ಕಲೆ, ಸಂಸ್ಕೃತಿ, ಆಚಾರ ವಿಚಾರ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಎಲ್ಲರ ಜವಾಬ್ದಾರಿ: ಯು ಟಿ ಖಾದರ್

Upayuktha
0


ಮಂಗಳೂರು: ಭಾರತ ದೇಶವು ವಿವಿಧ ಸಂಸ್ಕೃತಿ ಸಂಸ್ಕಾರಗಳಿಂದ ಕೂಡಿದ್ದರೂ ಎಲ್ಲರೂ ಪ್ರೀತಿ ಸಾಮರಸ್ಯದ ಮೂಲಕ ಜೀವನ ಸಾಗಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನ ಸಭೆ ಸಭಾಪತಿ ಯು ಟಿ ಖಾದರ್ ಹೇಳಿದರು.


ಮಂಗಳೂರು ಲಯನ್ಸ್ ಸೇವಾ ಮಂದಿರದಲ್ಲಿ ತೆಲುಗು ಕಲಾ ಸಂಘ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ ಸಭಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಕಲೆ ಸಂಸ್ಕೃತಿ, ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗ ಕೊಂಡ್ಯೂಯುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ಈ ರೀತಿಯ ಹಬ್ಬದ ಆಚರಣೆ ಸಾಮರಸ್ಯದ ಸಂಕೇತವಾಗಿದೆ ಎಂದು ಹೇಳಿದರು.


ಇದೇ ವೇಳೆ ತೆಲುಗು ಕಲಾ ಸಂಘದ ವತಿಯಿಂದ ಸ್ಪೀಕರ್ ಯು ಟಿ ಖಾದರ್ ಅವರನ್ನು ಅಭಿನಂದಿಸಲಾಯಿತು.


ಕಾರ್ಯಕ್ರಮ ದಲ್ಲಿ  ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ತೆಲುಗು ಕಲಾ ಸಂಘದ ಗೌರವಾಧ್ಯಕ್ಷ ಸಾಂಬಶಿವ ರಾವ್, ಅಧ್ಯಕ್ಷ ಡಾ ಕರ್ರ ರಾಮ, ಉಪಾಧ್ಯಕ್ಷ ವಡೆಲ್ಲಾ ವೆಂಕಟ್ ಫಣಿ, ರಾವುರಿ ನಾಗಫಣಿ, ಕಾರ್ಯದರ್ಶಿ ಇನ್ನುಮಲ ಶ್ರೀನಿವಾಸ, ಕೋಶಾಧಿಕಾರಿ ನಾಗವರು ಶ್ರೀನಿವಾಸ, ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಉಪಸ್ಥಿತರಿದ್ದರು.


ಸಂಗೀತ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ತೆಲುಗು ಕಲಾ ಸಂಘದ ಸದಸ್ಯರಿಂದ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top