಾಡಿದೆ.
24 ಗಂಟೆ ಹೊಡೆಯುವ ಪಟಾಕಿಯನ್ನು ಎರಡು ಗಂಟೆಯಲ್ಲಿ ಹೊಡೆದರೆ ವಾಯು ಮಾಲಿನ್ಯದ ಸಾಂದ್ರತೆ ಹೆಚ್ಚುವುದಿಲ್ಲವಾ? ಒಂದು ಮಿಲಿಯನ್ ಡಾಲರ್ ಪ್ರಶ್ನೆ.
**
ಪಟಾಕಿ ಕಂಪನಿಗಳಲ್ಲಿ ಈಗಲೂ ಅಕ್ರಮವಾಗಿ ಮಕ್ಕಳನ್ನೇ ಬಳಸಿಕೊಳ್ಳಲಾಗುತ್ತಿದೆ, ಪ್ರತೀ ವರ್ಷ ಅನೇಕ ಮಕ್ಕಳು ಪಟಾಕಿ ಹೊಡೆಯುವಾಗ ಶಾಶ್ವತವಾಗಿ ಕಣ್ಣು ಕಳೆದುಕೊಳ್ತಾ ಇದ್ದಾರೆ, ದೀಪಾವಳಿ ಸಂದರ್ಭದಲ್ಲಿ ಅಸ್ತಮಾ ಪೇಷಂಟ್‌ಗಳ ಸಂಖ್ಯೆ ವಿಪರೀತ ಏರ್ತಾ ಇದೆ. ಪಟಾಕಿ ಶಬ್ದ, DJ ಸೌಂಡ್ ಗಳಿಗೆ ಹೃದಯಾಘಾತ ಆಗುತ್ತಿರುವ ವರದಿಗಳು ಬರುತ್ತಿವೆ.
ದೀಪಾವಳಿಗೆ ಮಾತ್ರ ಅಲ್ಲ, ಎಲ್ಲ ಧರ್ಮಗಳ ಹಬ್ಬ ಆಚರಣೆಗೂ, ರಾಜಕೀಯ ವಿಜಯೋತ್ಸವದಲ್ಲೂ ಪಟಾಕಿ, DJ ಸೌಂಡ್‌ಗಳನ್ನು ನಿಲ್ಲಿಸಬಹುದಲ್ವಾ?
ಮೂಲ ಪಟಾಕಿ ಉತ್ಪಾದನೆಯನ್ನೇ ನಿಲ್ಲಿಸಿದರೆ ಇಡೀ ದೇಶಕ್ಕೇ ಒಳ್ಳೆಯದು. ಪಟಾಕಿ ಆಮದು ಮಾಡಿ, ಇಲ್ಲಿ ಸುಟ್ಟುಹಾಕಿ, ಯಾವುದೋ ವೈರಿ ದೇಶವನ್ನು ಉದ್ದಾರ ಮಾಡುವುದನ್ನೂ ನಿಲ್ಲಿಸಬಹುದು.
ಪರಿವರ್ತನೆ ಜಗದ ನಿಯಮ. ಪಟಾಕಿ ನಿಷೇಧಿಸುವ ಪರಿವರ್ತನೆಯೂ ಆಗಲಿ.
ಬೆಂಗಳೂರಿನಲ್ಲಿ ನನ್ನ ಪರಿಚಯದ ಎರಡು ಕುಟುಂಬಗಳಲ್ಲಿ, ಪಟಾಕಿಯಿಂದ ಒಂದೊಂದು ಕಣ್ಣು ಕಳೆದುಕೊಂಡವರು ಈಗಲೂ ಅರ್ಧ ದೃಷ್ಟಿಯಲ್ಲಿ ನರಳುತ್ತಿದ್ದಾರೆ.
ಪಟಾಕಿ ವಿಚಾರದಲ್ಲಿ ನಮ್ಮ ದೃಷ್ಟಿಕೋನವೂ ಬದಲಾಗಬೇಕಾದ ಕಾಲಕ್ಕೆ ಬಂದಿದ್ದೇವೆ. ಪರಿವರ್ತನೆ ಆಗಲಿ ಅಲ್ವಾ?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ