ಸಾಂದರ್ಭಿಕ ಚಿತ್ರ
ನಾನು ನಿನ್ನೆ ಸಂಜೆ ಸುಮಾರು ಆರು ಘಂಟೆಗೆ ಮಂಗಳೂರಿನ ಜ್ಯೋತಿಯಿಂದ ಕಾಸರಗೋಡಿಗೆ ಬಸ್ ಹತ್ತಿದೆ. ಬಸ್‌ನಲ್ಲಿ ಸ್ಟ್ಯಾಂಡಿಂಗ್ ಮಾತ್ರ ಅಲ್ಲ ಅಂಟಿಕೊಂಡು ನಿಂತ ಸಹ ಪ್ರಯಾಣಿಕರ ಜಂಗುಳಿ ಹೇಳಿ ತೀರದು. ಮಂಗಳೂರಿಂದ ಬಂದ್ಯೋಡು ತನಕ ಅದೇ ಕಥೆ.
ನನ್ನ ಜೊತೆ ಪಡೀಲಿನಲ್ಲಿ ಹೋಟೇಲ್ ಉದ್ಯೋಗಿಯಾಗಿರುವ ಬಾರಿಕ್ಕಾಡಿ ಸಮೀಪದ ಶೆಟ್ರು ಸಿಕ್ಕಿದರು. ಅವರು ನಿತ್ಯ ಇದೇ ದಾರಿಯ ಸಂಚಾರಿ. "ಈಗೀಗ ಈ ಬಸ್‌ಗಳಲ್ಲಿ ಪಿಕ್ ಪಾಕೆಟ್ ಸಾಮಾನ್ಯ. ನಿನ್ನೆ ದಿವಸ ನನ್ನದು ಎಗರಿಸಿದ್ದರು. ಆದರೆ ಅಕಸ್ಮಾತ್ ಬಸ್‌ನಲ್ಲಿ ಬಿದ್ದ ಕಾರಣ ಸಿಕ್ಕಿತ್ತು. ಆದರೆ ಬಸ್ ನೊಳಗೇ ಆ ಕಳ್ಳ ಇದ್ದರೂ ಹಿಡಿಯಲು ಸಾಧ್ಯವಾಗಲಿಲ್ಲ. ಅದೇ ಬಸ್ ನಲ್ಲಿ ಮತ್ತೊಬ್ಬರದ್ದು ಹೋಗಿ ಟಿಕೆಟ್‌ಗೆ ಅವರಲ್ಲಿ ದುಡ್ಡಿರಲಿಲ್ಲ. ಯಾರೂ ಕೇಳುವವರಿಲ್ಲ. ಹಿಂದಿನ ದಿನವೂ ಒಬ್ಬರ ದುಡ್ಡು ಎಗರಿಸಿ ಬಸ್‌ನಿಂದ ಇಳಿದು ಓಡುವುದನ್ನು ನೋಡಿದ್ದೇವೆ. ಯಾರಿಗೂ ಏನೂ ಮಾಡಲಾಗಲಿಲ್ಲ. ಆದ ಕಾರಣ ಮಂಗಳೂರು- ಕಾಸರಗೋಡು ಬಸ್‌ನಲ್ಲಿ ತುಂಬಾ ಜಾಗ್ರತೆಯಿಂದ ಇರಿ" ಅಂದ್ರು.
ಎಷ್ಟು ರಶ್ ಇತ್ತು ಅನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ನನ್ನ ಆಂಡ್ರಾಯ್ಡ್ ಫೋನ್ ಅಂಗಿ ಕಿಸೆಯಲ್ಲಿ ಇತ್ತು. ಮೇಲೆ ಬಿದ್ದ ಸಹಪ್ರಯಾಣಿಕರಿಂದಾಗಿ ಅಚಾನಕ್ ಆಗಿ ಎರಡು ಮೂರು ಮಂದಿಗೆ ಕಾಲ್ ಹೋಗಿತ್ತು. ಕುಂಬ್ಳೆ ಸಮೀಪ ತಲುಪುವಾಗ ಅವರ ಮರು ಸಂಪರ್ಕ ಮಾಡತೊಡಗಿದರು.
ಇಷ್ಟಕ್ಕೂ ಈ ಬಸ್ ನಲ್ಲಿ ಸುಮ್ಮನೆ ಜನಜಂಗುಳಿ ಮಾಡುವ ಪ್ರಯಾಣಿಕರು ಬೀರಿ, ತಲಪಾಡಿ, ಹೊಸಂಗಡಿಯಲ್ಲಿ ಇಳಿಯುವವರೇ ಜಾಸ್ತಿ. ಬೇಕಾದಷ್ಟೂ ಇತರ ಬಸ್‌ಗಳಿದ್ದರೂ ದೂರ ಪ್ರಯಾಣಿಕರ ಬಗ್ಗೆ ಇವರಿಗೆ ಸಂಕೋಚ ಇಲ್ಲ. ಪಿಕ್ ಪಾಕೆಟಿಗರಿಗೆ ಸೂಕ್ತ ಸನ್ನಿವೇಶ ನಿರ್ಮಾಣ ಮಾಡುವುದರಲ್ಲೇ ಆಸಕ್ತಿ.
-ಚಂದ್ರಶೇಖರ ಏತಡ್ಕ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ