ಲೇಖಾ ಲೋಕ-14: ಪ್ರಸಿದ್ಧ ಶಿಕ್ಷಕ-ಸಾಹಿತಿ ಗೌರೀಶ ಕಾಯ್ಕಿಣಿ

Upayuktha
0


ನ್ನಡ, ಕೊಂಕಣಿ, ಮರಾಠಿ, ಆಂಗ್ಲ ಭಾಷೆಯಲ್ಲಿ ನುರಿತವರಾಗಿದ್ದ ಗೌರೀಶ ಕಾಯ್ಕಿಣಿ ಅವರು ಪ್ರಸಿದ್ಧ ಸಾಹಿತಿಯಾಗಿ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ತಾ॥ 12-9-1912 ರಂದು ಜನಿಸಿದರು. ಇವರ ಕಾವ್ಯ ನಾಮ "ವೈಶ್ವಾನರ ಗೌರಿಶಂಕರ" ಎಂದು ತಿಳಿದುಬಂದಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಅನೇಕ ಶಿಷ್ಯರನ್ನು ಪಡೆದಿದ್ದರು. ಇವರು ಶಾಂತಾಬಾಯಿ ಅವರನ್ನು ವಿವಾಹವಾಗಿ, ಇವರ ಪುತ್ರ ಜಯಂತ್ ಕಾಯ್ಕಿಣಿ ಕನ್ನಡ ಸಾಹಿತ್ಯದಲ್ಲಿ ಮಹಾನ್ ಕವಿಯಾಗಿ, ಅತ್ಯುತ್ತಮ ಲೇಖಕರಾಗಿ ಗುರುತಿಸಿಕೊಂಡಿರುವ ಸಾಹಿತಿ.


ಗೌರೀಶ ಕಾಯ್ಕಿಣಿ ಅವರು ತಮ್ಮ ಪದವಿಯನ್ನು ಧಾರವಾಡದಲ್ಲಿ ಪಡೆದು 1937 ರಿಂದ 1976 ರವರೆಗೆ ಬಂಕಿಕೊಡ್ಲ ಆನಂದಾಶ್ರಮ ಪ್ರೌಢಶಾಲೆ ಮತ್ತು ಗೋಕರ್ಣದ ಭದ್ರಕಾಳಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಕಾಯ್ಕಿಣಿ ಅವರು ಕವನ, ಲೇಖನಗಳು, ಕಾದಂಬರಿಗಳನ್ನು  ಅಂಕಣಗಳನ್ನು ಬರೆದು ನಾಡಿನಲ್ಲಿ ಪ್ರಸಿಧ್ಧರಾಗಿದ್ದರು. ಹಲವಾರು ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಬರಹಗಾರರಾಗಿದ್ದುದು ವಿಶೇಷ.


ಸಂಪ್ರದಾಯ ಮತ್ತು ಆಧುನಿಕತೆಯ ಆಡುಭಾಷೆಯ ಇವರ ಲೇಖನಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದವು. ಇವರ ವಿಶೇಷ ಕನ್ನಡ ಭಾಷೆಯ ಶೈಲಿ ಆಕಷ೯ಣೀಯವಾಗಿತ್ತು! ಕಾಯ್ಕಿಣಿ ಮೊದಮೊದಲು ಮರಾಠಿ ಭಾಷೆಯಲ್ಲಿ ಬರವಣಿಗೆ ಪ್ರಾರಂಭಮಾಡಿದರು. ತದನಂತರ 1930ರಲ್ಲಿ ಕನ್ನಡದಲ್ಲಿ ಬರವಣಿಗೆ ಶುರು ಮಾಡಿದರು.


ಇವರ ಪ್ರಸಿದ್ಧ ಕೃತಿಗಳು ಜನಪ್ರಿಯವಾಗಿ ಅದರಲ್ಲೂ ನವಮಾನವತಾ ವಾದ, ನಾಸ್ತಿಕ ಮತ್ತು ದೇವರು, ಮನೋವಿಜ್ಞಾನದ ರೂಪುರೇಷೆಗಳು, ಸತ್ಯಾರ್ಥಿ, ನಾಡಿನಲ್ಲಿ ಓದುಗರಿಗೆ ಮೆಚ್ಚುಗೆಯಾದವು. ಗೋಕರ್ಣದಲ್ಲಿ ಇವರ ಮನೆಗೆ ಬಂದ ಅತಿಥಿಗಳಿಗೆ ಗೌರೀಶ ಕಾಯ್ಕಿಣಿ ಅವರು ತುಂಬು ಹೃದಯದಿಂದ  ಆದರ ಆತಿಥ್ಯ ಮಾಡಿ ಸತ್ಕರಿಸುತ್ತಿದ್ದರು. ಗೌರೀಶ ಕಾಯ್ಕಿಣಿ ಅವರಿಗೆ  ಪ್ರಶಸ್ತಿಗಳು ಅರಸಿಕೊಂಡು ಬಂದವು.

1973ರಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವದ ಸಂದರ್ಭದಲ್ಲಿ ನೀಡಿದ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಡಾ॥ಭಾ.ಫೋರಂ ಪ್ರಶಾಂತಿ, ಮಂಗಳೂರು ಸಂದೇಶ್ ಪ್ರಶಸ್ತಿ, ಕೊಂಕಣಿ ಸಾಹಿತ್ಯ ಪ್ರಶಸ್ತಿ, ನೀಡಿ ಸನ್ಮಾನಿಸಲಾಯಿತು.



ಇವರ ಕೊಂಕಣಿ ಕೃತಿ ಮೀನಾಕ್ಷಿ ಸಂಸ್ಥೆಯ ಹೆಸರಿನಿಂದ ಅನೇಕ ಕನ್ನಡ ಉದಯೋನ್ಮುಖ ಬರಹಗಾರರಿಗೆ ಪ್ರತಿ ವಷ೯ ಪ್ರಶಸ್ತಿಗಳನ್ನು ನಿರಂತರ ನೀಡಲಾಗುತ್ತದೆ. ಸುಮಾರು 62 ಕೃತಿಗಳನ್ನು, ಹಲವಾರು ಕವನ ಸಂಕಲನಗಳನ್ನು, ಕಾದಂಬರಿಗಳನ್ನು ಬರೆದು ನಾಡಿಗೆ ನೀಡಿ, ಪ್ರಸಿದ್ಧರಾದ ಆದರ್ಶ ಶಿಕ್ಷಕ. ಮರಾಠಿಯಲ್ಲೂ ಬರಹಗಳನ್ನು, ಕೃತಿರೂಪದಲ್ಲಿ ಬಿಡುಗಡೆ ಮಾಡಿದ ಲೇಖಕರು. ಕನ್ನಡ ನಾಡಿಗೆ ಪ್ರಸಿದ್ಧ ಕೃತಿಗಳನ್ನು ನೀಡಿ, ತಮ್ಮ 90ನೇ  ವಯಸ್ಸಿನಲ್ಲಿ ತಾ॥ 14-11-2002 ರಂದು ಗೋಕಣ೯ದಲ್ಲಿ ನಿಧನರಾದರು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top