ಬೀದರ್ ಜಿಲ್ಲೆಯ ಪವಾಡ ಪುರುಷ ಶ್ರೀ ಶಂಕರ ದೇವ ಮಹಿಮೆ

Upayuktha
0

            

ರಣ ಕುಲ ತಿಲಕ ಶ್ರೀ ಶಂಕರ ದಾಸಿಮಯ್ಯನವರು ಮಾನವ ಕುಲವನ್ನು ಉದ್ಧರಿಸಲು ಬಂದ ಮಹಾಮಹಿಮರು. ಬಣಗಾರ ಸಮಾಜದ ಅಮೃತಸಿದ್ಧಿ ಪುರುಷರು ಇವರು. ಭಕ್ತ ಕುಲಕೋಟಿಯನ್ನು ಉದ್ದರಿಸಿದ, ಕಾಲ ಕಾಲಕ್ಕೆ ಮಳೆ ಬೆಳೆ ಬರಲು ಇಂಥ ಸಂತರು ಕಾರಣೀಕತ೯ರು ಎನ್ನುವುದು ಸುಳ್ಳಲ್ಲ. ಇವರು ನಡೆದಾಡಿದ ಈ ಪವಿತ್ರ ಭೂಮಿ ಎಲ್ಲರ ಪರುಷಮಣಿ, ಸರ್ವರ ಬಾಳಲ್ಲಿ ಬೆಳಕನ್ನು ಮೂಡಿಸಿದ ಮಹಾನ ಚೇತನದ ಸನ್ನಿಧಿಗೆ ನೀವೊಮ್ಮೆ ಬರಬೇಕು. ಬಂದು ಅಲ್ಲಿಯ ಭೂಸ್ಪರ್ಶ ಮಾಡಿದಾಗ ಉಂಟಾಗುವ ಅನುಭೂತಿಯನ್ನು ನಾವು ಹುಲು ಮಾನವರು ಏನು ತಾನೇ ವರ್ಣಿಸಿಯೆವು? ಅದನ್ನು ಅನುಭವಿಸಿಯೇ ತೀರಬೇಕು. ದೇವರ ಮಹಾತ್ಮರ ಸನ್ನಿಧಿ ಎಂದರೆ ಅದೇ ತಾನೆ? ನಮಗೆ ಅದರ ಮಹಿಮೆ ಅರಿವಾಗುತ್ತದೆ, ಆದರೆ ಅದು ಕೈಗೆ ಸುಲಭವಾಗಿ ಎಟುಕಲಾರದು.


ಹಚ್ಚ ಹಸಿರಿನ ವೈಭವ ಮಲೆನಾಡಿನ ಕಾಡನ್ನು ನೆನಪಿಸುತ್ತದೆ. ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಘಾಟಬೋರಳ ಎಂಬ ಸಂತ ಮಹಾಂತರ ಸನ್ನಿಧಿ, ಜಗದಲಿರುವ ನಿಸರ್ಗ ರಮಣೀಯ ಕ್ಷೇತ್ರವಾಗಿದೆ. ಇದು ಘಾಟ ಪ್ರದೇಶದಲ್ಲಿದೆ, ಅದಕ್ಕಾಗಿ ಇದನ್ನು ಘಾಟಬೋರಳ ಎಂದು ಕರೆಯುತ್ತಾರೆ. ಶರಣರಾದ ಶ್ರೀ ಶಂಕರ ದಾಸಿಮಯ್ಯನವರು ತಪಃಗೈದ ಪುಣ್ಯ ಕ್ಷೇತ್ರವಿದು. ಇಲ್ಲಿಯ ಶಂಕಕಲಿಂಗ ದೇವಸ್ಥಾನವು ಆಸ್ತಿಕರ ಪುಣ್ಯ ಕ್ಷೇತ್ರವೆನಿಸಿದೆ. ಇದು ಆಸ್ತಿಕರ ಆಡಂಬೋಲಾಗಿದೆ. ಇಲ್ಲಿ ಹನ್ನೊಂದನೆಯ ಶತಮಾನದಲ್ಲಿ ಗವಿ ನಿರ್ಮಾಣಗೊಂಡಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಇಲ್ಲಿಯ ಪುಷ್ಕರಣಿ ರಮಣೀಯವಾಗಿದೆ. ಅದರ ಜಲ ತೆಂಗಿನ ಹಾಲಿನಂತೆ ಪರಿಶುಭ್ರವಾಗಿದೆ. ಇದು ಹಸಿರು ಹೊದ್ದುಕೊಂಡ ಗುಡ್ಡಗಾಡಿನ ಮಧ್ಯೆ ಇದ್ದು, ಇಲ್ಲಿಯೇ ಶರಣ ಶಂಕರ ಮಹಾತ್ಮರು ಬಹುಕಾಲ ವೃತ ಅನುಷ್ಠಾನ ಕೈಗೊಂಡಿದ್ದರು ಎಂದು ಇಲ್ಲಿಯ ಅರ್ಚಕರಾದ ಶ್ರೀ ಬಸವರಾಜ ಸ್ವಾಮಿಗಳು ಹೇಳುತ್ತಾರೆ.


ಇದಕ್ಕೆ ಹಿಂದಿನ ಕಾಲದಲ್ಲಿ 'ಶಂಕರ ತಳ' ಎಂದು ಕರೆಯುತ್ತಿದ್ದರು. ಇಲ್ಲಿ ದೇವಸ್ಥಾನದ ಮುಂದೆ ಸುಮಾರು ಅರ್ಧ ಶತಮಾನದ ಹಿಂದೆ  ರಾತ್ರಿ ಹೊತ್ತಿನಲ್ಲಿ ನಾಗಮಣಿ ಧರಿಸಿದ ನಾಗಲಿಂಗೇಶ್ವರರು ಪ್ರತ್ಯಕ್ಷವಾಗಿದ್ದರು ಎಂದು ಅರ್ಚಕರು ಹೇಳುತ್ತಾರೆ. ಇಲ್ಲಿಯ ಪವಿತ್ರ ಪುಷ್ಕರಣಿಯ ಜಲ ಎಂದಿಗೂ ಬತ್ತಿಲ್ಲದಿರುವುದೇ ಒಂದು ವಿಶೇಷ ವಿಸ್ಮಯದ ಸಂಗತಿಯಾಗಿದೆ.


'ಜಲಲ ಜಲಧಾರೆ ಹರಿದಿದೆ ಇಲ್ಲಿ ನೋಡು ಬಾ ಭಕ್ತ

ಶರಣಕುಲ ದೇವ ಶ್ರೀ ಶಂಕರ ದಾಸಿಮಾರ್ಯರ

ನಾಗಮಣಿಯ ಸ್ಪರ್ಶ ಪಡೆಯಲು ಬಾ ಇಲ್ಲಿ ನೀನು

ಜಗಕೆ ಸನ್ಮಂಗಳವನ್ನುಂಟು ಮಾಡುವ ದೇವನಿಲ್ಲಿ

ಇಹನು ದಿವ್ಯತೆಯ ಯೋಗ ಅನುಷ್ಠಾನಗೈಯ್ಯುತ!


ಜನಕೋಟಿ ಕಷ್ಟಕಾರ್ಪಣ್ಯ ಪರಿಹರಿಸೋ ಶಂಭೋ

'ಶಂಕರ ತಳ' ಇಹುದಿಲ್ಲಿ ಬೆಳಕಿನ ಕಿರಣದಾ ಸೊಬಗು

ಘನವೆತ್ತ ಶ್ರೀ ಘಾಟಬೋರಳವೇ ವಿರಳ ಕ್ಷೇತ್ರವಿದು

ಶಿವ ಪಾವತಿ ಸನ್ನಿಧಿಯಿದು ಪುಣ್ಯದ ಪಾವನ ನೆಲವು

ದೇವನೊಲುಮೆ ಜೀವಜಲವಿಲ್ಲಿ ಹರಿದಿದೆನೋಡು!


ಭಾದ್ರಪದ ಶುದ್ಧ ಪ್ರತಿಪದೆಗೆ ನಡೆಯುತಿದೆ ಇಲ್ಲಿ

ಶಂಕರಲಿಂಗ ಜಾತ್ರಾ ಮಹೋತ್ಸವದ ಸಡಗರ

ನೂತನ ರಥೋತ್ಸವದ ಭವ್ಯ ಭಕ್ತಾರ್ಪಣೆಯ

ಸಂತಸದ ಶುಭ ಅಮೃತ ಗಳಿಗೆಯ ಸವಿಯಿರಿ

ದೇವನೊಲುಮೆಗೆ ಪಾತ್ರರಾಗಿರೆಲ್ಲ ಭಕ್ತಗಣವೇ!


ಇಲ್ಲಿಯೇ ದಿವ್ಯ ತೇಜದ ಶಂಕರ ದಾಸಿಮಯ್ಯರು

ಅನುಷ್ಠಾನಗೈದು ಶಿವೈ ಸಾಗರ ಪವಿತ್ರ ಮುತ್ತನು

ಭಕ್ತಿ ರೂಪದಿ ನೀಡಿ ಗೌರಿಶಂಕರ ಆಲಯವನು

ದೇವ ಸನ್ನಿಧಿಗೆ ಅರ್ಪಿಸಿದ ಶಿಖರ ಕಳಸವಿಲ್ಲಿದೆ!


ಭಕ್ತಗಣ ಬಂದು ಭಕ್ತಿಯ ನೈವೇದ್ಯ ಅರ್ಪಿಸಿ

ಜಗದ ಶಾಂತಿಗಾಗಿ ಪ್ರಾರ್ಥಿಸಿರಿ ಸಿರಿ ದೈವಕೆ

ಎಲ್ಲ ಕೊಡೋ ಕೊಡುಗೈ ದೊರೆ ಅವನಲ್ಲವೆ?

ಮತ್ತೇಕೆ ಚಿಂತೆ ಮನ ಮಂದಾರವಾಗಲಿ ಸದಾ!


      

ಇತಿಹಾಸ ಪ್ರಸಿದ್ಧವಾದ ಈ ಕ್ಷೇತ್ರದಲ್ಲಿ ಸದಾ ಧಾರ್ಮಿಕ  ಆಧ್ಯಾತ್ಮಿಕ, ಸಾಂಸ್ಕೃತಿಕ, ಶರಣರ ವಚನಗಳ ಗಾಯನ, ಸಂಗೀತ, .......ಹೀಗೆ ವಿವಿಧ ಕಾರ್ಯಕ್ರಮಗಳು ಜರುಗುತ್ತಲೇ ಇರುತ್ತವೆ.


ಆಧ್ಯಾತ್ಮಿಕ ಕ್ಷೇತ್ರ ವಾಗಿರುವ ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ಆಗಮಿಸಿದ ಹಾಗೂ ಇಲ್ಲಿ ಬಂದು ಶ್ರದ್ಧೆಯಿಂದ ಪೂಜಿಸಿದ ಭಕ್ತರಿಗೆ ಅವರ ಜೀವನದಲ್ಲಿ ಬಂದ ಕಷ್ಟಗಳು ಮಂಜಿನಂತೆ ಕರಗಿ, ಸುಖ ಶಾಂತಿ ನೆಮ್ಮದಿ ನೆಲೆಸಿವೆ. ಸಂತಾನ ಭಾಗ್ಯವನ್ನು ಕೂಡ ಅನೇಕರಿಗೆ ಕರುಣಿಸಿದ ಧಾರ್ಮಿಕ ಕ್ಷೇತಗಳಲ್ಲಿ ಇದು ಮುಂಚೂಣಿಯಲ್ಲಿದೆ. ಇಲ್ಲಿ ಅನೇಕ ವಿರಕ್ತಮಠಗಳ ಸ್ವಾಮಿಗಳು ಕೂಡ ಅನುಷ್ಠಾನ ಕೈಗೊಂಡಿದ್ದಾರೆ.1990 ರಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯರು ಪಟ್ಟದೇವರು ಇಲ್ಲಿ  ಮೂರು ತಿಂಗಳವರೆಗೆ ಅನುಷ್ಠಾನ ಕೈಗೊಂಡಿರುವುದು ಎಲ್ಲ ಭಕ್ತರ ಭಾಗ್ಯವಾಗಿದೆ. ಈ ಸಂದರ್ಭದಲ್ಲಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವವೂ ನೇರವೇರಿತು. ಅಲ್ಲದೇ ಇಷ್ಟಲಿಂಗಪೂಜೆಯನ್ನು ಕೂಡ ಸರ್ವರ ಸಹಕಾರದಿಂದ ಕೈಗೊಳ್ಳಲಾಯಿತು. ಇದೇ ಸುಸಂದರ್ಭದಲ್ಲಿ ಒಂದು ನೂರಾ ಐವತ್ತೊಂದು ಮಹಾಸ್ವಾಮಿಗಳ ಪಾದ ಪೂಜೆಯನ್ನು ಭಕ್ತರು ನೆರವೇರಿಸಿ ಪ್ರಸಾದ ವಿತರಿಸಿ ಪಾವನರಾದರು.



ಶ್ರೀ ಶಂಕರಲಿಂಗ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷರು ಡಾ.ಪ್ರಕಾಶ್ ಪಾಟೀಲರು, ಕಾರ್ಯದರ್ಶಿಗಳು ಬಸವರಾಜ  ಸ್ವಾಮಿಗಳು ಹಾಗೂ ಬಸವರಾಜ ಹಂಪಗೋಳ ಅವರಾಗಿರುತ್ತಾರೆ. ಇವರು ವೀರಭದ್ರಪ್ಪ ಹಂಪಗೋಳ ಅವರ ಮನೆತನದವರಾಗಿ ದ್ದಾರೆ. ಆಗ ಶಾಸಕರಾಗಿದ್ದ ಡಾ.ಶಿವಲಿಂಗಪ್ಪ ಪಾಟೀಲ ಹುಮ್ನಾಬಾದ ಅವರು ಶ್ರಮವಹಿಸಿ ಮುಖ್ಯರಸ್ತೆಯಿಂದ ದೇವಸ್ಥಾನದ ಮುಂಭಾಗದವರೆಗೆ ಸಿಸಿ ರಸ್ತೆಯನ್ನು ಶಾಸಕರ ಅನುದಾನದಿಂದ ನಿರ್ಮಿಸಿದ್ದಾರೆ. ಮಾಜಿ ಸಚಿವರಾದ ಡಾ. ರಾಜಶೇಖರ್ ಪಾಟೀಲರು ಕೂಡ ಕ್ಷೇತ್ರದ ಅಭಿವೃದ್ಧಿಗೆ ಸದಾ ಕಾಲ ಅನುದಾನ ನೀಡಿದ್ದಾರೆ.


ಬೀದರ ಜಿಲ್ಲಾ ಪಂಚಾಯತಿಯಿಂದಲೂ ಅನುದಾನ ಬಂದಿದೆ. ಇಷ್ಟೆಲ್ಲ ಇದ್ದರೂ ಕೂಡ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಸರಕಾರ ಒದಗಿಸಿಕೊಡಬೇಕು. ಕ್ಷೇತ್ರಕ್ಕೆ ಬಂದ ಭಕ್ತರಿಗೆ ಉಳಿದುಕೊಳ್ಳಲು ಯಾತ್ರಿ ನಿವಾಸ ನಿರ್ಮಾಣ ಹಾಗೂ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತ್ತು ವಿದ್ಯುತ್ ಸೌಲಭ್ಯ, ಉದ್ಯಾನವನವನ್ನು ನಿರ್ಮಿಸಲು ಸರಕಾರವು  ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಿ ಶಂಕರಲಿಂಗ ದೇವರ ಕೃಪೆಗೆ ಪಾತ್ರವಾಗುತ್ತದೆ ಎಂಬ ನಂಬಿಕೆ ಇಲ್ಲಿಯ ಭಕ್ತರದಾಗಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಸ್ಥಾನವನ್ನು ಸ್ಮರಣೀಯಗೊಳಿಸಬೇಕು, ಇದಕ್ಕೆ ಎಲ್ಲರ ಇಚ್ಚಾಶಕ್ತಿ ಬಹಳ ಮುಖ್ಯವಾಗಿದೆ. ಸರಕಾರಕ್ಕೆ ಜನಪ್ರತಿನಿಧಿಗಳು ಕ್ಷೇತ್ರದ ಮಹಿಮೆ, ಇದರ ಮಹತ್ವ, ಹಿನ್ನೆಲೆಯನ್ನು ಮನಗಾಣಿಸಿಕೊಟ್ಟು ಕ್ಷೇತ್ರವನ್ನು ಐತಿಹಾಸಿಕ ಪರಂಪರೆಗೆ ಸೇರಿಸಬೇಕು ಹಾಗೂ ಸರಕಾರದಿಂದ ಹೆಚ್ಚಿನ ಅನುದಾನ ಪಡೆದು ಅಭಿವೃದ್ಧಿಪಡಿಸಲು ಸಹಕರಿಸಬೇಕೆಂದು ಈ ಮೂಲಕ ಸಕಲ ಭಕ್ತರು ಮನವಿ ಮಾಡಿಕೊಳ್ಳುತ್ತಾರೆ. ಇದು ಗಡಿ ಪ್ರದೇಶವಾದ್ದರಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ಸರ್ಕಾರಗಳು ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂಬ ಮನವಿ ನಮ್ಮದಾಗಿದೆ.



ಸಮಾಜದ ಮುಖಂಡರಾದ ವಸಂತಕುಮಾರ ಬಣಗಾರ ಅವರು ಹೇಳುತ್ತಾರೆ, 'ನಾನು ನೋಡಿರುವಂತೆ ಈ ಸ್ಥಳವು ತುಂಬಾ ವಿಶೇಷವಾಗಿದೆ ಹಾಗೂ ಅದ್ಭುತವಾಗಿದೆ, ನೋಡಲು ಎರಡು ಕಣ್ಣುಗಳು ಸಾಲದು, ಅಂಥ ರಮಣೀಯ ಸ್ಥಳ ಇದು. ಮಲೆನಾಡಿನ ನಯನ ಮನೋಹರ ದೃಶ್ಯಗಳನ್ನು ಇಲ್ಲಿ ನೀವು ಕಣ್ತುಂಬಿಕೊಳ್ಳಬಹುದು. ಇದುವೇ ಘಾಟಬೋರಳನ ವೈಶಿಷ್ಠ್ಯವಾಗಿದೆ.  ಒಮ್ಮೆಯಾದರೂ ಈ ಸ್ಥಳಕ್ಕೆ ಬಂದು ಶಂಕರ್ ಲಿಂಗ ದೇವಸ್ಥಾನ ಮತ್ತು ಶರಣ ಶ್ರೀ ಶಂಕರ ದಾಸಿಮಯ್ಯನವರ ದರ್ಶನ ಪಡೆಯಬೇಕು. ಬಣಗಾರ ಸಮಾಜದ ಆರಾಧ್ಯದೈವ ಶ್ರೀ ಶಂಕರಲಿಂಗ ದೇವರ ಗುಡಿ ಹಾಗೂ ಶರಣ ಮುಕುಟ ಶ್ರೀ ದಾಸಿಮಯ್ಯನವರ  ಅನುಷ್ಠಾನಗೈದ ಪುಣ್ಯ ಸುಕ್ಷೇತ್ರವೇ ಇದು. ಇಂಥ ಪುಣ್ಯ ಕ್ಷೇತ್ರಕ್ಕೆ ಎಲ್ಲರೂ  ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಅಭಿವೃದ್ಧಿಗೆ ಎಲ್ಲರೂ ತನು ಮನ ಧನ ರಿಂದ ಸಹಕರಿಸಬೇಕು. ನೂತನ  ರಥೋತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು' ಎಂದು ಅವರು ಹೇಳಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಶ್ರೀ ವಸಂತಕುಮಾರ ಬಣಗಾರ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ 8073898471 ಇರುತ್ತದೆ.   


ದೇವರ ಮಹಿಮೆ ಅಪಾರ ಅದನು ತಿಳಿದು ಭಕ್ತಿಭಾವದಿಂದ ನಡೆದರೆ ಬಾಳು ಸಂತಸ ಸೌಭಾಗ್ಯಗಳ ಕಡಲಾಗುತ್ತದೆ.  



- ಶ್ರೀನಿವಾಸ ಜಾಲವಾದಿ, ಸುರಪುರ

9886563179 / 8105693179


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top