ಮೂಡುಬಿದಿರೆ: ಅಥ್ಲೆಟಿಕ್ಸ್ ಕ್ರೀಡಾಕೂಟ-ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 46 ಪದಕ

Upayuktha
0


ಮೂಡುಬಿದಿರೆ:
ಮೈಸೂರು ಜಿಲ್ಲಾ  ಅಥ್ಲೆಟಿಕ್ಸ್ ಸಂಸ್ಥೆ (ರಿ.) ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳಿಗೆ 22 ಚಿನ್ನ, 08 ಬೆಳ್ಳಿ, 16 ಕಂಚು ಒಟ್ಟು 46 ಪದಕಗಳು, 2 ನೂತನ ಕೂಟ ದಾಖಲೆ ಹಾಗೂ 2 ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. 


ಇದರಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳು ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ. ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನಿಂದ ಒಟ್ಟು 87 ಕ್ರೀಡಾಪಟುಗಳು ಭಾಗವಹಿಸಿದ್ದರು.  ಆಳ್ವಾಸ್ ಸ್ಪೋಟ್ಸ್ ಕ್ಲಬ್ ಕಳೆದ 16 ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಬಂದಿರುತ್ತದೆ. ಸಮಗ್ರ ಚಾಂಪಿಯನ್ಸ್ ಪಟ್ಟ ಪಡೆದ ದಕ್ಷಿಣ ಕನ್ನಡ ಜಿಲ್ಲೆಯು 402 ಅಂಕಗಳಿಂದ ಪ್ರಥಮ ಸ್ಥಾನ ಪಡೆದರೆ, ಬೆಂಗಳೂರು ನಗರ 242 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಆಳ್ವಾಸ್‌ನ ಆಕಾಶ ಹುಕ್ಕೇರಿ (80 ಮೀ ಅಡೆತಡೆ ಓಟ), ನಾಗೇಂದ್ರ ಅಣ್ಣಪ್ಪ ನಾಯ್ಕ (ಚಕ್ರ ಎಸೆತ) ನೂತನ ಕೂಟ ದಾಖಲೆ ನಿರ್ಮಿಸಿದರೆ, ಲೋಹಿತ್ ಗೌಡ, ಸುಶಾನ್ ಬೆಸ್ಟ್ ಅಥ್ಲೇಟ್ ಗೌರವಕ್ಕೆ ಪಾತ್ರರಾಗಿದ್ದಾರೆ.


ಫಲಿತಾಂಶ :

14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ : ಕೌಶಿಕ್ ತ್ರಯತ್ಲನ್ ಎ (ಪ್ರಥಮ), ಲೋಹಿತ್ ಗೌಡ ತ್ರಯತ್ಲನ್ ಬಿ (ಪ್ರಥಮ)


16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ : ಆಕಾಶ್ 80ಮೀ ಹರ್ಡಲ್ಸ್ (ಪ್ರಥಮ), ಗೌತಮ್ 80ಮೀ ಹರ್ಡಲ್ಸ್ (ತೃತೀಯ), ಕೃಷ್ಣ ಜವಲಿನ್ ಎಸೆತ (ತೃತೀಯ), ನಿಖಿಲ್ ಗುಂಡು ಎಸೆತ (ಪ್ರಥಮ)


18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ: ಶಿವಾನಂದ 1000ಮೀ (ದ್ವಿತೀಯ), ದಯಾನಂದ 400ಮೀ (ತೃತೀಯ), ನಿತಿನ್ ಚಕ್ರ ಎಸೆತ (ದ್ವಿತೀಯ), ಶೋಭಿತ್ ಗುಂಡು ಎಸೆತ (ತೃತೀಯ), ಹಿತೇಶ್ 100ಮೀ ಹರ್ಡಲ್ಸ್ (ತೃತೀಯ), ವಿನಾಯಕ 5ಕಿಮೀ ನಡಿಗೆ (ಪ್ರಥಮ)


20 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ: ಯಶವಂತ 800ಮೀ(ತೃತೀಯ), ದರ್ಶನ್ 10 ಕಿಮೀ ನಡಿಗೆ (ಪ್ರಥಮ), ಶ್ರೀಕಾಂತ್ ಚಕ್ರ ಎಸೆತ (ಪ್ರಥಮ), ಗಣೇಶ್ ಗೊಂಡು ಎಸೆತ (ಪ್ರಥಮ), ತೇಜಲ್ 110ಮೀ ಹರ್ಡಲ್ಸ್ (ಪ್ರಥಮ), ವೀರೇಶ್ ಜಾವಲಿನ್ ಎಸೆತ (ತೃತೀಯ), ಸುಶಾನ್ ಉದ್ದ ಜಿಗಿತ (ಪ್ರಥಮ), ಸನತ್ ಡೆಕತ್ಲಾನ್ (ಪ್ರಥಮ)


23 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ: ನಾಗೇಂದ್ರ ಚಕ್ರ ಎಸೆತ (ಪ್ರಥಮ), ಮೋಹನ್ ಡೆಕತ್ಲಾನ್ (ದ್ವಿತೀಯ)


16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ರಕ್ಷಿತಾ ಎತ್ತರ ಜಿಗಿತ (ಪ್ರಥಮ)


18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ಚೋಡಮ್ಮ 100ಮೀ ಹರ್ಡಲ್ಸ್ (ತೃತೀಯ), ಚರಿಷ್ಮ 1000ಮೀ (ತೃತೀಯ), ವೃತಾ ಹೆಗ್ಡೆ ಗುಂಡು ಎಸೆತ (ತೃತೀಯ) ವಿಸ್ಮಿತಾ ಗುಂಡು ಎಸೆತ (ದ್ವಿತೀಯ)


20 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ರೂಪಾಶ್ರೀ 3000ಮೀ (ದ್ವಿತೀಯ), 1500ಮೀ (ದ್ವಿತೀಯ), ಪ್ರಣಮ್ಯ 3000ಮೀ (ತೃತೀಯ), 5000ಮೀ (ತೃತೀಯ), ಐಶ್ವರ್ಯ ಚಕ್ರ ಎಸೆತ (ಪ್ರಥಮ), ಗುಂಡು ಎಸೆತ (ತೃತೀಯ), ಶಬರಿ 100ಮೀ ಹರ್ಡಲ್ಸ್ (ದ್ವಿತೀಯ), 400ಮೀ ಹರ್ಡಲ್ಸ್ (ತೃತೀಯ), ಅಂಬಿಕಾ 1000ಮೀ ನಡಿಗೆ (ಪ್ರಥಮ), ಸ್ವಪ್ನಾ 100ಮೀ ನಡಿಗೆ (ದ್ವಿತೀಯ),


23 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ದೀಪಾಶ್ರೀ 800ಮೀ (ಪ್ರಥಮ), ರೇಖಾ 800ಮೀ (ದ್ವಿತೀಯ), 1500ಮೀ (ಪ್ರಥಮ), ಸುಷ್ಮಾ ಚಕ್ರ ಎಸೆತ (ಪ್ರಥಮ), ಸಿಂಚನಾ ಎಂ ಎಸ್ ಚಕ್ರ ಎಸೆತ (ದ್ವಿತೀಯ), ಜಾವೆಲಿನ್ ಎಸೆತ ( ಪ್ರಥಮ), ದೀಕ್ಷಿತಾ 100ಮೀ ಹರ್ಡಲ್ಸ್ (ಪ್ರಥಮ), 400ಮೀ ಹರ್ಡಲ್ಸ್ (ಪ್ರಥಮ), ಪ್ರಿಯಾಂಕ ಉದ್ದ ಜಿಗಿತ (ಪ್ರಥಮ), ಪ್ರೀತಿ ಚಕ್ರ ಎಸೆತ (ತೃತೀಯ)


ನೂತನ ಕೂಟ ದಾಖಲೆ : 16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಆಕಾಶ್ 80 ಮೀ ಹರ್ಡಲ್ಸ್ನಲ್ಲಿ ಹಾಗೂ 23 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಚಕ್ರ ಎಸೆತದಲ್ಲಿ ನೂತನ ಕೂಟ ದಾಖಲೆಯನ್ನು ಮಾಡಿರುತ್ತಾರೆ.


ವೈಯಕ್ತಿಕ ಪ್ರಶಸ್ತಿ : 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಲೋಹಿತ್ ಗೌಡ ಹಾಗೂ 20 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಸುಶಾನ್ ಕ್ರೀಡಾಕೂಟದಲ್ಲಿ ಕೊಡ ಮಾಡುವ ವೈಯಕ್ತಿಕ ಪ್ರಶಸ್ತಿಯನ್ನು ಈ ಕ್ರೀಡಾಪಟುಗಳು ಪಡೆದುಕೊಂಡಿರುತ್ತಾರೆ.  


ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.


ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ  ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಿ ಸಮಾಜದ ಉನ್ನತ ಸ್ಥಾನಕ್ಕೆ ತರುವ ಉದ್ದೇಶ- ಸಾಧನಾ ಹಾಗೂ ಆಳ್ವಾಸ್ ಸಂಸ್ಥೆಯದ್ದಾಗಿದೆ- ಡಾ ಜ್ಯೋತಿ, ನಿರ್ದೇಶಕರು, ಸಾಧನಾ ಐಎಎಸ್ ಕೋಚಿಂಗ್ ಸೆಂಟರ್, ಬೆಂಗಳೂರು.


ಕ್ಟೋಬರ್‌ನ ಮೊದಲ ವಾರದಲ್ಲಿ ತರಗತಿಗಳು ಆರಂಭವಾಗಲಿದ್ದು, ಈಗಾಗಲೇ ನೋಂದಾಣಿ ಪ್ರಕ್ರಿಯೆ ಆರಂಭಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ: 9480105446, 7259006116, 9740668967, 9902488801


ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್, ಸಾಧನಾ ಐಎಎಸ್ ಕೋಚಿಂಗ್ ಸೆಂಟರ್‌ನ ನಿರ್ದೇಶಕಿ ಡಾ ಜ್ಯೋತಿ ಇದ್ದರು. 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top