ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ 2024 ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

Upayuktha
0


ಮೂಡುಬಿದಿರೆ:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೈಸೂರು ವಿಭಾಗ ಮಟ್ಟವನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಅಥ್ಲೆಟಿಕ್ಸ್, ಬಾಲ್ ಬ್ಯಾಡ್ಮಿಂಟನ್, ವೇಯ್ಟ್ ಲಿಫ್ಟಿಂಗ್, ಕಬಡ್ಡಿ, ಕುಸ್ತಿ, ಯೋಗ ಸ್ಪರ್ಧೆಯಲ್ಲಿ ಪಾರಮ್ಯ ಮೆರೆಯಿತು.


ಅಥ್ಲೆಟಿಕ್ಸ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 08 ಚಿನ್ನ, 06 ಬೆಳ್ಳಿ, 05 ಕಂಚಿನ ಪದಕಗಳೊಂದಿಗೆ ಒಟ್ಟು 19 ಪದಕ ಪಡೆಯಿತು.


ಮಹಿಳೆಯರ ವಿಭಾಗದಲ್ಲಿ: ದೀಪಾಶ್ರೀ- 4X00ರಿಲೇ (ಪ್ರಥಮ), 4X400ರಿಲೇ (ಪ್ರಥಮ),  ಪ್ರಿಯಾಂಕ- 4X100ರಿಲೇ (ಪ್ರಥಮ), ಪ್ರಜ್ಞಾ 4X100ರಿಲೇ (ಪ್ರಥಮ), 4X400ರಿಲೇ (ಪ್ರಥಮ), ರೀತುಶ್ರೀ 4X100ರಿಲೇ (ಪ್ರಥಮ), 4X400ರಿಲೇ (ಪ್ರಥಮ), ಗೀತಾ- 4X400ರಿಲೇ (ಪ್ರಥಮ) ಹಾಗೂ ಎರಡೂ ರಿಲೇಯಲ್ಲಿ ಹೊಸ ಕೂಟ ದಾಖಲೆಯನ್ನು ನಿರ್ಮಿಸಿರುತ್ತಾರೆ.


ಸುಷ್ಮಾ-ಚಕ್ರ ಎಸೆತ (ದ್ವಿತೀಯ), ಸಿಂಚನಾ-ಜಾವೆಲಿನ್ ಎಸೆತ(ತೃತೀಯ), ರೇಖಾ ಬಸಪ್ಪ-800ಮೀ (ತೃತೀಯ), ರೂಪಾಶ್ರೀ-3000ಮೀ(ತೃತೀಯ), 1500ಮೀ(ತೃತೀಯ), ಪ್ರಿಯಾಂಕ-ಉದ್ದ ಜಿಗಿತ(ತೃತೀಯ) ಸ್ಥಾನ ಪಡೆದಿದ್ದಾರೆ.


ಪುರುಷರ ವಿಭಾಗದಲ್ಲಿ: ದಯಾನಂದ-400ಮೀ(ದ್ವಿತೀಯ) 4X400ಮೀ ರಿಲೇ(ದ್ವಿತೀಯ), ರಾಮು 4X400ಮೀ ರಿಲೇ(ದ್ವಿತೀಯ) ಶಿವಾನಂದ-4X400ಮೀ ರಿಲೇ(ದ್ವಿತೀಯ) ಯಶವಂತ್ 4X400ಮೀ ರಿಲೇ(ದ್ವಿತೀಯ) ಸ್ಥಾನ ಪಡೆದಿದ್ದಾರೆ.


ಯೋಗ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 01 ಚಿನ್ನ, 01 ಬೆಳ್ಳಿ, ಒಟ್ಟು 02 ಪದಕ. ಫಲಿತಾಂಶ: ಆರ್ಟಿಸ್ಟಿಕ್ ಯೋಗಾಸನ-ಕಲ್ಮೇಶ್ ಮತ್ತು ಶ್ಯಾಮ ಬಿ (ಪ್ರಥಮ), ರಿದಾಮಿಕ್ ಯೋಗಾಸನ-ಪೃಥ್ವಿಚಾರ್ ಮತ್ತು ಹೇಮಂತ್ ಸಿ (ದ್ವಿತೀಯ) ಸ್ಥಾನ ಪಡೆದಿದ್ದಾರೆ.


ಕಬಡ್ಡಿ ಪುರುಷ ವಿಭಾಗದಲ್ಲಿ ಪ್ರಥಮ ಮತ್ತು ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದರು. ಬಾಲ್ ಬ್ಯಾಡ್ಮಿಂಟನ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು  ಸಮಗ್ರ ಚಾಂಪಿಯನ್ಸ್ ಪಟ್ಟ ಪಡೆಯಿತು.


ಪುರುಷರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ತಂಡ ಬೆಂಗಳೂರು ನಗರ ತಂಡವನ್ನು 31-35, 35-25, 37-35 ಅಂಕಗಳಿಂದ ಸೋಲಿಸಿ ಒಟ್ಟು 6ನೇ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ವಿಜೇತರಾಗಿ ಹೊರಹೊಮ್ಮಿದ್ದಾರೆ.


ಮಹಿಳಾ ವಿಭಾಗದ  ಫೈನಲ್‌ನಲ್ಲಿ ಆಳ್ವಾಸ್ ತಂಡ ಬೆಂಗಳೂರು ಗ್ರಾಮಾಂತರ ತಂಡವನ್ನು 35-11, 35-17ನೇರ ಸೆಟ್‌ಗಳಿಂದ ಸೋಲಿಸಿ ಸತತ 16ನೇ ಬಾರಿ ರಾಜ್ಯ ಮಟ್ಟದ ದಸರಾ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ


ವೇಯ್ಟ್ ಲಿಫ್ಟಿಂಗ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 04 ಚಿನ್ನ, 07 ಬೆಳ್ಳಿ, ಒಟ್ಟು 11 ಪದಕ ಪಡೆಯಿತು.  


ಪುರುಷರ ವಿಭಾಗದಲ್ಲಿ: ಪ್ರಶಾಂತ್-55ಕೆಜಿ(ಪ್ರಥಮ), ಶಿವಾನಂದ-73ಕೆಜಿ (ಪ್ರಥಮ), ಜೇಮ್ಸ್-89ಕೆಜಿ (ಪ್ರಥಮ), ನಾಗರಾಜ್-61ಕೆಜಿ (ದ್ವಿತೀಯ), ಅಮೀರ್-55ಕೆಜಿ (ದ್ವಿತೀಯ), ಸಂತೋಷ್-96 ಕೆಜಿ (ದ್ವಿತೀಯ), ದರ್ಶನ್-102ಕೆಜಿ (ದ್ವಿತೀಯ), ಪ್ರತ್ಯೂಶ್-109ಕೆಜಿ (ದ್ವಿತೀಯ)


ಮಹಿಳೆಯರ ವಿಭಾಗದಲ್ಲಿ: ವಿತಶ್ರೀ-76ಕೆಜಿ (ಪ್ರಥಮ), ಮಾನಸ-71ಕೆಜಿ (ದ್ವಿತೀಯ), ಅನುಷಾ-64ಕೆಜಿ (ದ್ವಿತೀಯ) ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಕುಸ್ತಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ 01 ಬೆಳ್ಳಿ, 05 ಕಂಚಿನ ಪದಕದೊಂದಿಗೆ ಒಟ್ಟು 06 ಪದಕ.

ಪುರುಷರ ವಿಭಾಗದಲ್ಲಿ: ಚೇತನ್-74ಕೆಜಿ (ತೃತೀಯ)


ಮಹಿಳೆಯರ ವಿಭಾಗದಲ್ಲಿ: ಶ್ಯಾಮಲ-50ಕೆಜಿ (ದ್ವಿತೀಯ), ದೀಪಾ-62ಕೆಜಿ (ತೃತೀಯ), ಮಾನ್ಯ-65ಕೆಜಿ (ತೃತೀಯ), ವೈಶಾಲಿ-72ಕೆಜಿ (ತೃತೀಯ), ನೇಹಾ-68ಕೆಜಿ (ತೃತೀಯ), ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top