ಬಳ್ಳಾರಿ: ವಿಜಯ ದಶಮಿ ಹಬ್ಬದ ಹಿನ್ನೆಲೆ ಶುಕ್ರವಾರ ಸಂಜೆ ಬಳ್ಳಾರಿಯ ಗಾಂಧಿ ನಗರದಲ್ಲಿರುವ ಶ್ರೀ ರಾಘವೇಂದ್ರ ಎಂಟರಪ್ರೈಜಸ್'ನ ಕಚೇರಿಯಲ್ಲಿ ಶಾಸಕ ನಾರಾ ಭರತ್ ರೆಡ್ಡಿಯವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಯುಧ ಪೂಜೆ ನಡೆಯಿತು.
ಪೂಜೆಯಲ್ಲಿ ಮಾಜಿ ಶಾಸಕ, ಉದ್ಯಮಿ ನಾರಾ ಸೂರ್ಯನಾರಾಯಣ ರೆಡ್ಡಿ, ಶ್ರೀ ರಾಘವೇಂದ್ರ ಎಂಟರ್'ಪ್ರೈಜಸ್'ನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಭಾಗಿಯಾದರು.
ಆಹ್ವಾನಿತರಾಗಿ ಬಂದಿದ್ದ ಹಿರಿಯ ಐಪಿಎಸ್ ಅಧಿಕಾರಿ, ಬಳ್ಳಾರಿ ವಲಯ ಐಜಿಪಿ ಲೋಕೇಶ್, ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ನಗರ ಡಿಎಸ್'ಪಿ ನಂದರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಜುಬೇರ್ ಅಹ್ಮದ್, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಲ್ಲಾ ರಮೇಶಬಾಬು, ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ, ಮಹಾನಗರ ಪಾಲಿಕೆಯ ಆಯುಕ್ತ ಖಲೀಲಸಾಬ ಅವರು ಪೂಜೆಯಲ್ಲಿ ಭಾಗಿಯಾದರು.
ಇದೇ ಸಂದರ್ಭ ಬಳ್ಳಾರಿ ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಹುಮಾಯೂನ್ ಖಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಚಿದಾನಂದಪ್ಪ ಯಾದವ್, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಬಗರ್ ಹುಕುಂ ಸಮಿತಿ ತಾಲೂಕಾಧ್ಯಕ್ಷ ತಿಮ್ಮನಗೌಡ, ಮೇಯರ್ ಮುಲ್ಲಂಗಿ ನಂದೀಶ್, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ನೂರ್ ಮಹಮ್ಮದ್, ಪಾಲಿಕೆಯ ಹಾಲಿ ಹಾಗೂ ಮಾಜಿ ಸದಸ್ಯರು, ವಿವಿಧ ಸಮಿತಿ-ಮಂಡಳಿ-ಪ್ರಾಧಿಕಾರಗಳ ಸದಸ್ಯರು ಪೂಜೆಯಲ್ಲಿ ಭಾಗಿಯಾದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎ.ಮಾನಯ್ಯ, ನರಸಪ್ಪ, ತಳವಾರ ದುರ್ಗಪ್ಪ, ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ರಾಂಪ್ರಸಾದ್, ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಗಾದಿಲಿಂಗನಗೌಡ, ಕೆರಕೋಡಪ್ಪ, ಸಿದ್ಧನಗೌಡ, ಕುಡಿತಿನಿ ರಾಮಾಂಜನಿ, ಬೆಣಕಲ್ ಬಸವರಾಜಗೌಡ, ಕಮ್ಮ ಮಹಾಜನ ಸಂಘದ ಅಧ್ಯಕ್ಷ ಮುಂಡ್ಲೂರು ಅನೂಪ್, ಎಂ.ನಾರಾಯಣ ರಾವ್ (ಚಿಟ್ಟಿ), ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಕೋರಿ ವಿರೂಪಾಕ್ಷಪ್ಪ, ಸಂಗನಕಲ್ ಬಸವರಾಜ್, ಗೋನಾಳ ನಾಗಭೂಷಣ ಗೌಡ, ಚಾನಾಳ್ ಶೇಖರ್, ಗಂಗಾವತಿ ವೀರೇಶ್, ಅಸುಂಡಿ ನಾಗರಾಜ, ಗುಪ್ತಾ, ಉದ್ಯಮಿ ಲಕ್ಷ್ಮೀಕಾಂತ್ ರೆಡ್ಡಿ, ಭಾಸ್ಕರ್ ರೆಡ್ಡಿ, ತಿಮ್ಮಾ ರೆಡ್ಡಿ, ಕೇಶವ್ ರೆಡ್ಡಿ, ವಕೀಲರಾದ ಜೆ.ಎಸ್.ಬಸವರಾಜ್, ಜನಾರ್ಧನ್, ಮಿಂಚೇರಿ ಬಾಬು, ಕೊಟ್ರೇಶ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಯಾಜ್ ಅಹ್ಮದ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹುಸೇನ್ ಪೀರಾ, ಕೆ.ಎಂ.ಅಭಿಲಾಷ್, ಮೀನಳ್ಳಿ ಚಂದ್ರಶೇಖರ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಮಂಜುಳಾ, ಶಮೀಮ್ ಜಕ್ಲಿ, ಚಂಪಾ ಚವ್ಹಾಣ್, ರೈತ ಮುಖಂಡರಾದ ಮಾಧವರೆಡ್ಡಿ, ಪುರುಷೋತ್ತಮ್ ಗೌಡ, ವೈದ್ಯರಾದ ಡಾ.ಬಿ.ಕೆ. ಸುಂದರ್, ಡಾ.ಮಂಜುನಾಥ್, ಡಾ.ರಾಜೇಶ್, ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಯಶ್ವಂತ್ ನಾಗಿರೆಡ್ಡಿ, ವೇಣು, ಮುಂಡ್ಲೂರು ವಿಜಿ, ಮಂಡ್ಲೂರು ವಿಜಯ್ (ಕಾಕರ್ಲತೋಟ), ಉಪ್ಪಾರ ಯರಿಸ್ವಾಮಿ, ತೌಸಿಫ್, ಹಾಶೀಂ, ಪಿ. ಮೌಲಾಲಿ, ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಸಿ. ಇಬ್ರಾಹಿಂಬಾಬು ಸೇರಿದಂತೆ ನಗರದ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು-ಕಾರ್ಯಕರ್ತರು, ಶಾಸಕ ನಾರಾ ಭರತ್ ರೆಡ್ಡಿಯವರ ಅಭಿಮಾನಿಗಳು ಪೂಜೆಯಲ್ಲಿ ಭಾಗಿಯಾದರು.
ನಾರಾ ಭರತ್ ರೆಡ್ಡಿ ಕುಟುಂಬದಿಂದ ಪೂಜೆ: ಕಚೇರಿಯ ಆಯುಧ ಪೂಜೆಗೂ ಮುನ್ನ ನಗರದ ಆದಿ ದೇವತೆ ಶ್ರೀ.ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಶಾಸಕ ನಾರಾ ಭರತ್ ರೆಡ್ಡಿ ತಮ್ಮ ಧರ್ಮ ಪತ್ನಿ, ವೀರಶೈವ ಲಿಂಗಾಯತ ಸಮುದಾಯದ ಯುವ ನಾಯಕಿ ನಾರಾ ವೈಜಯಂತಿ ರೆಡ್ಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ಪುತ್ರಿ ವರಳಿಕಾ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ