ಪಣಿಯಾಡಿಯಲ್ಲಿ ಅನಂತವ್ರತ ಹಾಗೂ ಕದಳಿ ಪೂಜೆ

Chandrashekhara Kulamarva
0


ಉಡುಪಿ: ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತವ್ರತ ಕಾರ್ಯಕ್ರಮ ದೇವಾಲಯದ ತಂತ್ರಿಗಳವರಾದ ಹಯವದನ ತಂತ್ರಿ, ವಾದಿರಾಜ ತಂತ್ರಿ, ಪ್ರದಾನ ಅರ್ಚಕ ರಾಘವೇಂದ್ರ ಭಟ್, ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಅನಂತ ವಿಪ್ರ ಬಳಗದವರ ಸಹಕಾರದಿಂದ ವೈಭವದಿಂದ ಜರುಗಿತು.


ವಿಶೇಷವಾಗಿ ಅನಂತ ಕದಳಿ ಸಮರ್ಪಣೆ ಸೇವೆ ಭಕ್ತಾದಿಗಳವರಿಂದ ನಡೆಯಿತು. ಕದಿರು ಕಟ್ಟುವುದು, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಕಲ್ಪೋಕ್ತ ಕಲಶ ಪೂಜೆ, ವಿಷ್ಣು ಸಹಸ್ರನಾಮ ಪಾರಾಯಣ,ಲಕ್ಷ್ಮೀ ಶೋಭಾನೆ, ಮಹಾಪೂಜೆ, ವ್ರತಧಾರಿಗಳ ಕೈಗೆ ಅನಂತ ಸೂತ್ರದಾರ ಕಟ್ಟುವ ಪ್ರಕ್ರಿಯೆ, ಅನ್ನಸಂತರ್ಪಣೆ, ವಿಶೇಷ ಭಜನೆ, ಹೂವಿನ ಪೂಜೆ, ರಂಗಪೂಜೆ, ಅಷ್ಟಾವಧಾನ ಸೇವೆ ನಡೆಯಿತು. ಭಕ್ತರು ಬೆಳಗ್ಗೆನಿಂದ ರಾತ್ರಿಯ ತನಕ ಶ್ರೀ ಕ್ಷೇತ್ರ ಸ್ವಾಮಿಯ ದರ್ಶನ ಪಡೆದು ವಿಶೇಷ ಕದಳಿ ಪ್ರಸಾದ ಸ್ವೀಕರಿಸಿದರು.



Post a Comment

0 Comments
Post a Comment (0)
To Top