ಶ್ರೀ ಸತ್ಯಾತ್ಮವಾಣಿ- 46: ಗೋವುಗಳನ್ನು, ಗೋಪಾಲಕರನ್ನು ರಕ್ಷಿಸುವ ಪರಮಾತ್ಮ

Upayuktha
0



ಶ್ರೀಕೃಷ್ಣ ಪರಮಾತ್ಮ ಕೇವಲ ತನ್ನ ಕೃಪಾ ದೃಷ್ಟಿಯಿಂದ  ಅಮೃತವನ್ನು ಸುರಿಸುತ್ತಾನೆ, ಅದರಿಂದ ರೋಗಗಳು ಕಾಮಕ್ರೋಧಾದಿ ದೋಷಗಳು ಇತರ ಎಲ್ಲ ಸಮಸ್ಯೆಗಳು ಕೂಡ ಪರಮಾತ್ಮನ ಕೃಪಾದೃಷ್ಟಿಯಿಂದ ಪರಿಹಾರವಾಗುತ್ತದೆ. ಅವನ ಕೃಪಾದೃಷ್ಟಿ ಎಷ್ಟೇ ಇದ್ದರೂ ಅದನ್ನು ನಮಗೆ ಎಲ್ಲವನ್ನೂ ತೋರಿಸಿ ಅವನ ಮಹಿಮೆಯನ್ನು ತಿಳಿಯಲು ಅನುಗ್ರಹ ಮಾಡಿದ್ದಾನೆ. ಧರ್ಮ ಮಾರ್ಗದಲ್ಲಿ ನಡೆಯುವಂತೆ ತೋರುವ ಕೃಪೆ ಬಹಳ ದೊಡ್ಡದು. ಕೃಪೆಯನ್ನು ತೋರುವ ಕೃಪೆ. ಭಗವಂತ ಗೋವುಗಳನ್ನು ಗೋಪಾಲಕರನ್ನು ಬದುಕಿಸುತ್ತಾನೆ ಎನ್ನುವದೇ ದೊಡ್ಡ ಸಂದೇಶ. ಯಾರನ್ನು ರಕ್ಷಣೆ ಮಾಡಬೇಕೆಂದು ಪರಮಾತ್ಮನಿಗೆ ಇಚ್ಛೆ ಇರುತ್ತದೆ ಅವರ ಬೆನ್ನ ಹಿಂದೆ ಇತ್ತು ಗೋಪಾಲಕನಾಗಿ ದನ ಕಾಯುವ ಕೋಲು ಹಿಡಿದು ಕಾಯುವಂತೆ ಕಾಯದೇ  ನಮಗೆ ಉತ್ತಮ ಬುದ್ಧಿಯನ್ನು ಕೊಟ್ಟು ಪ್ರಚೋದನೆ ಮಾಡಿ ರಕ್ಷಣೆ ಮಾಡುತ್ತಾನೆ. ಪರಮಾತ್ಮ ಹಿಂದೆ ಬಂದು ಅಲ್ಲ ನಮ್ಮ ದೇಹದ ಒಳಗೆ ಮನಸ್ಸಿನಲ್ಲಿ ಪ್ರವೇಶ ಮಾಡಿ ನಮ್ಮಲ್ಲೇ ಇದ್ದು ಪ್ರಚೋದನೆ ಮಾಡುತ್ತಾನೆ. ಸಾತ್ವಿಕ ಕೀರ್ತಿಯನ್ನು ಉಳಿಸಿ ಹೋಗುವ ಕಾರ್ಯಗಳನ್ನು ಮಾಡಿಸಿ ಯಶಸ್ಸು ಎಂಬ ಶರೀರ ಉಳಿಯುವಂತೆ ರಕ್ಷಣೆ ಮಾಡುತ್ತಾನೆ.


ಇಂತಹ ವಿಶೇಷವಾಗಿ ರಕ್ಷಣೆ ಮಾಡಲು ನಾವು ಏನು ಮಾಡಬೇಕು ಎಂದರೆ ನಾವು ವಿಶೇಷವಾಗಿ ಗೋವುಗಳಾಗಬೇಕು ಅಥವಾ ಗೋಪಾಲಕರಾಗಬೇಕು. ಆಕಳಿನ ಸ್ವಭಾವ ನಮ್ಮಲ್ಲಿ ಬರಬೇಕು. ತಾನು ಕಷ್ಟ ಶ್ರಮ ಪಟ್ಟು ಸಜ್ಜನರಿಗೆ ಹಾಲನ್ನು ಕೊಡುವಂತೆ, ಜ್ಞಾನವನ್ನು ಕೊಡುವವರು, ಪರೋಪಕಾರ ಮಾಡುವ ಸ್ವಭಾವ ಪಡೆದರೆ ಅವರು ಗೋವಿನಂತಹ ಸ್ವಭಾವದವರನ್ನು ರಕ್ಷಣೆ ಮಾಡುತ್ತೇನೆ ಎಂದು ಹೇಳುತ್ತಾನೆ.  ನೀನು ಗೋವು ಆಗದೇ ಹೋದರೂ ಗೋಪಾಲಕನಾದರೂ ಆಗು ಅಂದರೆ ಸಜ್ಜನರನ್ನು ಪೋಷಣೆ ಮಾಡುವ ಗೋಪಾಲಕನಾಗು ಎಂದು ಪರಮಾತ್ಮ ಹೇಳುತ್ತಾನೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top