ಕಟೀಲು: ಕಲೆಯ ಆರಾಧಕರು ಕಲಾವಿದರು. ಆ ಕಾರಣಕ್ಕಾಗಿ ಅದು ಅವರಿಗೆ ಒಲಿಯುತ್ತದೆ. ಆ ಮೂಲಕ ಕಲಾವಿದ ಪ್ರಕಾಶಕ್ಕೆ ಬಂದು ಬೆಳಗುತ್ತಾನೆ. ಗೋಣಿಬೀಡಿಂದ ಬಂದ ಸಂಜಯ ಕುಮಾರ್ ರವರು ಯಕ್ಷಗಾನವನ್ನು ಪ್ರೀತಿಸುತ್ತಾ, ಕಟೀಲಮ್ಮನನ್ನು ಆರಾಧಿಸುತ್ತಾ ನನ್ನ ಹಾಗೂ ತಂದೆಯವರ ಮೇಲೆ ಭಕ್ತಿಯಿರಿಸಿಕೊಂಡು ಯಕ್ಷ ಕಣ್ಮಣಿಯಾದರು. ಕಲಾ ಮುನ್ನಣಿಯಾದರು. ಅವರ ಕಲಾಯಾನದ 50ರ ವರ್ಷಪೂರ್ತಿಯ ಕಾರ್ಯಕ್ರಮಗಳು ನೂರಾರು ನಡೆದು ಅವರಿಗೆ ಕಟೀಲ ಉಳ್ಳಾಲ್ದಿ ವರವಾಗಿ ಹರಸಲಿ" ಎಂದು ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರೂ, ಹಿರಿಯರೂ ಆದ ವೇ.ಮೂ. ಶ್ರೀ ಲಕ್ಮೀನಾರಾಯಣ ಆಸ್ರಣ್ಣರು ಗೋಪಾಲಕೃಷ್ಣ ಆಸ್ರಣ್ಣ ಹೇಳಿದರು.
ಅವರು ಕಟೀಲಿನ ಸಭಾ ಭವನದಲ್ಲಿ ಜರಗಿದ ಸಂಜಯ 50ರ ಯಕ್ಷಯಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಹರಿಸಿದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡುತ್ತಾ "ಸಂಜಯ ಕುಮಾರ್ ರಂತಹಾ ಕಲಾವಿದರು ಮಾತು ಕಡಿತ ಮಾಡಿ ಉತ್ತಮ ಸಾಧನೆ ಮಾಡಿ ಸಾಧಕರಾಗಿದ್ದಾರೆ. ಅವರಿಗೆ ಎಲ್ಲರ ಬೆಂಬಲವಿರಲಿ" ಎಂದರು.
ಆದಾನಿ ಗ್ರೂಪಿನ ಕಿಶೋರ್ ಆಳ್ವರು ಸಂಜಯರ ಈ ನೂರರ ಕಾರ್ಯಕ್ರಮ 50ರ ಯಕ್ಷಯಾನವನ್ನು ದೀಪ ಪ್ರಜ್ವಲಿಸಿ ಶುಭಾರಂಭ ನೀಡಿದರು. ಯುಗಪುರುಷದ ಭುವನಾಭಿರಾಮ, ನ್ಯಾಯವಾದಿ ಮೋಹನ್ ದಾಸ್ ರೈ ಸಂಜಯ 50 ರ ಯಕ್ಷಯಾನಕ್ಕೆ ಶುಭ ಹಾರೈಸಿದರು.
ಭಾಜಪದ ಮಾಜಿ ಜಿಲ್ಲಾಧ್ಯಕ್ಷ ಎಂ. ಸಂದರ್ಶನರು "ಈ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ. ನಾವೂ ಅದಕ್ಕೆ ಪ್ರಯತ್ನ ಪಟ್ಟು ನೂರರ ಗಡಿ ತಲುಪಿಸೋಣ" ಎಂದರು.
ಕಾರ್ಯಕ್ರಮದ ಕೇಂದ್ರ ಬಿಂದು ಗೋಣಿಬೀಡು ಸಂಜಯ ಕುಮಾರ್ ಶೆಟ್ಟಿಯವರು ಪ್ರಸ್ತಾವನೆಯನ್ನು, ಸರ್ವರನ್ನು ಸ್ವಾಗತಿಸುತ್ತಾ ತನ್ನ ಐವತ್ತು ತಿರುಗಾಟಗಳನ್ನು ನೆನಪಿಸಿಕೊಂಡರು.
ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಮತ್ತು ತಂಡದಿಂದ ಯಕ್ಷಗಾನದ ಸಾಂಪ್ರದಾಯಿಕ ಪ್ರಾರ್ಥನೆ ಜರಗಿತು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ನಿರೂಪಿಸಿದರು. ಅಕ್ಷಯ ಸುವರ್ಣ ಸಹಕರಿಸಿದರು. ಬಳಿಕ ಖ್ಯಾತ ಕಲಾವಿದರು ದೇವೆರೆಗ್ ಅರ್ಪಣೆ ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ