ಪುತ್ತೂರಿನ ವಿವೇಕಾನಂದ ಕಲಾ, ವಾಣ ಜ್ಯ, ವಿಜ್ಞಾನ ಮಹಾವಿದ್ಯಾಲಯದ(ಸ್ವಾಯತ್ತ) ಬೈಂದೂರು ಪ್ರಭಾಕರ್ ರಾವ್ ಸಭಾಭವನದಲ್ಲಿ ಪ್ರಥಮ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನವನ್ನು ಪಡೆಯುವುದು ಒಂದು ವಿಧಾನವಾದರೆ. ಜ್ಞಾನವನ್ನು ಹೊಂದಿಸುವುದು ಮತ್ತೊಂದು ವಿಧ. ತರಗತಿ ಕೋಣೆಯಲ್ಲಿ ಕಲಿಯುವುದರ ಜೊತೆಗೆ ಸಮಾಜಕ್ಕೆ ಕಿವಿಯಾಗಿ ಸಮಾಜದಿಂದ ಕಲಿತುಕೊಳ್ಳುವುದು ಬಹಳಷ್ಟು ಇದೆ.
ಅದನ್ನು ಅರಿತುಕೊಳ್ಳಲು ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಅಂಶಗಳಿಗೂ ಮೌಲ್ಯಗಳನ್ನು ನೀಡಬೇಕು ಮತ್ತು ಆ ವಿಚಾರಗಳ ಬಗ್ಗೆ ವ್ಯವಸ್ಥೆಗಳ ಬಗ್ಗೆ ಗಮನಹರಿಸಬೇಕು. ಆದರೆ ಅದನ್ನು ಕಲಿಕೆ ಎಂದು ಗುರುತಿಸುವಲ್ಲಿ ಹಿಂದುಳಿಯುತ್ತೇವೆ. ಕಲಿಯುವಿಕೆ ಎನ್ನುವುದು ನಿರಂತರವಾದುದು ಎಂದರು.
ಸೇವೆ ತ್ಯಾಗಕ್ಕಾಗಿ ಸಿದ್ಧರಾಗಿ:
ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಮಾತನಾಡಿ, ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಗಂಭೀರ ಗಮನವನ್ನು ಕೊಡಬೇಕು. ಪಠ್ಯವನ್ನು ಕಿವಿಯಿಟ್ಟು ಕೇಳುವ ವ್ಯವಧಾನವನ್ನು ಪ್ರವೃತ್ತಗೊಳಿಸಬೇಕು. ಆದರೆ ಪಠ್ಯದ ವಿಚಾರಗಳಿಗೆ ಮಾತ್ರ ಸೀಮಿತವಾಗದೆ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಮಾಜ ವಿದ್ಯಾರ್ಥಿಗಳಿಂದ ಕೊಡುಗೆಯನ್ನು ನಿರೀಕ್ಷಿಸುತ್ತಿರುತ್ತದೆ. ಹಾಗಾಗಿ ಸಿಗುವಂತಹ ಎಲ್ಲ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಬೇಕು, ಸೇವೆ ತ್ಯಾಗವನ್ನು ಮಾಡಲು ನಾವು ಸಿದ್ಧರಿರಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ತಾವು ಸ್ನಾತಕೋತ್ತರ ವಿಭಾಗಕ್ಕೆ ತಲುಪಿದೆವೆಂದು ದೊಡ್ಡವರಾಗದೆ ಹೆತ್ತವರಿಗೆ ಮಕ್ಕಳಾಗಿಯೇ ಬದುಕಬೇಕು. ಹೆತ್ತವರ ಪ್ರತೀಕ್ಷೆಯನ್ನು ನಿರಾಸೆಗೊಳಿಸದೆ, ಅವರೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಬೇಕು. ಎಂತಹದ್ದೇ ಹುದ್ದೆಯಲ್ಲಿದ್ದರೂ ಹೆತ್ತವರನ್ನು ಮರೆಯಬಾರದು ಎಂದರು.
ಕಾರ್ಯಕ್ರಮದಲ್ಲಿ ದ್ವಿತೀಯ ಎ.ಕಾಂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ. ಶ್ರೀಧರ ಎಚ್. ಜಿ ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಪ್ರಸ್ತಾವಿಸಿ, ಡೀನ್ ಡಾ. ವಿಜಯಸರಸ್ವತಿ ಬಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮಿ ವಿ. ಭಟ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ