ಏತಡ್ಕ: ಹಿಂದೂ ಧರ್ಮ ಉಳಿಯಲು ಬೇಕಾದ ಶಕ್ತಿಯನ್ನು ಧಾರ್ಮಿಕ ಕೇಂದ್ರಗಳು ನೀಡುತ್ತವೆ. ಆದ ಕಾರಣ ಅದನ್ನು ಯಾರು ನಡೆಸುತ್ತಾರೆ ಎನ್ನುವುದು ಮುಖ್ಯ ಅಲ್ಲ. ದೇವಾಲಯಗಳು ವಿಶ್ವಾಸಿಗಳ ಸಂಪತ್ತು. ಈ ಸಂಪತ್ತಿನ ವೃದ್ಧಿಗೆ ಭಕ್ತರು ನಿರಂತರವಾಗಿ ದೇವಸ್ಥಾನಗಳಲ್ಲಿ ಭಾಗವಹಿಸುವ ಅವಶ್ಯಕತೆ ಇದೆ. ನಮ್ಮ ಸಂಪ್ರದಾಯದ ಆಚರಣೆ ಮನೆಯೊಳಗೆ ಇರಿಸಿ ಬಾಹ್ಯವಾಗಿ ಒಂದೇ ಕುಟುಂಬದಂತೆ ಧರ್ಮ ರಕ್ಷಣೆ, ವೃದ್ಧಿಗೆ ತೊಡಗಿಸಿಕೊಳ್ಳಬೇಕು. ವೈಯ್ಯಕ್ತಿಕ ಪಾಪ ಕ್ಷಯವಾಗಿ ದೇವಾಲಯಗಳ ಆಂತರಿಕ ಶಕ್ತಿ ಹೆಚ್ಚುತ್ತದೆ. ಆ ಪ್ರದೇಶ ಸಮೃದ್ಧವಾಗುತ್ತದೆ ಎಂದು ಬ್ರಹ್ಮ ಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ಅವರು ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ 25ರ ಸಿದ್ಧತಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಉದ್ಯಮಿ ಶ್ರೀ ವಸಂತ ಪೈ ಬದಿಯಡ್ಕ ಇವರು ಬ್ರಹ್ಮ ಕಲಶೋತ್ಸವ ಸಂದರ್ಭದ ವಿಶಿಷ್ಟ ಯೋಜನೆ 'ಶಿವಾರ್ಪಣಂ' ನ ಮನವಿ ಪತ್ರ ಬಿಡುಗಡೆ ಮಾಡಿದರು.
"ದೇವರ ಕೆಲಸ ಯಾರು ಮಾಡುತ್ತಾರೋ ಅವರಿಗೆ ಸಕಲ ಶ್ರೇಯಸ್ಸು ಖಚಿತ. ಅಲ್ಲಿ ಎಚ್ಚರ ತಪ್ಪಿದರೆ ಅಪಾಯ, ಅಸುಖ ಕಟ್ಟಿಟ್ಟ ಬುತ್ತಿ. ದೇವರ ಸಾಮ್ರಾಜ್ಯದಲ್ಲಿ ಎಲ್ಲವು ನಮಗೆ ಉಚಿತವಾಗಿರುವಾಗ ಭಕ್ತರು ತಮ್ಮ ಸೇವೆಯು ಖಚಿತವಾಗಿದೆಯೇ ಎಂಬುದಾಗಿ ಆಗಾಗ ಪರೀಕ್ಷಿಸಿಕೊಳ್ಳಬೇಕು. ಬ್ರಹ್ಮಕಲಶೋತ್ಸವ ಎನ್ನುವುದು ಆ ಊರಿಗೊಂದು ಸುವರ್ಣಾವಕಾಶ" ಎಂಬುದಾಗಿ ಮುಖ್ಯ ಅತಿಥಿಗಳಾಗಿ ನುಡಿದರು.
ಎಣ್ಮಕಜೆ ಪಂಚಾಯತ್ ಸದಸ್ಯ ಶ್ರೀ ನರಸಿಂಹ ಪೂಜಾರಿಯವರು "ಹುಂಡಿ ಕರಂಡ " ಬಿಡುಗಡೆ ಮಾಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಶ್ರೀ ಸುಮಿತ್ ರಾಜ್ ಸೆಪ್ಟೆಂಬರ್ 1ರಂದು ನಡೆಯಲಿರುವ ಮನೆ ಮನೆ ಭೇಟಿ ಮಹಾ ಅಭಿಯಾನದ ಮಾಹಿತಿ ನೀಡಿದರು.
ಆರಂಭದಲ್ಲಿ ಶ್ರೀಮತಿ ಶಶಿಪ್ರಭಾ ವರುಂಬುಡಿ ಪ್ರಾರ್ಥನೆ ಮಾಡಿದರು. ಸಮಿತಿಯ ಖಜಾಂಜಿ ವೈ.ವಿ ಸುಬ್ರಹ್ಮಣ್ಯ ಸ್ವಾಗತಿಸಿದರು. ಡಾ.ವೈ.ವಿ.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಪತ್ತಡ್ಕ ಗಣಪತಿ ಭಟ್ ಶುಭಾಶಂಸನೆ ಗೈದರು. ಸಮಿತಿ ಅಧ್ಯಕ್ಷ ಮತ್ತು ಆಡಳಿತ ಮೊಕ್ತೇಸರರಾದ ವೈ.ಶಾಮ ಭಟ್ಟರು ಸಭೆ ಸರ್ವರ ಸಹಕಾರಕೋರಿದರು. ಸಮಿತಿಯ ಗೌರವ ಅಧ್ಯಕ್ಷ ಡಾ.ಸುಬ್ರಯ ಭಟ್ಟರು ಉಪಸ್ಥಿತರಿದ್ದರು.
ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿ ದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಕಾಶ್ ವೈ ಎಚ್ ಧನ್ಯವಾದಗೈದರು.
'ಶಿವಾರ್ಪಣಂ' ಬ್ರಹ್ಮ ಕಲಶೋತ್ಸವ ಸಂದರ್ಭದ ವಿಶಿಷ್ಟ ಯೋಜನೆ: ಈ ಯೋಜನೆಯಲ್ಲಿ ನೇರವಾಗಿ ಶಿವನನ್ನು ಧ್ಯಾನಿಸಿ, ಸಂಕಲ್ಪಿಸಿ ಅರ್ಪಿಸುವ ಸರಳ ಯೋಜನೆ. ನೇರ ದೇವರಿಗೆ ಅರ್ಪಣೇ .ಯಾವುದೇ ಮಧ್ಯವರ್ತಿಗಳಿಲ್ಲ. ದೇವರೂ ಹಾಗೇ ಮಧ್ಯವರ್ತಿಗಳಲ್ಲದೇ ನಮಗೇ ಪುಣ್ಯ ತಥಾಸ್ತು ಎನ್ನುವ ಯೋಜನೆ ಇದು ಎಂಬುದಾಗಿ ಶ್ರೀ ರವೀಶ ತಂತ್ರಿಗಳು ಕೊಂಡಾಡಿದರು.
ಶಿವ ಪಂಚಾಕ್ಷರಿ ಜಪಲಿಪಿ ಯಜ್ಞ, ಪ್ರಸಾದ ವಿತರಣೆಗೆ ಬಟ್ಟೆಯ ಚೀಲ ಮಾಡುವುದು, ಹೂ ಮಾಲೆ ರಚನೆ, ತರಕಾರಿ ಬೆಳೆ ಯೋಜನೆ, ಶುದ್ಧ ಬೆರಣಿಯಿಂದ ಭಸ್ಮ ತಯಾರಿ ಮುಂತಾದ ಚಟುವಟಿಕೆಯೇ 'ಶಿವಾರ್ಪಣೆ' ಎನಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ