ಬಳ್ಳಾರಿ: ಕಿಷ್ಕಿಂಧಾ ವಿಶ್ವವಿದ್ಯಾಲಯದಲ್ಲಿ ಅತ್ಯುತ್ಕೃಷ್ಟ ಮತ್ತು ವಿಶ್ವದರ್ಜೆಯ ಶಿಕ್ಷಣ ನೀಡಲಾಗುತ್ತದೆ ಎಂದು ವಿವಿಯ ಕುಲಾಧಿಪತಿ ಡಾ.ಯಶವಂತ್ ಭೂಪಾಲ್ ಅಭಿಪ್ರಾಯಪಟ್ಟರು. ಇಂದು ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಅತ್ಯುತ್ಕೃಷ್ಟ ಶಿಕ್ಷಣ ನೀಡಿ ದೇಶದ ಪ್ರಗತಿಗೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಿವೆ ಎಂದು ತಿಳಿಸಿದರು.
ವಿ.ವಿ.ಯ ನೂತನ ಕಟ್ಟಡವು ಬಳ್ಳಾರಿಯಿಂದ 28 ಕಿ.ಮೀ. ದೂರದಲ್ಲಿ ಸುಂದರ ಮತ್ತು ಸ್ವಚ್ಛ ಪರಿಸರದಲ್ಲಿ ನಿರ್ಮಾಣಗೊಳ್ಳುತ್ತಿದೆ, ನಮ್ಮ ವಿ.ವಿ.ಯಲ್ಲಿ ಅತ್ಯಾಧುನಿಕ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ ಎಂದು ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್‌ನ ಅಧ್ಯಕ್ಷ ಎಸ್.ಜೆ.ವಿ. ಮಹಿಪಾಲ್ ತಿಳಿಸಿದರು. ಕಿಷ್ಕಿಂದ ವಿ.ವಿ.ಯಲ್ಲಿ ವಿಭಿನ್ನ ಮತ್ತು ವಿನೂತನ ಶಿಕ್ಷಣ ನೀಡಲಾಗುವುದು. ಇಲ್ಲಿಯ ಪ್ರತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಶಿಕ್ಷಕರಿದ್ದು, ಅವರ ಮುಂದಿನ ಭವಿಷ್ಯದ ಕುರಿತು ಸಲಹೆ ನೀಡಲಿದ್ದಾರೆ ಎಂದು ಪ್ರೊ. ಟಿ.ಎನ್. ನಾಗಭೂಷಣ ವಿ.ವಿ.ಯ ಕುಲಪತಿಗಳು, ಅಮೆರಿಕಾದ ಕ್ಯಾಲಿಫೋರ್ನಿಯದಿಂದ ಆನ್‌ಲೈನ್ ಮುಖಾಂತರ ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸಿದರು.
ದಾಖಲಾತಿ ಪಡೆದ ನೂತನ ವಿದ್ಯಾರ್ಥಿಗಳಿಗೆ ಡಾ.ಯು. ಈರಣ್ಣ ಸಹಕುಲಪತಿಗಳು ಮತ್ತು ಕುಲಸಚಿವರು ಶುಭಾಶಯ ತಿಳಿಸಿದರು. ಕಿಷ್ಕಿಂದ ವಿ.ವಿ.ಯು ಯು.ಜಿ.ಸಿ.ಯ ಮಾನ್ಯತೆ ಪಡೆದಿದ್ದು, ರಾಜ್ಯ ಸರಕಾರದ ಕಾಯ್ದೆಯ ಅನ್ವಯ ಸ್ಥಾಪಿಸಲ್ಪಟ್ಟಿದೆ ಎಂದು ವಿ.ವಿ.ಯ ಸಹಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಅಧ್ಯಕ್ಷೀಯ ಭಾಷಣದಲ್ಲಿ ಮಾಹಿತಿ ಹಂಚಿಕೊಂಡರು. ವಿದ್ಯಾರ್ಥಿನಿಯರಾದ ರಕ್ಷಿತಾ ಮತ್ತು ಶರಣ್ಯ ಪ್ರಾರ್ಥನೆ ಸಲ್ಲಿಸಿದರು. ಪ್ರೊ. ವಿ.ಸಿ.ಪಾಟಿಲ್ ಡೀನ್ ಇಂಜಿನೀಯರಿಂಗ್ ಮತ್ತು ತಂತ್ರಜ್ಞಾನ ಸ್ವಾಗತಿಸಿ, ವಿಶ್ವವಿದ್ಯಾಲಯದ ಕುರಿತು ಕಿರುನೋಟ ಚೆಲ್ಲಿದರು.
ಪ್ರೊ.ಎಸ್. ಮಂಜುನಾಥ, ಡೀನ್ ಸಂಶೋಧನೆ ಮತ್ತು ನಾವಿನ್ಯ ವಂದನೆ ಸಲ್ಲಿಸಿದರು. ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ನ ಟ್ರಸಿಗಳಾದ ಅಶೋಕ್ ಭೂಪಾಲ್, ಅಮರ್ ರಾಜ್ ಭೂಪಾಲ್, ವಿ.ವಿ. ವಿತ್ತಾಧಿಕಾರಿಗಳಾದ ನಮ್ರತಾ ಯಾವಗಲ್, ವಿ.ವಿ.ಯ ಡೀನ್‌ಗಳಾದ ಪ್ರೊ. ಕೆ.ಎಸ್.ಆರ್. ಶ್ರೀಧರ್, ವಿವಿಧ ವಿಭಾಗಗಳ ಮುಖ್ಯಸ್ಥರಗಳು ಮತ್ತು ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಪಾಲಕ ಪೋಷಕರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ