ಶ್ರೀ ಕೃಷ್ಣ ಪರಮಾತ್ಮ ನಾನಾ ತರಹದ ಬಾಲಲೀಲೆಗಳನ್ನು ತೋರಿಸಿ ಆ ಬಾಲ ವೃದ್ಧರನ್ನು ಸಂತೋಷ ಪಡಿಸುತ್ತಾ ಭಗವತ್ ಭಕ್ತರಿಗೆ ಚಿಂತನೆ ಮಾಡಲು ವಸ್ತುವನ್ನು ಒದಗಿಸುತ್ತಾ ಇದ್ದಾನೆ. ಪರಮಾತ್ಮನ ಲೀಲೆಗಳು ಅದ್ಭುತವಾದ ವಿಷಯ. ಕಾವ್ಯ ಮಾಡುವವರಿಗೆ ಕಾವ್ಯಕ್ಕೆ ಉತ್ತಮ ವಿಷಯ. ಪರಮಾತ್ಮನ ಲೀಲೆಗಳು ಮಾರ್ಗದರ್ಶಕ ದರ್ಶಕ ಆ ರೀತಿಯಲ್ಲಿ ವಿಚಾರ ಮಾಡುವ ದೃಷ್ಟಿಯನ್ನು ನಾವು ಬೆಳಸಿಕೊಳ್ಳಬೇಕು, ಇದು ಇತಿಹಾಸ ನಡೆದ ಕಥೆಯಂಬುದನ್ನು ತಿಳಿಯಬೇಕು ಇದು ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ಎಂದು ತಿಳಿಯಬೇಕು ಹಿಂದೆ ಇಂದು ಮುಂದೆಯೂ ರಕ್ಷಣೆ ಮಾಡುತ್ತಾನೆ ಎಂಬ ಚಿಂತನೆ ಹರಿಕಥಾ ಶ್ರವಣ ಮಾಡುವಾಗ ಬರಬೇಕು. ಒಂದೊಂದು ಲೀಲೆಗಳನ್ನು ತಿಳಯುವ ಪ್ರಯತ್ನ ಮಾಡುತ್ತಿದ್ದೇವೆ. ಕೃಷ್ಣ ಕರುಗಳನ್ನು ಕಾಯಲು ಹೋಗುತ್ತಿದ್ದ ಬಲರಾಮದೇವರು ಜೊತೆಗೆ ಹೋಗುತ್ತಿದ್ದಾರೆ. ವಾಯುದೇವರು ಕರುವಿನ ರೂಪದಲ್ಲಿ ಗೋವತ್ಸ ರೂಪದಲ್ಲಿದಾರೆ. ಭಗವಂತ ಕರುಗಳನ್ನು ಯಾಕೆ ಬಹಳಷ್ಟು ಪ್ರೀತಿ ಮಾಢುತ್ತಿದ್ದರು ಏಕೆ ಎಂದರೆ ತನ್ನ ಮಗ ಕರುವಿನ ವೇಷದಲ್ಲಿ ಇದ್ದಾನೆ ಎಂದು ಕರುಗಳ ಮೇಲೆ ಪ್ರೀತಿಯೋ ಕರುಗಳೆಂದರೆ ಪರಮಾತ್ಮ ನಿಗೆ ಕರುಗಳೆಂದು ಪ್ರೀತಿ ಎಂದು ವಾಯು ದೇವರು ಗೋವತ್ಸ ರೂಪದಲ್ಲಿದ್ದಾ ರೆಯೇ ಎಂದು ಪ್ರಶ್ನೆ ಮಾಡಿದರೆ ವಾಯುದೇವರ ಮೇಲೆ ಪರಮಾತ್ಮನಿಗೆ ಬಹಳ ಪ್ರೀತಿ. ವಾಯು ದೇವರು ಕರುಗಳ ರೂಪದಲ್ಲಿದಾರೆ ಎಂದು ಗೋವತ್ಸಗಳ ಮೇಲೆ ಪ್ರೀತಿ ಎಂದು ತಿಳಿಯಬೇಕು.
ಕೃಷ್ಣ ಗೋಕುಲದಲ್ಲಿ ಗೋಪಾಲಕರ ರೂಪದಲ್ಲಿ ಇರುವ ಕಾರಣ ಅಲ್ಲಿ ಇರುವುದರಿಂದ ಗೋವತ್ಸಗಳನ್ನು ಕಾಯಲು ಆರಂಭ ಮಾಡಿದ. ಇದರಿಂದ ಕೃಷ್ಣ ಪರಮಾತ್ಮ ವರ್ಣಾಶ್ರಮ ಧರ್ಮವನ್ನು ಪಾಲಿಸಬೇಕೆಂದು ಸಣ್ಣ ಮಕ್ಕಳಿದ್ದಾಗಲೇ ಕಲಿಸಬೇಕೆಂದು ಪರಮಾತ್ಮ ತೋರಿಸುತ್ತಿದ್ದಾನೆ. ಸಣ್ಣ ವಯಸ್ಸಿನಿಂದಲೇ ವರ್ಣಾಶ್ರಮ ಧರ್ಮವನ್ನು ಕಲಿಸಬೇಕು ಎಂದು ಪರಮಾತ್ಮ ತೋರಿಸಿಕೊಟ್ಟಿದ್ದಾನೆ. ಬ್ರಾಹ್ಮಣನಿಗೆ ಮಂತ್ರ ಸ್ತೋತ್ರ ಪೂಜೆ ನಂತರ ಶಾಸ್ತ್ರಗಳನ್ನು ಕಲಿಸ ಬೇಕು. ಅದರಂತೆ ಕ್ಷತ್ರಿಯರಿಗೆ ಯುದ್ಧಕಲೆಯನ್ನು ಹೀಗೆ ಎಲ್ಲ ವರ್ಣಾಶ್ರಮದ ಧರ್ಮವನ್ನು ಪಾಲಿಸುವುದನ್ನು ಕಲಿಸಿದ್ದಾನೆ ದೊಡ್ಡದಾದ ಪರ್ವತದಂತಹ ಬಕ ಪಕ್ಷಿ ಸ್ಕಂದನ ವರ ಅವನ ಮೇಲೆ ಇರುವ ಪಕ್ಷಿ ಪರಮಾತ್ಮ ಸುಲಭವಾಗಿ ಅವನ ಬಳಿ ಹೋಗುತ್ತಾನೆ. ಈ ಪಕ್ಷಿಗಿಂತ ಹಲವು ಪಟ್ಟು ಶಕ್ತಿಯುತ ಪಕ್ಷಿಯಾದ ಗರುಡನನ್ನು ವಾಹನ ಮಾಡಿಕೊಂಡವನಿಗೆ ಇನ್ನು ಯಾವ ಪಕ್ಷಿಯನ್ನು ನೋಡಿ ಭಯ ಪಡುವನು? ಪರಮಾತ್ಮ ಬಕನ ಬಾಯಿಯೋಳಗೆ ಹೋಗಿದ್ದಾನೆ. ಪರಮಾತ್ಮ ಬೆಂಕಿಯಂತಾಗಿದ್ದಾನೆ. ಬಕ ಪಕ್ಷಿ ಬಾಯಿಯಲ್ಲಿ ಇಟ್ಟುಕೊಳ್ಳಲಾರದೆ ಉಗುಳಿದ್ದಾನೆ. ಅದರ ಎರಡು ಚೊಂಚನ್ನು ಮುರಿದು ಸಾಯಿಸಿದ್ದಾನೆ. ಪರಮಾತ್ಮನನ್ನೇ ತಿನ್ನುತ್ತೇನೆ ಎನ್ನುವ ದುಷ್ಟ ಬುದ್ಧಿ ಬಂದರೆ ಅವರನ್ನು ಸರ್ವನಾಶ ಮಾಡುತ್ತೇನೆ ಎಂದು ಪರಮಾತ್ಮ ತೋರಿಸುತ್ತಾನೆ. ಈ ರೀತಿಯ ಮಹಿಮೆಯನ್ನು ಬಕಾಸುರನ ವಧೆಯಿಂದ ತೋರಿಸುತ್ತಾನೆ. ಪರಮಾತ್ಮ ತಾನೇ ಅಗ್ನಿ ತಾನೇ ನೀರು ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಶ್ರೀಮದಾಚಾರ್ಯರು ಸುಮ್ಮನೆ ಹೇಳುವುದಿಲ್ಲ ವೇದಗಳಲ್ಲೂ ಅದೇ ಪ್ರತಿಪಾದ್ಯ ಮಾಡಿದ್ದಾನೆ ಎಂಬುದನ್ನು ತಿಳಿದು ಅವನ ಮಹಿಮೆಗಳನ್ನು ತಿಳಿದು ಪ್ರಾರ್ಥನೆ ಮಾಡಬೇಕು ಎಂದು ತಿಳಿಯಬೇಕು.
ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ