ಗೋವಿಂದ ದಾಸ ಕಾಲೇಜು: ಹಿಂದಿ ದಿವಸ್ ಆಚರಣೆ

Upayuktha
0


ಸುರತ್ಕಲ್: ಹಿಂದಿ ಅತ್ಯಂತ ಸಮೃದ್ಧ ಭಾಷೆಯಾಗಿದ್ದು ಇದನ್ನು ಇನ್ನೂ ಸಮೃದ್ಧವಾಗಿ ಬೆಳೆಯುವಂತೆ ಯುವಜನರು ಪ್ರಯತ್ನಿಸಬೇಕು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಎನ್‌ಐಟಿಕೆ ಅಧ್ಯಾಪಕಿ ಡಾ. ಸುಜಾತಾ ಜುನ್ನು ನುಡಿದರು.


ಅವರು ಹಿಂದೂ ವಿದ್ಯಾದಾಯಿನಿ ಸಂಘದ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಹಿಂದಿ ವಿಭಾಗವು ಆಚರಿಸಿದ ರಾಷ್ಟ್ರೀಯ ಹಿಂದಿ ದಿವಸ್ ಉದ್ಘಾಟಿಸಿ ಮಾತನಾಡಿದರು.


ಎಲ್ಲಾ ಸರಕಾರಿ ಕಚೇರಿಗಳಲ್ಲಿ, ಬ್ಯಾಂಕ್ ಗಳಲ್ಲಿ ಹಿಂದಿ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯವಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ನುಡಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.


ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಪ್ರೊ. ನೀಲಪ್ಪ ವಿ, ಐಕ್ಯೂಎಸಿ ಸಂಯೋಜಕ ಪ್ರೊ. ಹರೀಶ್ ಆಚಾರ್ಯ ಪಿ ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಜ್ಯೋತಿ ಎಸ್ ಕಾಮತ್ ಸ್ವಾಗತಿಸಿ ಹಿಂದಿ ಪ್ರಾಧ್ಯಾಪಕಿ ರಮಿತ ವಂದಿಸಿದರು. ಜುವೈರಿಯಾ ನಾಸಿರಾ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top