ದೇವರಂತೆ ಪೂಜೆಗೊಂಡು ಮೆರೆಯುತ್ತಿರುವ ಶ್ರೀ ರಾಘವೇಂದ್ರಸ್ವಾಮಿಗಳು. ಮಾಧ್ವ ಸಂಪ್ರದಾಯದ ಗುರುಗಳಾಗಿದ್ದವರು. ಮಧ್ವಾಚಾರ್ಯರಿಂದ ಹನ್ನೊಂದನೆಯವರಾದ ವಿಭುದೇಂದ್ರ ತೀರ್ಥರಿಂದ ಆರಂಭಗೊಂಡ ಮಠ ರಾಘವೇಂದ್ರರ ವ್ಯಕ್ತಿತ್ವ ಪ್ರಭಾವದಿಂದ ಶ್ರೀ ರಾಘವೇಂದ್ರ ಮಠವಾಯಿತು ತಮ್ಮ 50 ವರ್ಷಗಳ ಪೀಠಾಧಿಪತ್ಯದಲ್ಲಿ ವಿಫುಲವಾದ ಆಧ್ಯಾತ್ಮ ಶಕ್ತಿಯ ಕೇಂದ್ರವಾಗಿ, ಸಾಮಾಜಿಕ ಶುದ್ಧಿಗೆ ಪ್ರಚೋದಕರಾಗಿ ಮೆರೆದರು. .
ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವವೆಂದರೆ ಮಂತ್ರಾಲಯದ ಕಳೆ ಮತ್ತಷ್ಟು ಹೆಚ್ಚುತ್ತದೆ. ಆರಾಧನೋತ್ಸವದಲ್ಲಿನ ಸಪ್ತ ರಾತ್ರೋತ್ಸವದಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಪ್ರಮುಖ ಘಟ್ಟಗಳು.ಮೃತ್ತಿಕೆ, ಮಂತ್ರಾಕ್ಷತೆ, ಸರ್ವಸಿದ್ಧಿ ಯಂತ್ರ, ಪರಿಮಳ ಪ್ರಸಾದ ಮಂತ್ರಾಲಯದ ಹೆಗ್ಗುರುತುಗಳು.
ಲೋಕಕಲ್ಯಾಣಕ್ಕಾಗಿಯೇ ಅವತಾರ ಮಾಡಿ, ಭಗವಂತನ ಅತ್ಯದ್ಭುತ ಅವತಾರಕ್ಕೆ ಕಾರಣರಾಗಿ ನಂಬಿ ಬಂದ ಭಕ್ತರನ್ನು ಉದ್ಧಾರದ ಹೆದ್ದಾರಿಯತ್ತ ಕೊಂಡೊಯ್ಯುತ್ತ “ಜಗದ್ಗುರು”ಗಳು ಎಂಬ ಪದಕ್ಕೆ ಅನ್ವರ್ಥನಾಮರಾಗಿ ಕಲಿಯುಗ ಕಲ್ಪವೃಕ್ಷ ಕಾಮಧೇನು ಸದೃಶರಾದ, ಅಗಮ್ಯ ಮಹಿಮರಾದ ಶ್ರೀರಾಘವೇಂದ್ರಗುರುಸಾರ್ವಭೌಮರ 353ನೇ ಆರಾಧನಾಮಹೋತ್ಸವ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಬೆಂಗಳೂರಿನ ಹರಿದಾಸ ನ್ಯಾಷನಲ್ ಫೌಂಡೇಷನ್‌ರವರು ಪ್ರಕಟಿಸಿರುವ ಎಂ.ಎಸ್. ಪ್ರಕಾಶ್ ಕೌಶಿಕ್ ಸಂಪಾದಿಸಿರುವ ‘ಗುರುವಿನಾಲಯ ಮಂತ್ರಾಲಯ’ ಭಕ್ತಿ ಪರಂಪರೆಯ ಕೀರ್ತಿ ಕಳಶ ಶ್ರೀರಾಘವೇಂದ್ರಸ್ವಾಮಿಗಳ ಜೀವನ ಚರಿತ್ರೆ - ಪರಂಪರೆ ಮತ್ತು ಶ್ರೀಮಠದ ಸಮಗ್ರ ಚಿತ್ರಸಂಪುಟವಾಗಿದೆ.
ಚಿತ್ರಸಂಪುಟದಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರಗುರುಸಾರ್ವಭೌಮರ ಆದರ್ಶ ಜೀವನ, ದ್ವೈತ ಚಂದ್ರೋದಯ ಶ್ರೀಮಧ್ವಾಚರ‍್ಯರು- ಮಧ್ವಪರಂಪರೆ - ಸಂಸ್ಥಾನದ ವಿಭೂತಿ ಪುರುಷ ಶ್ರೀ ವಿಜಯೀಂದ್ರರು - ಪೂರ್ವಾಶ್ರಮ ಷಾಷ್ಠಿಕ ವಂಶ ಗೌತಮ ಗೋತ್ರದ ಬೀಗಮುದ್ರೆ ಮನೆತನದ ಹಿನ್ನೆಲೆ – ಜೀವನ ವರ್ಣಚಿತ್ರ ಶಾಲೆ - ಸಹಸ್ರಮಾನದ ಸೂರ್ಯ ಶ್ರೀ ಗುರುರಾಜರಿಂದ ರಚಿತವಾದ ಗ್ರಂಥಗಳು- ಅಮರ ಸಂದೇಶ – ಅವರ ನೆಲೆವೀಡು ಮಂತ್ರಸಿದ್ಧಿಯ ಕ್ಷೇತ್ರ ಮಂತ್ರಾಲಯದ ಒಳನೋಟ- ತಪೋಭೂಮಿ - ಬೃಂದಾವನದ ಭವ್ಯ ಸ್ವರೂಪ - ವೈಶಿಷ್ಟö್ಯ- ಶ್ರೀಸಂಸ್ಥಾನದ ಪೂಜಾ ವಿಗ್ರಹಗಳು- ಭಂಡಾರ- ಅಪೂರ್ವ ರಾಯಸಗಳು- ರಾಯರ ಬೃಂದಾವನ ಪ್ರವೇಶೋತ್ಸವ ಆರಾಧನೆ- ಶ್ರೀ ಗುರುಸಾರ್ವಭೌಮರನ್ನು ಸೇವಿಸುವ ವಿಧಾನ- ಶಾಸನಗಳು – ಗುರುಪರಂಪರಾ ಸ್ತುತಿ –ಗುರುಭಕ್ತ ಶಿರೋಮಣಿಗಳ ಬಗ್ಗೆ ಅಪರೂಪದ ಮಾಹಿತಿಗಳಿವೆ .
ಅಂತೆಯೇ ಕರೆದಲ್ಲಿಗೆ ಬಂದು ಅನುಗ್ರಹಿಸುತ್ತಿರುವ ಕರುಣಾಳು ಶ್ರೀರಾಯರ ಮೃತ್ತಿಕಾ ಬೃಂದಾವನಗಳ ಸಚಿತ್ರ ಮಾಹಿತಿ - ರಾಯರ ನಂತರ ಪೀಠವನ್ನಾಳಿದ ಮಹೋನ್ನತರು- ಅಂತರAಗ ಭಕ್ತ ಸಖರು - ಹರಿದಾಸ ಸಾಹಿತ್ಯಕ್ಕೆ ಗುರುರಾಜರ ಕೊಡುಗೆ - ಪರಮಪಾವನ ಚೇತನ ಗುರುರಾಜರನ್ನು ಕೊಂಡಾಡಿದ ಹರಿದಾಸರು – ವಿದೇಶಗಳಲ್ಲಿ ರಾಯರ ಮಹಿಮೆ – ಕಲಾವಿದನ ಕಣ್ಣಲ್ಲಿ ರಾಯರು - ಅಪೂರ್ವ ದೃಶಕಲಾ ವೈಭವದ ಗುರು ನುಡಿ ನಮನ ಈ ಕೃತಿಯ ಹೆಗ್ಗಳಿಕೆಯಾಗಿದೆ.
354 ವರ್ಷದಿಂದ ಸಕಲ ಸಜ್ಜನ ಭಕ್ತರಿಗೆ ಶ್ರೀಮೂಲರಾಮ ದೇವರ ದಿವ್ಯ ಮಂಗಳ ಸ್ವರೂಪ ಔಪಾಸನೆಯ ಪುಣ್ಯರಾಶಿಯನ್ನು ಮಾನವಾಭ್ಯುದಯಕ್ಕೆ ವಿನಿಯೋಗಿಸುತ್ತಿರುವ ಶ್ರೀ ಗುರುರಾಜರ ಪಾದಕಮಲಗಳಿಗೆ ಅರ್ಪಿಸಿದ ಪಾವನ ಪದ ಪೂಜೆ ಇದಾಗಿದೆ ಎಂದರೆ ತಪ್ಪಲ್ಲ. ನಡೆದಾಡುವ ರಾಯರೆಂದೇ ಖ್ಯಾತರಾಗಿದ್ದ ಪೂಜ್ಯ ಸುಶಮೀಂದ್ರ ತೀರ್ಥರ 80ನೇ ವರ್ಧಂತಿಯ ಸಂದರ್ಭದಲ್ಲಿ ಈ ಪುಸ್ತಕ ಪ್ರಕಟನೆಗೆ ಅಂಕುರಾರ್ಪಣೆಯಾಗಿ ಇದೀಗ ಶ್ರೀ ಮಧ್ವ ವೇದಾಂತ ಸಾಮ್ರಾಜ್ಯದ 55ನೇ ಪೀಠಾಧಿಪತಿಗಳಾಗಿ ವಿರಾಜಮಾನರಾಗಿರುವ ನವಮನ್ವಂತರದ ನವಹರಿಕಾರ, ಗುರುವಿ ಕಲ್ಪನೆಯ ಸಾಕಾರ ಮರ‍್ತಿ ಅದಮ್ಯ ಚೇತನ ಡಾ. ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಸರ್ವಾಂಗ ಸುಂದರವಾಗಿ ಮೂಡಿಬಂದಿರುವ ಈ ಗುರುಚಿತ್ರ ಕೋಶವು ಎಲ್ಲಾ ಭಕ್ತಾಭಿಮಾನಿಗಳ ನಿವಾಸಗಳಲ್ಲಿ ಇರಲೇಬೇಕಾದ ಕೃತಿರತ್ನ ಎಂಬುದು ಸಂಪಾದಕರ ಅಭಿಮತವಾಗಿದೆ. .
ಕೃತಿಯ ಹೆಸರು: ಗುರುವಿನಾಲಯ ಮಂತ್ರಾಲಯ
ಸಂಪಾದನೆ : ಎಂ.ಎಸ್.ಪ್ರಕಾಶ್ ಕೌಶಿಕ್ ಪ್ರಕಾಶಕರು: ಹರಿದಾಸ ನ್ಯಾಷನಲ್ ಫೌಂಡೇಷನ್, ಬೆಂಗಳೂರು
ಪುಟ: 415 ಬೆಲೆ : ರೂ 1000/- ವಿವರಗಳಿಗೆ: 98801 81803
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ