ಸ್ವಚ್ಛತೆ ಸಾಮೂಹಿಕ ಜವಾಬ್ದಾರಿಯಾಗಲಿ : ಕೆಕೆಆರ್ ಡಿಬಿ ಉಪಕಾರ್ಯದರ್ಶಿ ಪ್ರಮೀಳಾ
ಕಲ್ಬುರ್ಗಿಯ ಸಂಗಮೇಶ್ವರ ಮಹಿಳಾ ಮಂಡಲದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿಮಹಿಳಾ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡುತ್ತಾ ಸ್ವಚ್ಛತೆಯಲ್ಲಿ ನಿರತರಾದ ಮಹಿಳಾ ಸೇವಾ ಕಾರ್ಯಕರ್ತರನ್ನು ಗೌರವಿಸುವ ಮೂಲಕ ಅವರ ವೃತ್ತಿಗೆ ಗೌರವ ನೀಡಿದ ವಿದಾಯಕ ಕಾರ್ಯಕ್ರಮ ಇದಾಗಿದ್ದು ಸ್ವತಹ ಪ್ರಧಾನಮಂತ್ರಿಗಳು ಪೌರ ಕಾರ್ಮಿಕರ ಪಾದಪೂಜೆ ಮಾಡಿ ಅವರ ಕರ್ತವ್ಯವನ್ನು ಗೌರವಿಸಿ ಕೆಲಸದ ಮಹತ್ವ ಮತ್ತು ಆದರ್ಶವನ್ನು ಭಾರತೀಯರಿಗೆ ತೋರಿಸಿಕೊಟ್ಟಿದ್ದಾರೆ. ಸ್ವಚ್ಛತೆ ಮಾಡುವ ಕೆಲಸ ಕೇವಲ ಪೌರಕಾರ್ಮಿಕರದ್ದು ಎಂಬ ಕಲ್ಪನೆ ತೊಲಗಿ ಅದು ಸಾಮೂಹಿಕ ಜವಾಬ್ದಾರಿಯಾದಾಗ ಮಾತ್ರ ಸ್ವಚ್ಛ ಭಾರತದ ಕನಸು ಸಾಕರಗೊಳ್ಳುವುದು.
ನಮ್ಮ ಕಸ ನಮ್ಮ ಹೊಣೆ ಎಂದು ತಿಳಿದು ವಿಲೇವಾರಿ ಮಾಡಿದರೆ ಪೌರಕಾರ್ಮಿಕರ ಕೆಲಸ ಹಗುರವಾಗುತ್ತದೆ. ಸಂಗಮೇಶ್ವರ ಮಹಿಳಾ ಮಂಡಲವು ಸಾಂಸ್ಕೃತಿಕ ಸಾಮಾಜಿಕ ಮತ್ತು ಮಹಿಳಾ ಆಪ್ತ ಸಮಾಲೋಚನೆಯನ್ನು ನಡೆಸಿ ಸಮಾಜದಲ್ಲಿ ಉತ್ತಮ ಕೆಲಸ ಮಾಡಿ ಆದರ್ಶ ಸಂಸ್ಥೆ ಎಂದು ಹೆಸರು ಪಡೆದಿದೆ. ಇದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಾದ ಶಾರದಾ ಬಾಯಿ, ಗುಜ್ಜಮ್ಮ ಪ್ರಭಾವತಿ ಸಾಬಮ್ಮ, ರುಕ್ಮಿಣಿ, ಬಸಮ್ಮ ಮತ್ತು ಶಾರಮ್ಮ ಇವರಿಗೆ ಸೀರೆ, ಕುಪ್ಪಸ, ಶಾಲು ನೀಡಿ ಗೌರವಿಸಲಾಯಿತು. ಸಂಗಮೇಶ್ವರ ಮಹಿಳಾ ಮಂಡಲದ ಅಧ್ಯಕ್ಷರಾದ ವೈಶಾಲಿ ದೇಶಮುಖ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ 78ನೇ ಸ್ವಾತಂತ್ರ್ಯೋತ್ಸವವನ್ನು ವಿನೂತನವಾಗಿ ಆಚರಿಸಲು ಪೌರಸೇವಾ ಕಾರ್ಮಿಕರಿಗೆ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸನ್ಮಾನಿತರ ಪರವಾಗಿ ಶ್ರೀಮತಿ ರುಕ್ಮಿಣಿ ಮಾತನಾಡಿ ನಮ್ಮ ಸೇವೆಯನ್ನು ಗುರುತಿಸಿ ಈ ರೀತಿಯಾಗಿ ಸನ್ಮಾನಿಸಿದ್ದು ಇದೇ ಪ್ರಥಮ ಬಾರಿ ಯಾಗಿದ್ದು ಇದರಿಂದ ಅತೀವ ಸಂತಸವಾಗಿದ್ದು ಸಾರ್ವಜನಿಕರು ನಮ್ಮಂತವರ ಕೆಲಸವನ್ನು ಗೌರವಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ನೀಲಾಂಬಿಕಾ ಮಹಾಗಾವಂಕರ್ ದೇಶಭಕ್ತಿ ಗೀತೆಗೆ ನೃತ್ಯ ಸಾದರಪಡಿಸಿದರು. ಲಕ್ಷ್ಮೀಶಂಕರ್ ಜೋಶಿ, ಸುಷ್ಮಾ ನವಣಿ ಮತ್ತು ಸುನಿತಾ ಝಳಕಿ ಕರ್ ದೇಶಭಕ್ತಿ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಶಾಂತಾಭೀಮಸೇನರಾವ್, ಸಾವಿತ್ರಿ ಚೌಕ, ಶಾಂತಾ ಪಸ್ತಾಪುರ್, ಕಾವ್ಯ ಹೊನಗುಂಟಿಕರ್ ವನಿತಾ ಗುತ್ತೇದಾರ್, ಶಕುಂತಲಾ, ರಾಜೇಶ್ವರಿ, ಮತ್ತಿತರರು ಇದ್ದರು. ಸಂಧ್ಯಾ, ಹೊನಗುಂಟಿಕರ್ ಸ್ವಾಗತಿಸಿ ಧನ್ಯವಾದವಿತ್ತರು. ಶ್ರುತಿ ಸಗರ್ ಪ್ರಾರ್ಥನಾ ಗೀತೆ ಹಾಡಿದರು. ಶಾರದಾ ಅರುಣಾಚಲ್ ಭಟ್ ನಿರೂಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ