ಬಾಯಿ ಆರೋಗ್ಯ ನಿರ್ಲಕ್ಷಿಸಬೇಡಿ: ಡಾ. ಚೂಂತಾರು

Upayuktha
0


ಮಂಗಳೂರು: ಬಾಯಿ ನಮ್ಮ ದೇಹದ ಆರೋಗ್ಯದ ಹೆಬ್ಬಾಗಿಲು. ನಾವು ತಿನ್ನುವ ಆಹಾರ ಬಾಯಿಯ ಮುಖಾಂತರವೇ ಹೊಟ್ಟೆಗೆ ಹೋಗುತ್ತದೆ. ನಾವು ತಿನ್ನುವ ಆಹಾರ ಸರಿಯಾಗಿ ಜಗಿಯಲು, ಪಚನವಾಗಲು ಮತ್ತು ಜೀರ್ಣವಾಗಲು ಆರೋಗ್ಯವಂತ ಬಾಯಿ ಮತ್ತು ಸದೃಢವಾದ ಹಲ್ಲುಗಳು  ಅತೀ ಅಗತ್ಯ. ಹಾಲು ಹಲ್ಲುಗಳು ಕೂಡಾ ಶಾಶ್ವತ ಹಲ್ಲಿನಷ್ಟೇ ಪ್ರಾಮುಖ್ಯವಾಗಿರುತ್ತದೆ. ಈ ಕಾರಣದಿಂದ ಬಾಯಿ ಆರೋಗ್ಯ ಯಾವತ್ತೂ ನಿರ್ಲಕ್ಷಿಸಲೇ ಬಾರದು. ದಿನಕ್ಕೆರಡು ಬಾರಿ ಹಲ್ಲುಜ್ಜಿಕೊಂಡು ನಿರಂತರ ದಂತ ವೈದ್ಯರ ಸಂದರ್ಶನ ಮಾಡಿಕೊಂಡು ಹಲ್ಲಿನ ಆರೋಗ್ಯ ಕಾಪಾಡಿಕೊಂಡಲ್ಲಿ ನೂರು ವರ್ಷ ಸುಖವಾಗಿ ಬಾಳಬಹುದು ಎಂದು ಖ್ಯಾತ ದಂತ ವೈದ್ಯ, ಸಾಹಿತಿ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ) ಮಂಗಳೂರು ಇದರ  ಕಾರ್ಯದರ್ಶಿ ಡಾ. ಮುರಲೀಮೋಹನ್ ಚೂಂತಾರು ಅವರು ಅಭಿಪ್ರಾಯಪಟ್ಟರು.


ನಗರದ ಕಾಪಿಕಾಡ್‍ನಲ್ಲಿರುವ ದ.ಕ. ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ದಂತ ಆರೋಗ್ಯ ಮಾಹಿತಿ ಶಿಬಿರವನ್ನು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಇದರ ವತಿಯಿಂದ ಇಂದು (ಸೆ.23) ನಡೆಸಿಕೊಡಲಾಯಿತು. ಸುಮಾರು 40 ಮಕ್ಕಳಿಗೆ ಉಚಿತವಾಗಿ ದಂತ ಆರೋಗ್ಯ  ಮಾಹಿತಿ ಕರಪತ್ರ, ಟೂತ್ ಬ್ರಷ್ ಮತ್ತು ಟೂತ್ ಪೇಸ್ಟ್ ಹಂಚಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಮುರಲೀ ಮೋಹನ ಚೂಂತಾರು ದಂತ ಆರೋಗ್ಯ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲೀನಾ ಐರಿನ್ ಗೋವಿಯಸ್, ಶಿಕ್ಷಕಿಯರಾದ ಹರ್ಷ ಬಾಳಿಗ, ಸಿಸಿಲಿಯ ಅಪೋಲಿನ್ ಲೋಬೋ ಮತ್ತು ಶೀಲಾವತಿ ಎಸ್. ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top