ಕಾಸರಗೋಡು ಕನ್ನಡ ಗ್ರಾಮದಲ್ಲಿ ಜಿಲ್ಲಾಮಟ್ಟದ 'ಕಾಸರಗೋಡು ದಸರಾ -2024' ಚಾಲನೆ

Upayuktha
0



ಕಾಸರಗೋಡು: ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಉತ್ಸವವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಕಳೆದ ಎರಡು ದಶಕಗಳಿಂದ ಆಚರಿಸಿಕೊಂಡು ಬರುತ್ತಿರುವ ಕಾಸರಗೋಡು ದಸರಾ ಉತ್ಸವವನ್ನು ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ರಾಮನಗರ, ಕಾಸರಗೋಡು ನೇತೃತ್ವದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ, ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಇದರ ಸಹಯೋಗ, ಪ್ರಾಯೋಜಕತ್ವದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನವರಾತ್ರಿ ಶುಭಾರಂಭದಲ್ಲಿ ಚಾಲನೆ ನೀಡಲಾಯಿತು.


ಕಾಸರಗೋಡು ದಸರಾ ಉತ್ಸವವನ್ನು ಕಾಸರಗೋಡು ಪೇಟೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಟ್ರಸ್ಟಿ ಡಾ.ಕೆ. ಎನ್ ವೆಂಕಟರಮಣ ಹೊಳ್ಳ ದೀಪ ಬೆಳಗಿಸಿ ವಿದ್ಯುಕ್ತವಾಗಿ ಉದ್ಘಾಟಿಸಿದರು.


ತಾಯಿ ಭುವನೇಶ್ವರಿ ಆರಾಧನೆ ಮೈಸೂರು ದಸರಾ ವನ್ನು ಕನ್ನಡ ನಾಡಿನಾದ್ಯಂತ ಆಚರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ನಾಡಿನಿಂದ ಹೊರಗುಳಿದಿರುವ ಅಚ್ಚಗನ್ನಡ ಪ್ರದೇಶ ಕಾಸರಗೋಡಿನಲ್ಲಿ ನಾಡಹಬ್ಬವನ್ನು ಆಚರಿಸುತ್ತೇವೆ. ನಿರಂತರ ಮಲಯಾಳಿ ಕರಣ ಮಧ್ಯೆ ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಯ ಸಂವರ್ಧನೆಗಾಗಿ ಇಂತಹ ಆಚರಣೆ ಅನಿವಾರ್ಯವಾಗಿದೆ ಎಂದು ಶ್ರೀರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಧಾರ್ಮಿಕ ಸಾಂಸ್ಕೃತಿಕ ಸಂಘಟಕ ಕೆ. ಗುರುಪ್ರಸಾದ್ ಕೋಟೆಕಣಿ ಅವರು ದಿಕ್ಸೂಚಿ ಭಾಷಣದಲ್ಲಿ ಹೇಳಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಕನ್ನಡ ಗ್ರಾಮದಲ್ಲಿ  ನವೆಂಬರ್ 10 ರಂದು ನಡೆಯುವ ಕೇರಳ ರಾಜ್ಯ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕಾಸರಗೋಡು ಜಿಲ್ಲೆ ಸಹಿತ ಕರ್ನಾಟಕ ರಾಜ್ಯದಿಂದ ಸುಮಾರು 1000 ಮಕ್ಕಳು ಹಾಗೂ ಹೆತ್ತವರು, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದು ಕಾಸರಗೋಡಿನ ಎಲ್ಲಾ ಸಂಘ-ಸಂಸ್ಥೆಗಳು ಶಾಲಾ-ಕಾಲೇಜಿನ ಆಡಳಿತ ವರ್ಗದವರ ಸಂಪೂರ್ಣ ಸಹಕಾರವನ್ನು ಕೋರಿದರು.


ಮುಖ್ಯ ಅತಿಥಿಯಾಗಿ ಕಾಸರಗೋಡು ನಗರಸಭೆಯ ಕೌನ್ಸಿಲರ್ ಶಾರದ, ನಿವೃತ ಅಧ್ಯಾಪಕ ನಾರಾಯಣ ಮಾಸ್ಟರ್ ಅಣಂಗೂರು, ಕಾಸರಗೋಡು ಅಡ್ಕತ್ತ ಬೈಲ್ ನ ಮಹಾವಿದ್ಯಾದಾಯಿನಿ ಫೌoಡೇಶನ್ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶ್ರೀವಲ್ಲಿ ಎನ್ .ಆರ್ ಭಾಗವಹಿಸಿದರು.


ವಿಶ್ವ ಹಿಂದೂ ಪರಿಷತ್ತು ಕಾಸರಗೋಡು ನಗರ ಸಮಿತಿ ಆಶ್ರಯದಲ್ಲಿ ನವರಾತ್ರಿಯ ಪ್ರಯುಕ್ತ ವಿವಿಧ ಧಾರ್ಮಿಕ ಕ್ಷೇತ್ರ ಮಠ ಮಂದಿರಗಳಲ್ಲಿ ಹಮ್ಮಿಕೊಂಡಿರುವ ಸರಣಿ ಕಾರ್ಯಕ್ರಮದ ಅಂಗವಾಗಿ 'ದಸರಾ ಸತ್ಸಂಗವನ್ನು 'ಹರಿದಾಸ ಜಯಾನಂದ ಕುಮಾರ್ ಅನಂತಪುರ ನೀಡಿದರು.


ಮಾಜಿ ಕೌನ್ಸಿಲರ್ ಶಂಕರ್ ಕೆ.ಜೆ ಪಿ ನಗರ ಸ್ವಾಗತಿಸಿದರು. ಶ್ರೀಮತಿ ಕಾವ್ಯ ಕುಶಲ ಧನ್ಯವಾದವಿತ್ತರು. ಕೆ  ಜಗದೀಶ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.


ಅಮ್ಮ ಇವೆಂಟ್ಸ್ ಕನ್ನಡ ಗ್ರಾಮದ ಮಾಲಕ ಕುಶಲಕುಮಾರ್, ಕೆ. ಅನಿಲ್ ರಾಜ್ ನಾಗರಕಟ್ಟೆ, ಅಶ್ವಿನಿ ಗುರುಪ್ರಸಾದ್, ರಾಧಾ ಶಿವರಾಮ ಶ್ರೀಕಾಂತ್ ಕಾಸರಗೋಡು, ಸವಿತಾ ಕಿಶೋರ್, ನಿಶ್ಮಿತಾ ಮಿಥುನ್, ಸೌಮ್ಯ ನಾಗರಕಟ್ಟೆ ಸಹಕರಿಸಿದರು.


ಸಾಂಸ್ಕೃತಿಕ ಕಲಾ ವೈಭವದಲ್ಲಿ ಅಡ್ಕತ್ತ ಬೈಲ್‌ನ ಮಹಾವಿದ್ಯಾದಾಯಿನಿ ಫೌಂಡೇಶನ್ ಶಾಲೆಯ ವಿದ್ಯಾರ್ಥಿಗಳಿಂದ ಜಾನಪದ ಸಮೂಹ ನೃತ್ಯ, ಸಮೂಹ ಗಾಯನ ಹಾಗೂ 'ಫಿಂಗರ್ ಡ್ರಮ್ಮರ್' ಮಣಿಕಂಠ ಆಚಾರ್ಯ ಕೋಟೂರು ಇವರಿಂದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ನಡೆಯಿತು.


ಕಾಸರಗೋಡು ದಸರಾ ಪ್ರಯುಕ್ತ ಜಿಲ್ಲೆಯ ವಿವಿಧ ದೇವಸ್ಥಾನಗಳು ಶಾಲೆಗಳು ಹಾಗೂ ಸಾಂಸ್ಕೃತಿಕ ಕೇಂದ್ರಗಳಲ್ಲಿ ವಿವಿಧ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top