ವಿವೇಕಾನಂದ ಕಾಲೇಜಿನಲ್ಲಿ ಪ್ರಸಾರಾಂಗದ ಉದ್ಘಾಟನೆ ಹಾಗೂ ಪುನರ್ವಸು ಕೃತಿ ಬಿಡುಗಡೆ
ಪುತ್ತೂರು: ಜಗತ್ತಿಗೆ ಒಂದೊಳ್ಳೆಯ ಸಂದೇಶವನ್ನು ನೀಡಿದ ಸರ್ವ ಶ್ರೇಷ್ಠ ಧರ್ಮ ಅದು ಹಿಂದೂ ಧರ್ಮ. ಅಂತಹ ಧರ್ಮದಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪೂರ್ವ ಜನ್ಮದ ಪುಣ್ಯ. ರಾಮನ ಕಾಲದಲ್ಲಿಯೇ ರಾವಣನಂತಹ ರಾಕ್ಷಸ ಸಮಾಜ ಇತ್ತು, ಅದನ್ನು ರಾಮ ಹೇಗೆ ಎದುರಿಸಿದ ಎನ್ನುವುದನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.. ರಾಮನ ಗುಣಗಳು ನಮ್ಮೆಲ್ಲರಿಗೂ ಆದರ್ಶ. ಆದ್ದರಿಂದ ರಾಮ ನಮ್ಮ ಹೃದಯದಲ್ಲಿ ನೆಲೆಸಬೇಕು ಮತ್ತು ರಾಮನ ಚಿಂತನೆ ನಮ್ಮಲ್ಲಿ ಮೂಡಬೇಕು. ಇದರೊಂದಿಗೆ ನಮ್ಮ ಪರಂಪರೆ ಹಾಗೂ ನಮ್ಮ ಸಂಸ್ಕೃತಿಯನ್ನು ನಾವು ತಿಳಿದುಕೊಳ್ಳಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಇಲ್ಲಿ ವಿವೇಕಾನಂದ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಹಾಗೂ ಐಕ್ಯೂಎಸಿ ಇದರ ಸಹಯೋಗದಲ್ಲಿ ನಡೆದ ಪ್ರಸಾರಾಂಗದ ಉದ್ಘಾಟನೆ ಮತ್ತು ಪುನರ್ವಸು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಸಾರಾಂಗ 'ಸೌರಭ' ವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ವಿದ್ವಾನ್. ಉಮಾಕಾಂತ್ ಭಟ್ ಕೆರೆಕೈ ಮುಖ್ಯ ಅತಿಥಿಯಾಗಿ, ಪುನರ್ವಸು ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತಾನಾಡಿ, ಇಂದು ಬಿಡುಗಡೆಯಾz ಕೃತಿಯ ಹೆಸರು ಪುನರ್ವಸು ಭಾರತ ದೇಶದ ಪುನರುತ್ಥಾನದ ಹೆಸರು ಹಾಗೂ ವಿದ್ಯೆಯ ಪ್ರಸಾರಕ್ಕೆ ಸೃಷಿಯಾದ ಅಂಗವೇ ಈ ಸೌರಭ ಪ್ರಸಾರಾಂಗ. ಯಾವುದನ್ನು ಪ್ರಸಾರ ಮಾಡಬೇಕು ಹೇಗೆ ಪ್ರಸಾರ ಮಾಡಬೇಕು ಎಂಬುದನ್ನು ಮೊದಲು ನಾವು ತಿಳಿದುಕೊಳ್ಳಬೇಕು ಮತ್ತು ಇದರೊಂದಿಗೆ ಮನುಷ್ಯ ಜವಾಬ್ದಾರಿಯುತರಾಗಿ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಹಂಬಲಕ್ಕೆ ಹಿರಿಯರ ಬೆಂಬಲ ಇದ್ದರೆ ಅದು ರಾಷ್ಟ್ರಕ್ಕೆ ಕ್ಷೇಮ ಎಂದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪ್ರಸಾರಾಂಗದ ಉದ್ದೇಶದ ಕುರಿತು ರಚಿಸಿದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ವಿದ್ವಾನ್.ಉಮಾಕಾಂತ್ ಭಟ್ ಕೆರೆಕೈ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್,ಪರೀಕ್ಷಾಂಗ ಕುಲ ಸಚಿವ ಡಾ. ಶ್ರೀಧರ್ ಹೆಚ್.ಜಿ, ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ.ಶಿವಪ್ರಸಾದ್ ಕೆ. ಎಸ್, ಸ್ನಾತಕೋತ್ತರ ವಿಭಾಗದ ಡೀನ್ ಡಾ.ವಿಜಯ ಸರಸ್ವತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ವಂದಿಸಿ,ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ ನಿರ್ವಹಿಸಿದರು.
ಕಾರ‍್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ ವಾಲಿಮೋಕ್ಷ ಪ್ರಸಂಗ ನಡೆಯಿತು.ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ್ ಅಮ್ಮಣ್ಣಾಯ, ಚಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಮದ್ದಳೆಯಲ್ಲಿ ಪಿ.ಟಿ.ಜಯರಾಮ ಪದ್ಯಾಣ ಸಹಕರಿಸಿದರು. ಮುಮ್ಮೇಳದಲ್ಲಿ ವಿದ್ವಾನ್ ಉಮಾಕಾಂತ ಭಟ್ ಕೆರೆಕೈ, ಅಶೋಕ್ ಭಟ್ ಉಜಿರೆ, ನಾ ಕಾರಂತ ಪೆರಾಜೆ, ಹಾಗೂ ವಿದ್ವಾನ್ ಕೇಶವ ಭಟ್ ಕೇಕಣಾಜೆ ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ