ವಿದ್ವತ್ ಪಿಯು ಕಾಲೇಜು - “ವಿಜ್ಞಾನ - ವಿಸ್ಮಯ ಮತ್ತು ಕುತೂಹಲ”-ವಿಮರ್ಶಾ ಕಾರ್ಯಗಾರ

Upayuktha
0


ಮಂಗಳೂರು:
78ನೇ ಸ್ವಾತಂತ್ರೊತ್ಸವದ ಪ್ರಯುಕ್ತ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜ್‌ನಲ್ಲಿ “ವಿಜ್ಞಾನ-ವಿಸ್ಮಯ ಮತ್ತು ಕುತೂಹಲ” ಎಂಬ ಶೀರ್ಷಿಕೆಯಡಿಯಲ್ಲಿ ಇದೇ ಬರುವ ಆಗಸ್ಟ್ 15 ರ ಬೆಳಗ್ಗೆ 11.30ಕ್ಕೆ ಕಾಲೇಜಿನ ಸಭಾಂಗಣ ದಲ್ಲಿ ವಿನೂತನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಜಗತ್ತಿನ ವಿಸ್ಮಯಕ್ಕೆ ಒಳಗಣ್ಣು ತೆರೆದಿಟ್ಟು, ಅನುಭವಿಸಿ, ಅರ್ಥೈಸಿ, ವಿವೇಚನೆಗೊಳಪಡಿಸುವ ವಿಶೇಷ ಸಂವಾದ ಇದಾಗಿದ್ದು, ಯುವ ಮನಸ್ಸುಗಳ ಮೇಲೆ ವೈಜ್ಞಾನಿಕ ವಿಶ್ಲೇಷಣೆಯ ಪ್ರಭಾವ ಬೀರಿ ಊಹೆಗೆ ನಿಲುಕದ ಪ್ರಕೃತಿಯ ವಿಸ್ಮಯವನ್ನು ಅರ್ಥೈಸಿಕೊಳ್ಳುವ ಒಂದು ವಿಶೇಷ ಪ್ರಯತ್ನ ಇದಾಗಿದೆ. ಸಾಂಪ್ರದಾಯಿಕ ಪಾಠ-ಪ್ರವಚನ ಮತ್ತು ಪರೀಕ್ಷಾ ಪದ್ಧತಿಗಿಂತ ವಿಭಿನ್ನವಾಗಿ ಆಲೋಚಿಸುವ ಪ್ರಯತ್ನ ಇದಾಗಿದೆ. 


ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ. ಮಂಡಗಳಲೆ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಾಮಚಂದ್ರ ಎಮ್.ಎಸ್. ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರತಾಪ್ ದೊಡ್ಡಮನೆ ಇವರು ತಮ್ಮ ಸುದೀರ್ಘ ಶೈಕ್ಷಣಿಕ ಅನುಭವದ ಆಧಾರದ ಮೇಲೆ ವಿಜ್ಞಾನದ ವಿಸ್ಮಯವನ್ನು ವ್ಯಾಖ್ಯಾನಿಸಲಿದ್ದಾರೆ. ಈ ಅಪರೂಪದ ಕಾರ್ಯಗಾರಕ್ಕೆ ಆಸಕ್ತ ಪ್ರೌಢಶಾಲಾ ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. 

ಭಾಗವಹಿಸಲು ಆಸಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 7618718791/ 9483942186


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top