ಕಾರಡ್ಕ ಶಾಲಾ ವಿದ್ಯಾರ್ಥಿಗಳ ಯಕ್ಷಚಿಣ್ಣರು ತಂಡದಿಂದ ತಾಳಮದ್ದಳೆ

Upayuktha
0


ಬದಿಯಡ್ಕ: ಮುಳ್ಳೇರಿಯದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಜಿವಿಎಚ್‌ಎಸ್‌ಎಸ್ ಕಾರಡ್ಕ ಶಾಲೆಯ ಮಕ್ಕಳ 'ಯಕ್ಷಚಿಣ್ಣರು' ತಾಳಮದ್ದಳೆ ನಡೆಯಿತು.


ದಿ| ರಾಮಚಂದ್ರ ಕಾಸರಗೋಡು ಇವರ ಸ್ಮರಣಾರ್ಥವಾಗಿ ನಡೆದ ತಾಳಮದ್ದಳೆಯಲ್ಲಿ ಡಾ. ಚಂದ್ರಶೇಖರ ದಾಮ್ಲೆ ವಿರಚಿತ ಏಕಲವ್ಯ ಪ್ರಸಂಗವನ್ನು ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ನಿರ್ದೇಶನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಸಮರ್ಥವಾಗಿ ನಡೆಸಿಕೊಟ್ಟರು.


ಹಿಮ್ಮೇಳದಲ್ಲಿ ಭಾಗವತರಾಗಿ ಕು| ಅನರ್ಘ್ಯ ತೆಕ್ಕೇಕೆರೆ ಸುಶ್ರಾವ್ಯ ಕಂಠಸಿರಿ ಮೆರೆದರು. ವೇಣುಗೋಪಾಲ ಬರೆಕೆರೆ ಚೆಂಡೆಯಲ್ಲಿ ಹಾಗೂ ಕು| ವಂದನಾ ಮಾಲೆಂಕಿ ಮದ್ದಳೆಯಲ್ಲಿ ಸಹಕರಿಸಿದರು.


ಪಾತ್ರವರ್ಗದಲ್ಲಿ ದ್ರೋಣನಾಗಿ ಭೂಮಿಕ, ದ್ರುಪದ ಹಾಗೂ ಎರಡನೇ ದ್ರೋಣನಾಗಿ ಧನ್ಯಶ್ರೀ, ಶಬರನಾಗಿ ಸಚಿನ್, ಏಕಲವ್ಯನಾಗಿ ದೇವಿಕಾ ಶಬರಿ ಹಾಗೂ ಧರ್ಮರಾಯನಾಗಿ ಗ್ರೀಷ್ಮ, ಅಶ್ವತ್ಥಾಮನಾಗಿ ವೀಕ್ಷಿತ, ಕೌರವನಾಗಿ ಸಹನ, ಭೀಮನಾಗಿ ಯುಕ್ತಿ, ಅರ್ಜುನನಾಗಿ ಮೋನಿಷ, ಬೇಡ  ಹಾಗೂ ದೂತನಾಗಿ ಕೀರ್ತೇಶ್ ಮಿಂಚಿದರು. ಕಾರಡ್ಕ ಶಾಲಾ ಮಕ್ಕಳ ತಂಡದ ಈ ಪ್ರಥಮ ಪ್ರಯೋಗವು ಜನಮೆಚ್ಚುಗೆ ಗಳಿಸಿ ಯಶಸ್ವಿಯಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top