ಒಂದು ಕಾಲದಲ್ಲಿ ವಿಶ್ವಗುರು ಎಂದು ಕರೆಯಲಾಗುತ್ತಿದ್ದ ಭಾರತದ ಮೂಲ ನಿವಾಸಿಗಳು ಇಂದು ಭಾರತದಲ್ಲಿ ಅಸುರಕ್ಷಿತರಾಗಿದ್ದಾರೆ. ಅನೇಕ ಸ್ಥಳಗಳಲ್ಲಿ ಹಿಂದೂಗಳ ಸಂಖ್ಯೆ ಕ್ರಮೇಣ ಕುಸಿಯುತ್ತಿದೆ ಮತ್ತು ಹಿಂದೂಗಳು ಅಲ್ಪಸಂಖ್ಯಾತರಾಗುವ ಮಾರ್ಗದಲ್ಲಿದ್ದಾರೆ. ಇಂದು, ಜಿಹಾದಿ ಭಯೋತ್ಪಾದನೆಯಿಂದ ಪಾರಾಗಲು ಹಿಂದೂಗಳು ಭಾರತದ ಅನೇಕ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಕಾಶ್ಮೀರಿ ಪಂಡಿತರು ಜಿಹಾದಿ ಭಯೋತ್ಪಾದನೆಯನ್ನು ಎದುರಿಸಬೇಕಾಯಿತು. ಕಾಶ್ಮೀರದಲ್ಲಿ1990 ರಲ್ಲಿ ಜಿಹಾದಿ ಭಯೋತ್ಪಾದಕರ ದೌರ್ಜನ್ಯದಿಂದ ನಾಲ್ಕುವರೆ ಲಕ್ಷ ಹಿಂದೂಗಳು ಸ್ಥಳಾಂತರಗೊಂಡರು. ಇಂದು, ಈ ಹಿಂದೂಗಳೆಲ್ಲರೂ ‘ಪನೂನ್ ಕಾಶ್ಮೀರ ಸಂಘಟನೆಯ ಮೂಲಕ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಪನೂನ್ ಕಾಶ್ಮೀರದ ಯುವ ವಿಭಾಗ ‘ಯೂತ್ ಫಾರ್ ಪನೂನ್ ಕಾಶ್ಮೀರದ ಮಹಾರಾಷ್ಟ್ರ ಮುಖ್ಯಸ್ಥರಾದ ಶ್ರೀ. ರಾಹುಲ್ ಕೌಲ್ ಮತ್ತು ‘ಪನೂನ್ ಕಾಶ್ಮೀರದ ಪುಣೆಯ ಸಮನ್ವಯಕರಾದ ಶ್ರೀ. ರೋಹಿತ ಭಟ್ ಇವರು ಕಾಶ್ಮೀರಿ ಹಿಂದೂಗಳ ವೇದನೆಯನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ.
1. ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಅತೀವ ದೌರ್ಜನ್ಯಗಳಾಗುವುದು ಮತ್ತು ವಿವಿಧ ಬೆದರಿಕೆಗಳಿಂದ ಮನೆಮಠ ತೊರೆದ ಹಿಂದೂಗಳು ಶ್ರೀ. ರೋಹಿತ್ ಭಟ್: ಕಾಶ್ಮೀರಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವಾಗ, ಇಡೀ ಭಾರತದಲ್ಲಿ ಯಾರಿಗೂ ಇದರ ಬಗ್ಗೆ ತಿಳಿದಿರಲಿಲ್ಲ. ಇಂದಿಗೂ ಅನೇಕ ಭಾರತೀಯರಿಗೆ ಕಾಶ್ಮೀರಿ ಹಿಂದೂಗಳ ಮೇಲೆ ನಡೆದಿದ್ದ ದೌರ್ಜನ್ಯದ ಬಗ್ಗೆ ತಿಳಿದಿಲ್ಲ. ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದಿಂದ ಅವರು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ನಮ್ಮ ಮೇಲೆ ಎಲ್ಲ ರೀತಿಯ ದೌರ್ಜನ್ಯಗಳಾದವು. ನಮ್ಮ ತಾಯಂದಿರು ಮತ್ತು ಸಹೋದರಿಯರ ಮಾನಭಂಗ ಮಾಡಿದರು. ನಮ್ಮ ಸಂಘಟನೆಯ ಅನೇಕ ನಾಯಕರನ್ನು ನಡುರಸ್ತೆಯಲ್ಲಿ ಹತ್ಯೆ ಮಾಡಲಾಯಿತು. ನಮ್ಮ ಮನೆಗಳಿಗೆ ಬೆಂಕಿ ಹಚ್ಚಲಾಯಿತು. “ನಮಗೆ ಕಾಶ್ಮೀರಿ ಹಿಂದೂಗಳ ಸ್ತ್ರೀಯರು ಮಾತ್ರ ಬೇಕು, ಪುರುಷರಲ್ಲ, ಎಂದು ಮಸೀದಿಯಿಂದ ರಾತ್ರಿ ಮಾತುಗಳು ಕೇಳಿ ಬರುತ್ತಿದ್ದವು. ಈ ಬೆದರಿಕೆಯೊಡ್ಡಲು ಸ್ಥಳೀಯ ದಿನಪತ್ರಿಕೆಗಳನ್ನೂ ಬಳಸಲಾಯಿತು. ಅದರಲ್ಲಿ ನಮ್ಮ ಗುರಿ ಕಾಶ್ಮೀರದ 12 ರಿಂದ 35 ವರ್ಷ ವಯಸ್ಸಿನ ಹಿಂದೂಗಳು. ನಾವು ಕಾಶ್ಮೀರವನ್ನು ‘ನಿಜಾಮ್-ಎ-ಮುಸ್ತಫಾ ಮಾಡಲು ಬಯಸುತ್ತೇವೆ. ಇಲ್ಲಿ ಕಾಫೀರರಿಗೆ ಯಾವುದೇ ಸ್ಥಾನವಿಲ್ಲ. ಇಲ್ಲಿ ಸ್ಥಳೀಯ ಸಾರಿಗೆ ವಾಹನಗಳಲ್ಲಿ ಧ್ವನಿಮುದ್ರಣ ಮಾಡಿ ‘ಈ ಕಾಫೀರರನ್ನು ಕೊಲ್ಲಿ ಎಂಬ ಭಾಷಣಗಳನ್ನು ಕೇಳಿಸಲಾಗುತ್ತಿತ್ತು. ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಯಾಯಿತು. ನಮಗೆ ನಮ್ಮ ಮನೆಗಳನ್ನು ಬಿಡಲು ಒತ್ತಾಯಿಸಲಾಯಿತು; ಏಕೆಂದರೆ ನಾವು ಹಿಂದು ಸ್ಥಾನ, ಹಿಂದೂ ಮತ್ತು ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದೇವೆ. ನಾವು ಈ ನಿಜಾಮ್-ಎ-ಮುಸ್ತಫಾದ ವಿರುದ್ಧ ಇದ್ದೆವು.
ದೂರದರ್ಶನ ಅಥವಾ ಸಾಮಾಜಿಕ ಮಾಧ್ಯಮಗಳು ಇಲ್ಲದ ಕಾರಣ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಯಾರೂ ಅರ್ಥಮಾಡಿಕೊಳ್ಳ ದಿರುವುದು ಮತ್ತು ಮತಾಂಧರು ಹಿಂದೂಗಳಿಗೆ ‘ಮತಾಂತರವಾಗಿ, ಓಡಿ ಹೋಗಿ ಅಥವಾ ಸಾಯಲು ಸಿದ್ಧರಾಗಿ ಎಂಬ ಮೂರು ಆಯ್ಕೆಗಳನ್ನು ನೀಡುವುದು : ನಾವು ‘ನಿಜಾಮ್-ಎ-ಮುಸ್ತಫಾ ತರಲು ಬಯಸಿದ್ದೇವೆ ಅದಕ್ಕಾಗಿ ಮೊದಲು ಹಿಂದೂಗಳನ್ನು ಇಲ್ಲಿಂದ ಹೊರದಬ್ಬಬೇಕು. ಅವರು ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ಅಕ್ಷರಶಃ ಮರ ಕಡಿದಂತೆ ಕತ್ತರಿಸುತ್ತಿದ್ದರು. ಇದು ‘ಛುಪಿಯಾನ್ ಜಿಲ್ಲೆಯ ಕಥೆ. ಒಬ್ಬ ತಾಯಿಗೆ ಇಬ್ಬರು ಮಕ್ಕಳಿದ್ದರು ಒಬ್ಬರಿಗೆ 18 ವರ್ಷ ಮತ್ತು ಇನ್ನೊಬ್ಬರಿಗೆ 21 ವರ್ಷ ! ಮತಾಂಧರು ಇಬ್ಬರು ಹುಡುಗರ ಹೊಟ್ಟೆಯನ್ನು ಕತ್ತರಿಸಿ, ಹೊಟ್ಟುಗಳನ್ನು ತುಂಬಿಸಿ ಆ ಪ್ರದೇಶದಲ್ಲಿ ಸುತ್ತಾಡಿಸಿದರು. ಈ ರೀತಿಯಲ್ಲಿ ನಮ್ಮ ಮೇಲೆ ದೌರ್ಜನ್ಯ ನಡೆಯಿತು. ಆ ಸಮಯದಲ್ಲಿ ದೂರದರ್ಶನ ಅಥವಾ ಸಾಮಾಜಿಕ ಮಾಧ್ಯಮಗಳಿರಲಿಲ್ಲ. ಆದ್ದರಿಂದ ನಮ್ಮ ಮೇಲಿನ ದೌರ್ಜನ್ಯದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಅಲ್ಲಿಂದ ನಾಲ್ಕೂವರೆ ಲಕ್ಷ ಜನರು ಅಲ್ಲಿಂದ ಏಕೆ ಹೊರಬಂದರು ? ಪ್ರತಿ ಹಳ್ಳಿ ಮತ್ತು ಪಟ್ಟಣಗಳಲ್ಲಿ ಇಂತಹ ದೌರ್ಜನ್ಯಗಳು ನಡೆಯುತ್ತಿದ್ದವು. ಮತಾಂಧರು ಮಸೀದಿಯಿಂದ ಕರೆ ನೀಡುವಾಗ ೩ ಪರ್ಯಾಯಗಳನ್ನು ನೀಡಿದರು, “ಒಂದೋ ನೀವು ಮತಾಂತರವಾಗಿ, ಓಡಿ ಹೋಗಿ ಅಥವಾ ಸಾಯಲು ಸಿದ್ಧರಾಗಿ ಎಂಬ ಮೂರು ಆಯ್ಕೆಗಳನ್ನು ನಮಗೆ ನೀಡಿದರು. (‘ಸೆಲ್ಯೂ, ‘ರೇಲ್ಯೂ ಅಥವಾ ‘ಗಲ್ಯೂ ಎಂದು ಹೇಳಿದರು)
2. ಕಾಶ್ಮೀರಿ ಭಯೋತ್ಪಾದಕರು ಹೊರಗಿನಿಂದ ಬಂದಿಲ್ಲ, ಅಲ್ಲಿನ ಬಹುಸಂಖ್ಯಾತರೇ ಜಿಹಾದ್ ಪ್ರಾರಂಭಿಸುವುದು
ಶ್ರೀ. ರಾಹುಲ್ ಕೌಲ್: ಇಸವಿ ೧೩೮೯ ರಿಂದ 1990 ರ ವರೆಗೆ ಕಾಶ್ಮೀರಿ ಹಿಂದೂಗಳು ಆರು ಬಾರಿ ಪಲಾಯನಗೈದಿದ್ದಾರೆ. 1990 ರ ಪಲಾಯನದ ಸಮಯದಲ್ಲಿ ನಾಲ್ಕೂವರೆ ಲಕ್ಷ ಜನರು ನಿರಾಶ್ರಿತರಾದರು ಮತ್ತು ಇದು ದೇಶಾದ್ಯಂತದ 7 ನೇ ವಲಸೆಯಾಗಿತ್ತು.1990 ರಲ್ಲಿ ನಮ್ಮ ನೆರೆಹೊರೆಯವರು ಇಲ್ಲಿ ಕಾಶ್ಮೀರಿಗಳ ಅಸ್ತಿತ್ವವನ್ನು ನಾವು ಬಯಸುವುದಿಲ್ಲ ಎಂದು ಹೇಳಲು ಪ್ರಾರಂಭಿಸಿದರು; ಏಕೆಂದರೆ ಕಾಶ್ಮೀರಿ ಹಿಂದೂಗಳು ೬ ಬಾರಿ ಪಲಾಯನ ಮಾಡಿ ಪುನಃ ಮರಳಿದ್ದಾರೆ ಎಂಬುದನ್ನು ಅವರು ಐತಿಹಾಸಿಕವಾಗಿ ಅರ್ಥಮಾಡಿಕೊಂಡಿದ್ದರು; ಏಕೆಂದರೆ ಕಾಶ್ಮೀರಿ ಹಿಂದೂಗಳ ಬೇರುಗಳು ಗಟ್ಟಿಯಾಗಿದ್ದವು. ಅವರ ಆಧ್ಯಾತ್ಮಿಕ ಬೇರುಗಳು ಸಹ ಬಲವಾಗಿದ್ದವು. ಕಾಶ್ಮೀರಿಗಳ ಪೂಜಾ ಸ್ಥಳಗಳು ಬಹಳ ಹಳೆಯದು ಮತ್ತು ಐತಿಹಾಸಿಕವಾಗಿವೆ. ಆದ್ದರಿಂದ ಈ ಜನರು ಅಷ್ಟು ಸುಲಭವಾಗಿ ಹೋಗುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಕಾಶ್ಮೀರದ ಜಿಹಾದ್‌ಅನ್ನು ಅಲ್ಲಿನ ಬಹುಸಂಖ್ಯಾತ ಸಮುದಾಯವು ಪ್ರಾರಂಭಿಸಿತು; ಏಕೆಂದರೆ ಅವರಲ್ಲಿ ಯಾರೂ ಅನಕ್ಷರಸ್ತರಾಗಿರಲಿಲ್ಲ. ಅವರಲ್ಲಿ ಎಲ್ಲ ಪ್ರಾಧ್ಯಾಪಕರು ಮತ್ತು ಆಧುನಿಕ ವೈದ್ಯರಿದ್ದರು. ಅವರ ಮೆರವಣಿಗೆ ರಾತ್ರಿಯಿಡೀ ಅಥವಾ ಇಡೀ ದಿನ ನಡೆಯುತ್ತಿತ್ತು. ಈ ಎಲ್ಲ ಪ್ರಾಧ್ಯಾಪಕರು ಮತ್ತು ಆಧುನಿಕ ವೈದ್ಯರು ಸ್ವಾತಂತ್ರ್ಯದ ನಂತರ ಪಾಕಿಸ್ತಾನದೊಂದಿಗಿನ ತಮ್ಮ ಸಂಬಂಧವನ್ನು ಅಥವಾ ಅವರ ಪೂಜಾ ಸ್ಥಳಗಳನ್ನು ಘೋಷಿಸಿದರು. ಅವರು ಕಾಶ್ಮೀರದ ಸ್ಥಳೀಯರಾಗಿದ್ದರು. ನಾನು ಹೇಳುವ ಉದ್ದೇಶವಂದರೆ, ಇಸವಿ ೧೩೮೯ ರಿಂದ 1990 ರವರೆಗೆ, ಕಾಶ್ಮೀರದಲ್ಲಿ ಈಗಾಗಲೇ 6 ಸಲ ಪಲಾಯನವಾಗಿತ್ತು; ಆದರೆ 1990 ರಲ್ಲಿ ಆದ ಪಲಾಯನದ ಬಗ್ಗೆಯೇ ಏಕೆ ಹೆಚ್ಚು ಚರ್ಚೆ ನಡೆಯಿತು? ಏಕೆಂದರೆ ‘ಪನೂನ್ ಕಾಶ್ಮೀರ 1990 ರಲ್ಲಿ ಜನಿಸಿತು. ನಾವು ಭಾರತ ಸರಕಾರಕ್ಕೆ ನಮ್ಮ ಕೆಲವು ಬೇಡಿಕೆಗಳನ್ನು ನೀಡಿದ್ದೆವು, ಅದರಲ್ಲಿ ‘ನೀವು ನಮ್ಮನ್ನು ಅಲ್ಲಿಗೆ (ಕಾಶ್ಮೀರಕ್ಕೆ) ವಾಪಸ್ ಕಳುಹಿಸಲಿಕ್ಕಿದ್ದರೆ ಅದಕ್ಕಾಗಿ ಒಂದು ರೂಪ (ನೀಲನಕ್ಷೆ) ಇರಬೇಕು ಎಂದು ನಾವು ಹೇಳಿದ್ದೆವು; ಏಕೆಂದರೆ ಅಲ್ಲಿ ಕಳೆದ 700 ವರ್ಷಗಳಿಂದ ಅವರು ಪಲಾಯನವಾಗುತ್ತಿದ್ದಾರೆ.
3. ಕಾಶ್ಮೀರದಿಂದ ಸ್ಥಳಾಂತರಗೊಂಡ ಹಿಂದೂಗಳು ಉದ್ಯೋಗ ಸಿಗುವ ಸ್ಥಳಗಳಿಗೆ ತೆರಳುವುದು
ಶ್ರೀ. ರೋಹಿತ್ ಭಟ್: ಕಾಶ್ಮೀರಿ ಹಿಂದೂಗಳು ೭ ಬಾರಿ ಪಲಾಯನವಾಗಿದ್ದಾರೆ; ಆದರೆ1990 ರ ಪಲಾಯನವನ್ನು ಅತಿದೊಡ್ಡ ಪಲಾಯನವೆಂದು ಪರಿಗಣಿಸಲಾಗಿದೆ. ಕಾಶ್ಮೀರಿ ಹಿಂದೂಗಳ ವಲಸೆಯ ಸಮಯದಲ್ಲಿ ನಮ್ಮ ಮೇಲೆ ಶಾರದಾ ದೇವಿಯ ಅಪಾರ ಕೃಪೆ ಇತ್ತು. ಏಕೆಂದರೆ ನಾವೆಲ್ಲರೂ ಕಲಿತಿದ್ದೇವೆ. ಆದ್ದರಿಂದ ನಮಗೆ ಭಾರತದ ಮೂಲೆಮೂಲೆಗೆ ಹೋಗಲು ಸಾಧ್ಯವಾಯಿತು. ಮೊದಲು ನನ್ನ ಕುಟುಂಬದ ಕಥೆಯನ್ನು ಹೇಳುತ್ತೇನೆ. ನಾವು ಮೊದಲು ಜಮ್ಮುವಿಗೆ ಹೋದೆವು. ಜಮ್ಮು ಮತ್ತು ಕಾಶ್ಮೀರ ಒಂದೇ ರಾಜ್ಯವಾಗಿದ್ದರಿಂದ, ನಾವು ಜಮ್ಮುವಿಗೆ ಹೋದರೆ ಕೆಲವರು ದೆಹಲಿಗೆ ಹೋದರು. ಕೆಲವರು ಪುಣೆಯಲ್ಲಿದ್ದರೆ, ನಮಗೆ ಕಾಶ್ಮೀರದಲ್ಲಿ 22ಕೋಣೆಗಳ ಮನೆ ಇತ್ತು. ಅಲ್ಲಿಂದ ಜಮ್ಮುವಿಗೆ ಬಂದ ನಂತರ ನಾನು ಡೇರೆಗಳಲ್ಲಿಯೇ ಇರಬೇಕಾಯಿತು. ನಾವೆಲ್ಲರೂ ನಮ್ಮ ಸ್ವಂತ ರಾಜ್ಯವಾದ ಜಮ್ಮುವಿನಲ್ಲಿ ನಿರಾಶ್ರಿತರಾಗಿ ವಾಸಿಸುತ್ತಿದ್ದೇವೆ.
4. ಕಾಶ್ಮೀರದ ನಿರಾಶ್ರಿತರಿಗೆ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯು ಸಹಾಯ ಮಾಡುವುದು
ಶ್ರೀ. ರೋಹಿತ್ ಭಟ್: ದೆಹಲಿ ನಮ್ಮ ರಾಜಧಾನಿ. ರಾಜಧಾನಿಗೆ ಸಂಬಂಧಿಸಿದಂತೆ, ನಮ್ಮನ್ನು ಅಲ್ಲಿ ಅಫಘಾನಿ ನಿರಾಶ್ರಿತರಂತೆ ಉತ್ತಮವಾಗಿ ನೋಡಿಕೊಳ್ಳುವುದು ಎಂದು ನಾವು ಭಾವಿಸಿದ್ದೆವು; ಏಕೆಂದರೆ ಟಿಬೆಟಿಯನ್ ನಿರಾಶ್ರಿತರನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿರುವಾಗ ಹಿಂದೂಗಳೊಂದಿಗೂ ಉತ್ತಮವಾಗಿ ವರ್ತಿಸುವರು ಎಂದು ತಿಳಿದಿದ್ದೆವು; ಆದರೆ ಅದು ಆಗಲಿಲ್ಲ. ಅಲ್ಲಿ ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಬದುಕಬೇಕಾಯಿತು. ಅಲ್ಲಿನ ಸರ್ಕಾರಿ ಶಾಲೆಗಳಲ್ಲಿ ಅನೇಕ ಶಿಕ್ಷಕರನ್ನು ಸೇವೆಯಲ್ಲಿ ಕಾಯಂಸ್ವರೂಪದಲ್ಲಿ ಉಳಿಸಿಕೊಳ್ಳಲಾಗಿಲ್ಲ. ಅವರ ಆರೋಗ್ಯ ಸೌಲಭ್ಯಗಳನ್ನೂ ನಿರ್ಲಕ್ಷಿಸಲಾಯಿತು. ನಾವು ಹಿಂದೂಗಳಾಗಿದ್ದರೂ ನಮ್ಮನ್ನು ಗಾಳಿಗೆ ತೂರಿದರು. ನಾವು ಈ ರಾಜಧಾನಿಗೆ ಏಕೆ ಬಂದಿದ್ದೇವೆ ? ಏಕೆಂದರೆ ಇದು ಹಿಂದೂಗಳ ದೇಶ. ಇಲ್ಲಿ ನಮ್ಮ ಸಹೋದರರು ಮತ್ತು ನಮ್ಮ ಸರಕಾರವಿದೆ; ಆದರೆ ಇಲ್ಲಿಯವರೆಗೆ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಮಾತ್ರ ನಮಗೆ ಮುಕ್ತವಾಗಿ ಸಹಾಯ ಮಾಡಿವೆ. ಇತರರು ತಮ್ಮ ಮನಸ್ಸನ್ನು ತೆರೆದಿಡಲಿಲ್ಲ. ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ