ಹೊಸತನ ನೀಡಲೆಂದೇ ವಿನ್ಯಾಸಗೊಳಿಸಲಾಗಿರುವ ಮಹೀಂದ್ರಾ ವೀರೋ ವಿಭಾಗದಲ್ಲಿಯೇ ಅತ್ಯುತ್ತಮವಾದ ಮೈಲೇಜ್ ಒದಗಿಸುತ್ತಿದ್ದು, ಗ್ರಾಹಕರು ಅತಿ ಹೆಚ್ಚು ಉಳಿತಾಯ ಮಾಡುವಂತೆ ನೋಡಿಕೊಳ್ಳುತ್ತದೆ. ಹಲವು ವಿಧಗಳ ದೃಢವಾದ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಈ ಹೊಸ ವಾಹನವು ಅಸಾಧಾರಣ ಕಾರ್ಯಕ್ಷಮತೆ, ಉದ್ಯಮ ಶ್ರೇಷ್ಠ ಸುರಕ್ಷತಾ ಫೀಚರ್ ಗಳು, ಗ್ರಾಹಕ ರಕ್ಷಣೆ ಮತ್ತು ಪ್ರೀಮಿಯಂ ಕ್ಯಾಬಿನ್ ಅನುಭವ ಒದಗಿಸುವಂತೆ ರೂಪುಗೊಂಡಿದೆ ಎಂದು ಆಟೋಮೋಟಿವ್ ಟೆಕ್ನಾಲಜಿ ಮತ್ತು ಪ್ರಾಡಕ್ಟ್ ಡೆವಲಪ್‍ಮೆಂಟ್ ವಿಭಾಗದ ಅಧ್ಯಕ್ಷ ಆರ್.ವೇಲುಸಾಮಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಹೀಂದ್ರಾ ಹೊಸತಾಗಿ ತನ್ನ ಹೊಸ ಅರ್ಬನ್ ಪ್ರಾಸ್ಪರ್ ಪ್ಲಾಟ್‍ಫಾರ್ಮ್ (ಯುಪಿಪಿ) ಪರಿಚಯಿಸಿದ್ದು, ಇದು ಭಾರತದ ಮೊದಲ ಗ್ರೌಂಡ್- ಅಪ್ ಮಲ್ಟಿ- ಎನರ್ಜಿ ಮಾಡ್ಯುಲರ್ ಸಿವಿ ಪ್ಲಾಟ್‍ಫಾರ್ಮ್ ಆಗಿದೆ. ವಿಭಾಗದಲ್ಲಿಯೇ ಅತ್ಯುತ್ತಮವಾದ ಮಾಲೀಕಕತ್ವ ವೆಚ್ಚ ಮತ್ತು ನಿಬಂಧನೆಗಳನ್ನು ಮೀರಿದ ವಿಭಾಗ ಶ್ರೇಷ್ಠ ಸುರಕ್ಷತಾ ಫೀಚರ್ ಗಳನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿರುವ ಈ ವೇದಿಕೆಯು ಉದ್ಯಮದಲ್ಲಿಯೇ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ ಎಂದು ವಿವರಿಸಿದ್ದಾರೆ.
ಸಾಂಪ್ರದಾಯಿಕತೆಯನ್ನು ಮೀರಿ ಆಲೋಚಿಸುವ ಧೈರ್ಯವಿರುವ ಉದ್ಯಮಿಗಳಿಗೆ ಮಹೀಂದ್ರಾ ವೀರೋ ಒಂದು ಅತ್ಯುತ್ತಮ ಆಯ್ಕೆಯಾಗಿದೆ. "ಸೋಚ್ ಸೆ ಆಗೇ" (ಯೋಚನೆಗಿಂತ ಮೀರಿದ್ದು) ಎಂಬ ಭರವಸೆಯನ್ನು ಇದು ಸಾಕಾರಗೊಳಿಸುತ್ತಿದ್ದು, ಈ ವಾಹನವು ಸಾಂಪ್ರದಾಯಿಕ ನಿರೀಕ್ಷೆಗಳನ್ನು ಮೀರಿ ವಿನ್ಯಾಸಗೊಂಡಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ