ಒಳ್ಳೆಯ ಕೇಳುಗರಾಗುವುದು ಕೂಡ ಒಂದು ಅದ್ಬುತ ಕಲೆ. ಏಕೆಂದರೆ ಅದಕ್ಕೆ ಉತ್ತಮ ತಾಳ್ಮೆ ಕೂಡ ಅತ್ಯಗತ್ಯ. ಒಳ್ಳೆಯ ಕೇಳುಗರಾಗುವುದು ಉತ್ತಮ ವ್ಯಕ್ತಿತ್ವದ ಉತ್ತಮ ಲಕ್ಷಣ. ಮನಶಾಸ್ತ್ರದ ಪ್ರಕಾರ ನಮ್ಮ ಮಾತನ್ನು ಕೇಳಿಸಿಕೊಳ್ಳುವರು ನಮಗೆ ಹೆಚ್ಚು ಪ್ರಿಯರಾಗುತ್ತಾರೆ. ಇಂಗ್ಲಿಷಿನಲ್ಲಿ ಒಂದು ಮಾತಿದೆ.
"A good listener is popular everywhere and after some time he knows something" ಇದು ಉತ್ತಮ ಕೇಳುವಿಕೆಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ದೇವರು ಬಹಳಷ್ಟನ್ನು ಕೇಳಿಸಿಕೊಂಡು ಕಡಿಮೆ ಮಾತನಾಡಬೇಕೆಂದೇ ಎರಡು ಕಿವಿ ಮತ್ತು ಒಂದು ಬಾಯಿಯನ್ನು ಕೊಟ್ಟಿದ್ದಾನೆ. ಆದರೆ ಒಂದು ಕಿವಿ ಮತ್ತು ಎರಡು ಬಾಯಿ ಇದ್ದರೆ ಎಂಥಾ ಆಭಾಸ ಆಗುತ್ತಿತ್ತು?
ಎಷ್ಟೋ ಸಾರಿ ಇನ್ನೊಬ್ಬರ ಮಾತನ್ನು ಕೇಳಿಸಿ ಕೊಳ್ಳುವುದರಿಂದ ಎಷ್ಟೋ ಅನಾಹುತಗಳಿಂದ ಪಾರಾಗುತ್ತೇವೆ. ಇದು ಹೇಗೆಂದರೆ ಜೋರಾಗಿ ಬರುತ್ತಿರುವ ವಾಹನ ನಮ್ಮ ಮೇಲೆ ಸವಾರಿ ಮಾಡುವ ಮೊದಲೇ ಪಾರಾದ ಹಾಗೆ.
ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವುದರಿಂದ ಎಷ್ಟೋ ಸಾರಿ ನಮ್ಮ ಬೆನ್ನಿನ ಹಿಂದೆ ನಡೆಯುವ ಸಂಚಿನಿಂದ ಪಾರಾಗಬಹುದು. ಗುರುಗಳ ಮಾತನ್ನು ಕೇಳಿಸಿಕೊಳ್ಳುವುದರಿಂದ ವಿದ್ಯೆಯನ್ನು ಗಳಿಸಬಹುದು. ತಂದೆ ತಾಯಿಯ ಮಾತನ್ನು ಕೇಳಿಸಿಕೊಳ್ಳುವುದರಿಂದ ಬುದ್ಧಿ ಕಲಿಯಬಹುದು. ಒಳ್ಳೆಯ ವಾಗ್ಮಿಗಳು ಹೇಳಿದ ಮಾತನ್ನು ಕೇಳಿಸಿ ಕೊಂಡರೆ ಉತ್ತಮ ವಿಚಾರಗಳನ್ನೂ ಕಲಿಯಬಹುದು.
ಏನಂತೀರಿ?
-ಗಾಯತ್ರಿ ಸುಂಕದ ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ