ಶ್ರೀ ಸತ್ಯಾತ್ಮವಾಣಿ- 39: ಜಗನ್ನಾಟಕ ಸೂತ್ರಧಾರಿ ಕೃಷ್ಣ

Upayuktha
0



ಶ್ರೀ ಕೃಷ್ಣ ಪರಮಾತ್ಮ ಮಹಿಮೆಯನ್ನು ತಿಳಿದು ಉಪಕಾರ ಸ್ಮರಿಸದೆ ಲೌಕಿಕ ಅವನ ಚಿಂತೆಯನ್ನು ಮಾಡುತ್ತಾ ಅವನನ್ನು ಮರೆತರೆ ಏನು ಆಗುತ್ತದೆ ಎಂದು ಸಣ್ಣ ಲೀಲೆಯನ್ನು ತೋರಿಸಿಕೊಟ್ಟಿದ್ದಾನೆ. ಸಾಮಾನ್ಯವಾಗಿ ನಾವು ಜಗತ್ತಿನಲ್ಲಿ  ನಡೆಯುವ ಸಂಗತಿಗಳನ್ನು ಜಗತ್ತಿನಲ್ಲಿ ನಡೆದ ಅನೇಕ  ಸಂಗತಿಗಳನ್ನು ನಾಟಕದ ಮೂಲಕ ನೋಡುತ್ತೇವೆ. ಪ್ರಾಚೀನವಾದ ಇತಿಹಾಸದ, ಘಟನೆಗಳ, ರಾಜರ, ಋಷಿಗಳ ಸಾಕ್ಷಾತ್‌ ಭಗವಂತನ ಕಥೆಗಳನ್ನು ರಾಮ ಕೃಷ್ಣ ಅವತಾರಗಳ ನಾಟಕದ ರೂಪದಲ್ಲಿ ನೋಡುತ್ತೇವೆ. ಸಾಮಾನ್ಯ ನಟರು ಚರಿತ್ರೆ ಕಣ್ಮುಂದೆ ಬರಲು ನಾಟಕ ಮಾಡಿ ತೋರಿಸುತ್ತಾರೆ. ಇಲ್ಲಿ ವಿಚಿತ್ರ ಅಂದರೆ ಸಾಮಾನ್ಯ ಜನರ ಜೀವನದಲ್ಲಿ ನಡೆಯುತ್ತಿರುವುದನ್ನು ದೇವರು ಸ್ವತಃ ತಾನು ನಾಟಕ ಮಾಡಿ ತೋರಿಸುತ್ತಾನೆ. ಭಗವಂತನ ದಯೆ ಮತ್ತು ಕಾರುಣ್ಯ ಏನೆಂದರೆ ಹೇಗೆ ಇದ್ದರೆ ಹೇಗೆ ಆಗುತ್ತೀರಿ ಪ್ರಾಪಂಚಿಕ ಸುಖವನ್ನು ಕಳೆದು ಕೊಂಡು ದೇವರಿಂದಲೂ ದೂರವಾಗುತ್ತೀರಿ. ಆದರೆ ಭಗವಂತನ ಪಾದವನ್ನು ಹಿಡಿದರೆ ಎಲ್ಲವೂ ದೊರೆಯುತ್ತದೆ ಎಂದು ಭಗವಂತ ತೋರಿಸುತ್ತಾನೆ. ಮೋಕ್ಷದ ಜೊತೆಗೆ ಸಕಲ ಸಂಪತ್ತನ್ನು ಕೋಡುತ್ತಾನೆ.



ಯಶೋದೆಯು ಕೃಷ್ಣ ಪರಮಾತ್ಮನನ್ನು ಹಿಡಿಯಲು ಓಡುತ್ತಿದ್ದಾಳೆ. ಆದರೆ ಪುಟ್ಟ ಹೆಜ್ಜೆ ಇಟ್ಟ ಕೃಷ್ಣನ ಹಿಡಿಯಲು ಆಗುತ್ತಿಲ್ಲ. ಭಗವಂತ ಹೇಗೆ ಇದ್ದಾನೆ ಎಂದರೆ ಪರಮಾತ್ಮ ಮಹಿಮೆಯನ್ನು ತೋರಿಸುತ್ತದೆ, ಕುಳಿತಲ್ಲಿಯೇ ದೂರ ಹೋಗುವ ಸಾಮರ್ಥ್ಯ ಇದೆ. ಮಲಗಿದಲ್ಲಿಯೇ ಇಡೀ ಜಗತ್ತನ್ನು ವ್ಯಾಪಿಸುವ ಸಾಮರ್ಥ್ಯ ಇದೆ, ಪುಟ್ಟ ಹೆಜ್ಜೆ ಇಡುವಾಗ ಕೈಗೆ ಸಿಗದ ವೇಗದಿಂದ ಓಡುವ ಸಾಮರ್ಥ್ಯ ಇದೆ. ಪರಮಾತ್ಮ ಇಂದು ಪ್ರಪಂಚದಲ್ಲಿ ನಾನಾ ರೀತಿಯ ಭಂಗಿಗಳಲ್ಲಿ ದರ್ಶನವನ್ನು ಕೊಡುತ್ತಾನೆ ಶ್ರೀರಂಗದಲ್ಲಿ, ಶ್ರೀರಂಗಪಟ್ಟಣದಲ್ಲಿ ರಂಗನಾಥನಾಗಿ ಮಲಗಿದ ಪ್ರತಿಮೆ, ಅನಂತ ಶಯನ ತಿರುವನಂತಪುರದಲ್ಲಿ ಕೂಡ ಮಲಗಿದ ಪ್ರತಿಮೆ.   ಮಲಗಿದ ರೂಪದಲ್ಲಿರುವ ದೇವರೆ ಭಕ್ತರ ಪ್ರಾರ್ಥನೆಗೆ ಅವರು ಕರೆದಲ್ಲಿಗೆ ಹೋಗಿ ಅವರು ಬೇಡಿದ ಇಷ್ಟಾರ್ಥ ಕೊಡುತ್ತೇನೆ ಎಂದು ಉಪನಿಷತ್ತಿನಲ್ಲಿ ಪ್ರತಿಪಾದ್ಯವಾದ ಮಹಿಮೆ ಇದೆ.  ಅದನ್ನು ತೋರಿಸಲು ಎಂಬಂತೆ ಮಲಗಿದ ಪ್ರತಿಮೆಗಳನ್ನ ನೋಡುತ್ತೇವೆ. 


ಕೆಲವು ಕಡೆ ಕುಳಿತ ಪ್ರತಿಮೆಗಳಿವೆ. ನರಸಿಂಹ ರೂಪದಲ್ಲಿ ಕುಳಿತ ಪ್ರತಿಮೆಗಳಿವೆ. ನಿಂತ ಭಗವಂತನೂ ಇದ್ದಾನೆ. ರಾಮ ವೆಂಕಟೇಶ ರೂಪಗಳಲ್ಲಿ ಇದ್ದಾನೆ. ಭಗವಂತ ಎಲ್ಲ ಭಂಗಿಯಲ್ಲಿ ವ್ಯಾಪ್ತನಾಗಿ ಸಲಹುತ್ತಾನೆ. ಯಶೋದೆಗೆ ಕೃಷ್ಣ ಪರಮಾತ್ಮ ತೋರಿದ ಅನುಗ್ರಹ ಮಾಡಿದ್ದಾನೆ. ಪರಮಾತ್ಮನ ಅಚಿಂತ್ಯ ಮಹಿಮೆಯನ್ನು ಚಿಂತನೆ ಮಾಡಬೇಕು, ಅನುಸಂಧಾನ ಪೂರ್ವಕವಾಗಿ ದೇವಸ್ಥಾನ ಮೊದಲಾದ ಕಡೆಗಳಲ್ಲಿ ಭಕ್ತರಿಗಾಗಿ ಸನ್ನಿಹಿತನಾಗಿದ್ದಾನೆ. ಮನೆಯಲ್ಲಿ ಓಡುವಾಗ ಯಶೋದೆಗೆ ಪರಮಾತ್ಮ ಸಿಕ್ಕಿಲ್ಲ, ಮೊದಲು ಕೋಪದಿಂದ ಹೆಸರಿಸುವ ದೃಷ್ಟಿಯಲ್ಲಿ ಬೆನ್ನು ಹತ್ತುತ್ತಾಳೆ, ಮನುಷ್ಯ ಕ್ರೋಧವನ್ನು ಮಾಡುವುದು ಹಾನಿಕರ ಎಂಧು ಶಾಸ್ತ್ರ ಹೇಳುತ್ತದೆ, ದೇಹ ಬಿಡುವುದರೊಳಗೆ ಕಾಮಕ್ರೋಧಗಳನ್ನು ಬಿಟ್ಟು ನಂತರ ಪ್ರಾಣವನ್ನು ಬಿಡಬೇಕು ಎಂದು ಪರಮಾತ್ಮ ಹೇಳುತ್ತಾನೆ. ಶಾಸ್ತ್ರಗಳನ್ನು ಓದಿ ಕಾಮಕ್ರೋಧಗಳನ್ನು ಗೆಲ್ಲಬೇಕು ಎಂದು ಪರಮಾತ್ಮ ಹೇಳುತ್ತಾನೆ. ತಪ್ಪು ಮಾಡಿದಾಗ ಶಿಕ್ಷೆ ಕೊಡುವಂತಹ ಕ್ರೋಧ ಇರದೇ ಇದ್ದರೆ ಅದರ ಫಲ ಏನು? ಮಕ್ಕಳು ತಪ್ಪು ಮಾಡಿದಾಗ  ತಂದೆ ತಾಯಿ, ಶಿಷ್ಯರು ತಪ್ಪು ಮಾಡಿದಾಗ ಗುರುಗಳು ಪ್ರಜೆಗಳು ತಪ್ಪು ಮಾಡಿದಾಗ ರಾಜರು ಕ್ರೋಧಕ್ಕೆ ಒಳಗಾಗುವುದು ಶಿಕ್ಷೆ ಮಾಡುವುದು ಧರ್ಮ ಕಾರ್ಯ ಅದನ್ನು ತ್ಯಜಿಸಿದರೆ ಅಧರ್ಮ.  


ಯಶೋದೆ ಕೃಷ್ಣನ ಮೇಲೆ ಕೋಪಗೊಳ್ಳುವಾಗ ಮನದಲ್ಲಿ ನಕ್ಕಿದ್ದಾಳೆ, ಮಕ್ಕಳು ಮನೆಯಲ್ಲಿ ಚೇಷ್ಟೆ ಮಾಡುವಾಗ ಬಯ್ಯುವುದು ಸಂತೋಷದಿಂದ ಇರಬೇಕು. ಮಕ್ಕಳು ಚುರುಕಾಗಿರುವುದು ಸಂತಸದ ವಿಷಯ.  ಮಕ್ಕಳಲ್ಲಿ ಹಾಳು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳದಂತೆ ಕಲಿಸಲು ಸಿಟ್ಟಿಗೆ ಬಂದಂತೆ ನಟಿಸಬೇಕು.  ನಿಜವಾದ ಸಿಟ್ಟು ಬಂದರೆ ದೇವರ ಮೇಲೆ ವಿಶ್ವಾಸ ಕಡಿಮೆ ಇದೆ ಎಂದು ಅರ್ಥ . ಹರಿಚಿತ್ತ ಸತ್ಯ ಎಂಬ ನಂಬಿಕೆ ಇರದೇ ಇದ್ದಾಗ ಸಿಟ್ಟು ಬಂದು ಸಂತಾಪ ಆಗುತ್ತದೆ. ಸಿಟ್ಟನ್ನು ತೋರಿಸಿ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಯಶೋದೆ ತಾಯಿಯಾಗಿ ಮಗುವನ್ನು ಹೇಗೆ ತಿದ್ದಬೇಕು ಎಂಬುದನ್ನು ತೋರಿಸುತ್ತಿದ್ದಾಳೆ. ಮಗನ ಮುಂದೆ ಕೋಪವನ್ನು ತೋರಿಸಿ ನಂತರ ಅವನು ಆಡಲು ಹೋದಾಗ ನಕ್ಕು ತಾಯಿಯರು ಹೇಗೆ ಇರಬೇಕೆಂದು ತೋರಿಸುತ್ತಿದ್ದಾಳೆ. 


ಭಗವಂತ ಒರಳನ್ನು ಕೇಳಮುಖ ಮಾಡಿ ಹಾಕಿ ಅದರ ಮೇಲೆ ನಿಂತು ಬೆಣ್ಣೆಯನ್ನು ತೆಗೆದು ಬೆಕ್ಕುಗಳಿಗೆ ಕೊಡುತ್ತಲಿದ್ದಾನೆ ಬೆಕ್ಕಿಗೆ ಕೊಟ್ಟು ತಾನು ತಿನ್ನುತ್ತಿರುತ್ತಾನೆ. ತಾನು ಕಳ್ಳತನ ಮಾಡುತ್ತಿದ್ದೇನೆ ಎಂದು ತಾಯಿ ಯಾವಾಗ ಬೇಕಾದರೂ ಬಂದು ಹೊಡೆಯಬಹುದು ಕಟ್ಟಬಹುದು ಬೆದರಿಸಬಹುದು. ಮಕ್ಕಳು ಹೇಗೆ ಹೆದರಬೇಕು ಎಂಬುದನ್ನು ತನ್ನ ಕಣ್ಣಂಚಿನಲ್ಲಿ ಹೆದರಿಕೆಯನ್ನು ತೋರಿಸುತ್ತಾನೆ. ಮಹಿಮೆ ತಿಳಿಯಲು ಯಶೋದೆಗೆ ತೋರಿಸಿ ನಂತರ ಅವಳ ಕೈಗೆ ಸಿಕ್ಕಿದ್ದಾನೆ. ಭಕ್ತರಿಗೆ ಭಗವಂತ ಸಿಗುತ್ತಾನೆಯೋ ಇಲ್ಲವೋ ಎಂಬ ಅನುಮಾನ ಬೇಡ ಅವನು ಭಕ್ತಿಗೆ ದೊರೆಯುತ್ತಾನೆ ಎಂದು ತೋರಿಸುತ್ತಾನೆ.  


ಪರಮಾತ್ಮನ ಮಹಿಮೆ ತಿಳಿಯುವುದಿಲ್ಲ ಎನ್ನುವುದು ತಪ್ಪು ಎಂದು ಭಾಗವತ ಹೇಳುತ್ತದೆ. ಪರಮಾತ್ಮನನ್ನು ತಿಳಿಯಲು ಸಾಧ್ಯವಿಲ್ಲ ಆದರೂ ತಿಳಿಯಬಹುದಾಗಿದೆ. ಬಹಳ ಕಾಲದವರೆಗೆ ಅವನ ಸೇವೆಯನ್ನು ಮಾಡಿ ಅವನ ಅನುಗ್ರಹವಾದರೆ ವಿಶೇಷವಾದ ಅನುಗ್ರಹದಿಂದ ಭಗವಂತನ ಮಹಿಮೆ ತಿಳಿಯುತ್ತದೆ. ಸ್ವಂತ ಸಾಮರ್ಥ್ಯದ ಮೇಲೆ ಯಾರೂ ಅವನನ್ನು ತಿಳಿಯಲು ಸಾಧ್ಯವಿಲ್ಲ ಆದರೆ ಅವನ ಅನುಗ್ರಹದಿಂದ ತಿಳಿಯಬಹುದೆಂದು ತಿಳಿಯುತ್ತದೆ. ಯಶೋಧೆಯ ಕೈಗೆ ಮೊದಲು ಸಿಗದೇ ನಂತರ ಸಿಕ್ಕು ನನ್ನನ್ನು ಭಕ್ತಿಯಿಂದ ಪಡೆಯಲೂ ಬಹುದು ಎಂದು ಭಾಗವತ ಮತ್ತು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲೂ ಹೇಳಿದ್ದಾರೆ. ವಾದಿರಾಜರು ಹೇಳುತ್ತಾರೆ. ಯಶೋದೆಯು ಅಷ್ಟು ಹೊತ್ತು ಭಗವಂತನ ಹಿಂದೆ ತಿರುಗಿದ ಕಾರಣ ಅವಳಿಗೆ ಪುಣ್ಯ ದೊರೆತು. ಭಗವಂತ ಅನುಗ್ರಹ ಮಾಡಿದ್ದಾನೆ. ಕೃಷ್ಣನ ಪಾದಗಳ ಮೇಲೆ ಹೂವುಗಳನ್ನು ಅರ್ಛನೆಮಾಡಿದ ಕೃಷ್ಣನ ಹಿಂದೆ ಸುತ್ತಿದ್ದಕ್ಕೆ ಯಾತ್ರೆಯ ಫಲ ದೊರೆತ ಕಾರಣ ಪರಮಾತ್ಮ ದೊರೆತಿದ್ದಾನೆ ಅನುಗ್ರಹ ಮಾಡಿದ್ದಾನೆ ಎಂದು ಹೇಳುತ್ತದೆ. ನಾನು ನಮ್ಮ ಯೋಗ್ಯತೆಗೆ ತಕ್ಕಂತೆ ಭಗವಂತನನ್ನು ಪೂಜಸಿ ಭಕ್ತಿ ಮಾಡಿದರೆ ನಮಗೂ ಕೂಡ ಅವನ ಅನುಗ್ರಹವಾಗುತ್ತದೆ ಎಂದು ಬಅಗವತ  ನಮಗೆ ಸಂದೇಶ ಕೊಡುತ್ತದೆ.


ಅಕ್ಷರ ರೂಪ: ಶ್ರೀಮತಿ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top