ಕೆನರಾ ಕಾಲೇಜಿನಲ್ಲಿ ಹಿಂದಿ ದಿವಸ ಆಚರಣೆ

Upayuktha
0

ಮಂಗಳೂರು: ಕೆನರಾ ಕಾಲೇಜಿನಲ್ಲಿ ಹಿಂದಿ ದಿವಸ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತ ಆಗ್ನೆಸ್ ಪದವಿ ಪೂರ್ವ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಪಿ. ವಿ ಶೋಭಾ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಿಂದಿ ಭಾಷೆ ಹಾಗೂ ಸಾಹಿತ್ಯದ ಮಹತ್ವವನ್ನು ತಿಳಿಸಿ, ವ್ಯಾಕರಣ ದೋಷವಿಲ್ಲದೆ ಭಾಷೆಯನ್ನು ಕಲಿಯುವುದು ಮುಖ್ಯವೆಂದು ನುಡಿದರು.


ಅವರು ರಷ್ಯಾದಂತಹ ದೇಶವು ತ್ರಿಭಾಷಾ ಸೂತ್ರವನ್ನು ಅನುಸರಿಸಿ ಅಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಹಿಂದಿ ಭಾಷೆಯನ್ನು ಒಂದು ಭಾಷೆಯನ್ನಾಗಿ ಕಲಿಸುತ್ತಿದ್ದಾರೆ. ಆದ್ದರಿಂದ ಹಿಂದಿ ಭಾಷೆಗೆ ಮಹತ್ತರವಾದ ಸ್ಥಾನ ಮಾನವಿದೆ. ಅದನ್ನು ಸರಿಯಾದ ರೀತಿಯಲ್ಲಿ ಕಲಿತು ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರೇಮಲತಾ ವಿ. ಅವರು ಹಿಂದಿ ಭಾಷೆಯನ್ನು ಕೇವಲ ಅಂಕಗಳಿಸುವುದಕೋಸ್ಕರ ಕಲಿಯದೆ ಅದನ್ನು ವಿದ್ಯಾಭ್ಯಾಸದ ನಂತರ ವ್ಯವಹಾರದಲ್ಲಿ ಅಳವಡಿಸಿ, ಉಳಿಸಿ ಗೌರವಿಸುವ ಅಗತ್ಯವಿದೆ ಎಂದರು.

ವಿದ್ಯಾರ್ಥಿಗಳಾದ ನಿತೇಶ್ ಅತಿಥಿಗಳನ್ನು ಪರಿಚಯಿಸಿ ಕುಮಾರಿ ಕೆ. ಅಮೃತ ಕಾಮತ್ ಸ್ವಾಗತಿಸಿದರು.


ಶ್ವೇತಾ ನಾಯಕ್ ಮತ್ತು ಬಳಗ ಪ್ರಾರ್ಥಸಿದರು. ಕುಮಾರಿ ಸಾನಿಯಾ ಅವರು ವಂದಿಸಿ, ಕುಮಾರಿ ಮನಸ್ವಿ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. 


ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಕಲ್ಪನಾ ಜೆ. ಪ್ರಭು, ವಿಭಾಗದ ಸಹ ಪ್ರಾಧ್ಯಾಪಕಿಯರಾದ ಶ್ರೀಮತಿ ಸುಜಾತ ಜಿ. ನಾಯಕ್ ಹಾಗೂ ಶ್ರೀಮತಿ ನಮಿತಾ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top