ಉಜಿರೆ: ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Upayuktha
0


ಉಜಿರೆ: "ನಮ್ಮ ಭಾರತದ ಜನಸಂಖ್ಯೆ 145 ಕೋಟಿಗೂ ಅಧಿಕವಾಗಿದ್ದು ಚೀನಾವನ್ನು ಹಿಂದಿಕ್ಕಿದೆ. ಚಾರ್ಲ್ಸ್ ಡಾರ್ವಿನ್ ಹೇಳಿದಂತೆ ಅತಿಯಾದ ಜನಸಂಖ್ಯೆಯಿಂದಾಗಿ ಉಳಿಯುವಿಕೆ ಕಷ್ಟವಾದಾಗ, ಅವರಲ್ಲಿ ಯಾರು ಬಲಿಷ್ಠನು ಹಾಗೂ ಕೌಶಲವನ್ನು ಹೊಂದಿರುತ್ತಾನೋ ಆತ ಮಾತ್ರ ಈ ಸಮಾಜದಲ್ಲಿ ಉಳಿಯಲು ಸಾಧ್ಯ" ಎಂದು ಉಜಿರೆ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹೇಳಿದರು.


ಕಾಲೇಜಿನ ಇಂದ್ರಪ್ರಸ್ಥ ಆಡಿಟೋರಿಯಂನಲ್ಲಿ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಸಹಯೋಗದಲ್ಲಿ ಆ.8ರಂದು ಆಯೋಜಿಸಲಾಗಿದ್ದ ವಾಣಿಜ್ಯ ಕ್ಯಾಂಪಸ್ ಅಸೋಸಿಯೇಷನ್’ನ 2024-25ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


"ಮನುಷ್ಯನ ಜೀವನ ಎಂದರೆ ಏಳು- ಬೀಳು ಸಹಜ. ಆದರೆ ಬಿದ್ದಾಗ ಹೇಗೆ ಎದ್ದು ನಿಂತು ಧೈರ್ಯದಿಂದ ಕಷ್ಟವನ್ನು ಎದುರಿಸುತ್ತಾನೆ ಎಂಬುದು ಬಹುಮುಖ್ಯವಾಗಿರುತ್ತದೆ. ನಿಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸುವಲ್ಲಿ ನಮ್ಮ ಕಾಲೇಜು ಬಹುಮುಖ್ಯ ಪಾತ್ರವನ್ನು ವಹಿಸಲಿದ್ದು, ಮುಂದಿನ ಭವಿಷ್ಯದ‌ ಒಳಿತಿಗಾಗಿ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಿ" ಎಂದು ಅವರು ಕರೆ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪರೀಕ್ಷಾ ಅಕಾಡೆಮಿಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಮತ್ತು ಸಾಫ್ಟ್‌ಸ್ಕಿಲ್ಸ್ ಟ್ರೈನರ್ ಎಂ.ಆರ್. ಚಂದನ್ ರಾವ್, "ನಿಮ್ಮ ಜೀವನದಲ್ಲಿ ವಾಣಿಜ್ಯ ಎಷ್ಟು ಮುಖ್ಯ ಮತ್ತು ಅದನ್ನು ಹೇಗೆ ಬಳಸಬಹುದು ಎಂಬುದನ್ನು ಅರಿಯಿರಿ. ಶ್ರದ್ಧೆ ಮತ್ತು ಕೌಶಲಗಳನ್ನು ಬಳಸಿಕೊಂಡು ನಿಮ್ಮ ವ್ಯವಹಾರ ಜ್ಞಾನವನ್ನು ವಿಸ್ತರಿಸಿ. ಆಗ ಯಶಸ್ಸು ಸದಾ ನಿಮ್ಮೊಟ್ಟಿಗಿರುತ್ತದೆ" ಎಂದು ಕಿವಿಮಾತು ಹೇಳಿದರು.


ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ, 2022-23ನೇ ಸಾಲಿನ ರಾಜ್ಯಮಟ್ಟದ ಉತ್ತಮ ರಾಷ್ಟ್ರೀಯ ಸೇವಾಯೋಜನಾ ಘಟಕದ ಆಫೀಸರ್ ಪ್ರಶಸ್ತಿ ಪಡೆದ ಡಾ. ಲಕ್ಷ್ಮಿನಾರಾಯಣ ಕೆ.ಎಸ್. ಹಾಗೂ ಇತ್ತೀಚೆಗೆ ಪಿಎಚ್.ಡಿ. ಪದವಿ ಪಡೆದ ಭಾನುಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. 2023 -24ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ವ್ಯವಹಾರ ಆಡಳಿತ ವಿಭಾಗದ ದ್ವಿತೀಯ ಪದವಿ ವಿದ್ಯಾರ್ಥಿ ನಿಹಾಲ್ ಸಿಂಗ್ ಪಿ. ಅವರು ಪ್ರಸ್ತುತ ವ್ಯಾಪಾರ ಬೆಳವಣಿಗೆ ಮತ್ತು ನಿರ್ವಹಣೆಯ ವಿಕಸನದ ಅಗತ್ಯಗಳ ಕುರಿತು ಬರೆದಿರುವ ‘ಟ್ರೆಂಡ್ ಮ್ಯಾಟ್ರಿಕ್ಸ್– ಮಂತ್ಲಿ ಡೈಜೆಸ್ಟ್ ಆಫ್ ಬ್ಯುಸಿನೆಸ್ ಟ್ರೆಂಡ್ಸ್’ ಪುಸ್ತಕವನ್ನು ಪ್ರಾಂಶುಪಾಲರು ಬಿಡುಗಡೆಗೊಳಿಸಿದರು.


ವಾಣಿಜ್ಯ ಕ್ಯಾಂಪಸ್ ಅಸೋಸಿಯೇಶನ್ ನೂತನ ಪದಾಧಿಕಾರಿಗಳಿಗೆ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ. ಪ್ರಮಾಣವಚನ ಬೋಧಿಸಿದರು. ಅಸೋಸಿಯೇಶನ್ ಕಾರ್ಯದರ್ಶಿ ಸಹನಾ ಡೋಂಗ್ರೆ 2023-24ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ವಾಣಿಜ್ಯ ವಿಭಾಗದ ಭಿತ್ತಿಪತ್ರಿಕೆ ‘ವಾಣಿಕ’ ಅನಾವರಣಗೊಳಿಸಲಾಯಿತು.


ಕಾಲೇಜಿನ ಆಡಳಿತಾಂಗ ಕುಲಸಚಿವೆ ಡಾ. ಶಲೀಫ್ ಕುಮಾರಿ, ವಾಣಿಜ್ಯ ನಿಕಾಯದ ಡೀನ್ ಹಾಗೂ ವ್ಯವಹಾರ ಆಡಳಿತ ವಿಭಾಗ ಮುಖ್ಯಸ್ಥೆ ಶಕುಂತಲಾ, ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ಪ್ರಿಯಾ ಕುಮಾರಿ, ವಾಣಿಜ್ಯ ಕ್ಯಾಂಪಸ್ ಅಸೋಸಿಯೇಶನ್ ಸಂಯೋಜಕರಾದ ಗುರುರಾಜ್ ಮತ್ತು ವಿನುತ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸುಷ್ಮಿತಾ ಮತ್ತು ತಂಡದವರು ಪ್ರಾರ್ಥಿಸಿದರು. ವಾಣಿಜ್ಯ ಕ್ಯಾಂಪಸ್ ಅಸೋಸಿಯೇಶನ್ ಸಿ.ಇ.ಒ. ದೀಕ್ಷಿತ ಸ್ವಾಗತಿಸಿ, ಸಿ.ಎಫ್.ಒ. ಶ್ರೀಗಣೇಶ್ ವಂದಿಸಿದರು. ಧಾರಿಣಿ ಮತ್ತು ಧರಿತ್ರಿ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top