ನಿಟ್ಟೆ: ಅ.22 ರಂದು ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕ ಹಾಗೂ ಯೂಥ್ ರೆಡ್ ಕ್ರಾಸ್ ಘಟಕಗಳು ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರ ಹಾಗೂ ಗಜ್ರಿಯಾ ನಿಟ್ಟೆ ಇವುಗಳ ನೇತ್ರತ್ವದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು. ಈ ರಕ್ತದಾನ ಶಿಬಿರಕ್ಕೆ ರೋಟರಿ ಕ್ಲಬ್ ನಿಟ್ಟೆ, ಲಯನ್ಸ್ ಕ್ಲಬ್ ಹಿರಿಯಡ್ಕ ಮತ್ತು ಎಚ್.ಡಿ.ಎಫ್.ಸಿ ಬ್ಯಾಂಕ್ ಮಂಗಳೂರು ಸಹಯೋಗವನ್ನು ನೀಡಿತ್ತು.
ರಕ್ತದಾನ ಶಿಬಿರವನ್ನು ಉಡುಪಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ ಉದ್ಘಾಟಿಸಿ, ರಕ್ತದಾನದ ಕುರಿತು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಉಡುಪಿ ಜಿಲ್ಲೆ ರಕ್ತ ಸಂಗ್ರಹದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು ಈ ಯಶಸ್ಸಿಗೆ ವಿದ್ಯಾರ್ಥಿ ಸಮುದಾಯವೇ ಕಾರಣ ಎಂದು ತಿಳಿಸಿದರು. ಅಲ್ಲದೆ ರಕ್ತದಾನವನ್ನು ನಿಯಮಿತವಾಗಿ ಮಾಡುವುದರಿಂದ ಹೃದಯಾಘಾತದ ಜೊತೆಗೆ ಇನ್ನು ಅನೇಕ ರಕ್ತಸಂಬಂಧಿ ಕಾಯಿಲೆಗಳನ್ನು ತಡೆಯಬಹುದು, ಜೊತೆಗೆ ಒಂದು ಯುನಿಟ್ ರಕ್ತದಿಂದ ಎರೆಡು ಜೀವಗಳನ್ನು ಉಳಿಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಎನ್.ಎಸ್.ಎ.ಎಂ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಮನಾ ಎಂ.ಕೆ ಮಾತನಾಡಿ ಜಗತ್ತಿನಲ್ಲಿ ಪರ್ಯಾಯಗಳಿಲ್ಲದ ಅತ್ಯಂತ ಅಮೂಲ್ಯವಾದ ವಸ್ತುವೆಂದರೆ ರಕ್ತ ಮಾತ್ರ. ಹಾಗಾಗಿ ಯುವಜನತೆ ಅನಿವಾರ್ಯದ ಸಂದರ್ಭದಲ್ಲಿ ರಕ್ತದಾನಕ್ಕೆ ಸಿದ್ದರಿರಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ರೋಟರಿ ಕ್ಲಬ್ ನಿಟ್ಟೆಯ ಅಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ಹಿರಿಯಡ್ಕ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಹೆಗ್ಡೆ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಸಿ.ಎಮ್ & ಡಿ ನಿರ್ದೇಶಕ ಶ್ರೀ ಯೋಗಿಶ್ ಹೆಗ್ಡೆ, ನಿಟ್ಟೆ ಗಜ್ರಿಯಾ ಅಸ್ಪತ್ರೆಯ ಸುರೇಶ್ ರಕ್ತದಾನ ಶಿಬಿರಕ್ಕೆ ಶುಭಕೋರಿದರು.
ಉಪನ್ಯಾಸಕರಾದ ಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿ ವಂದಿಸಿದರು ಹಾಗೂ ಕುಮಾರಿ ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಮಾಡಿ ಒಟ್ಟು 175 ಯುನಿಟ್ ರಕ್ತವನ್ನು ಈ ಯೋಜನೆಯ ಮೂಲಕ ಸಂಗ್ರಹಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ