ಬೆಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಶೌರ್ಯ ತರಬೇತಿ ಶಿಬಿರ

Upayuktha
0


ಬೆಂಗಳೂರು: ವಿಜಯನಗರದ  ವಿವೇಕ ಮಂದಿರದಲ್ಲಿ ಸೆ.1ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಲಾದ "ಶೌರ್ಯ ತರಬೇತಿ ಶಿಬಿರ" ಸಂಪನ್ನಗೊಂಡಿತು. ಇದರಲ್ಲಿ 60ಕ್ಕೂ ಅಧಿಕ ಹಿಂದೂ ಯುವತಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.


ಭಾರತದಾದ್ಯಂತ ಕೆಲವು ವರ್ಷಗಳಿಂದ ಸಮಿತಿಯು ಇಂತಹ ಹಲವಾರು ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ಸಾವಿರಾರು ಹಿಂದೂ ಯುವತಿಯರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಹೆಣ್ಣು ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಇವರಿಗೆ ರಕ್ಷಣೆಯೇ ಇಲ್ಲದಾಗಿದೆ. ಕೆಲಸದ ಸ್ಥಳದಲ್ಲಿಯೂ ಸಹ ರಕ್ಷಣೆ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ಹಾಡು ಹಗಲೇ ಕಾಲೇಜ್‌ಗೆ ಹೋಗಿರುವ ನೇಹಾ ಹಿರೇಮಠ್ ಎನ್ನುವ ಹುಡುಗಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು, ಕೊಲ್ಕತ್ತಾ ವೈದ್ಯೆಯ ಹತ್ಯೆ ಪ್ರಕರಣ, ಇಂತಹ  ನೂರಾರು ಯುವತಿಯರ ಬರ್ಬರವಾದ ಹತ್ಯೆಯ ಪ್ರಕರಣಗಳು ನಡೆದಿದೆ.


ಪ್ರತೀ ಬಾರಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗಲು ಪ್ರತಿಭಟನೆ ಮಾಡುವುದು, ಕ್ಯಾಂಡಲ್ ಹಚ್ಚುವುದರ ಬದಲು ಅಂತಹ ಸಮಯದಲ್ಲಿ ಹೆಣ್ಣುಮಕ್ಕಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತೆ ತರಬೇತಿ ನೀಡಿ ಶೌರ್ಯನಾರಿಯರಾಗಬೇಕು ಈ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿ ಈ ಶೌರ್ಯ ತರಬೇತಿ ಶಿಬಿರ ಆಯೋಜನೆ ಮಾಡಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top